ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಅಬಿಮಾನಿಗಳ ಒಕ್ಕೂಟದಿಂದ ಸತ್ಯಾಗ್ರಹದ ಎಚ್ಚರಿಕೆ
ಮಾಜಿ ಸಚಿವ ರಮೇಶ ಜಾರಕಿಹೋಳಿ ಒರ್ವ ಹಠವಾದಿಗಳು, ಇವರಿಗೆ ಇನ್ನೊಂದು ಹೆಸರೆ ಹಠವಾದಿ ಸಾಹುಕಾರ ಅದಲ್ಲದೆ ಎಲ್ಲ
ಜನಾಂಗದವರನ್ನು ಒಂದೆ ದೃಷ್ಟಿಯಿಂದ ನೋಡುತ್ತಾ ಎಲ್ಲರೂ ನಮ್ಮವರೆ ಅನ್ನುವದೆ ಜಾರಕಿಹೋಳಿ ಕುಟುಂಬವೆಂದು ಗೋಕಾಕದ ಪ್ರವಾಸಿ ಮಂದಿರದಲ್ಲಿ ಮಾದಿಗ ಮತ್ತು ಮುಸ್ಲಿಂ ಸಮಾಜದವರಿಂದ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ
ದಲಿತ ಮುಖಂಡ ರವಿ ಕಡಕೋಳ ಇವರು ಮಾತನಾಡಿ ರಾಜ್ಯದ ಎಲ್ಲ ರಾಜಕೀಯ ಪಕ್ಷದವರ ಕುಮ್ಮಕ್ಕಿನಿಂದಲೆ ಇವತ್ತು ಮುಖ್ಯಮಂತ್ರಿ ಸ್ಥಾನಕ್ಕೆರುವಂತಹ ರಮೇಶ ಜಾರಕಿಹೋಳಿಯವರನ್ನು ಕೆವಲ ಒಂದು ಹೆಣ್ಣನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡಿ ಅವರಿಗೆ ತೆಜೊವದೆ ಮಾಡಲು ಹೊರಟಿರುವ ಶಂಡ ನಾಯಕಾ ನಿಜವಾದ ನಾಯಕನಾಗಿದ್ದರೆ ರಮೇಶ ಜಾರಕಿಹೋಳಿ ವಿರುದ್ದ ರಾಜಕೀಯವಾಗಿ ಹೊರಾಟಮಾಡಲಿ ಅದನ್ನು ಬಿಟ್ಟು ಕುತಂತ್ರದಿಂದ ಮಾಡಿ ನಾಯಕ ನಾಯಕನಲ್ಲ ಆತನೊಬ್ಬ ಶಂಡ ನಾಯಕನೆಂದು ಆಕ್ರೋಶ ವ್ಯಕ್ತಪಡಿಸಿದರು,
ಅದಕ್ಕಾಗಿ ಬರುವ ಶುಕ್ರವಾರ ದಿ:19ರಂದು ಅಬಿಮಾನಿಗಳ ಒಕ್ಕೂಟದಿಂದ 7 ದಿನಗಳವರೆಗೆ ದರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು, ಅಷ್ಟರೊಳಗೆ ಮುಖ್ಯಮಂತ್ರಿಯವರು ರಮೇಶ ಜಾರಕಿಹೋಳಿಯವರಿಗೆ ಮತ್ತೆ ಸಚಿವ ಸ್ಥಾನ ಕೊಡದೆ ಇದ್ದಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ಮಾಡುವುದಾಗಿ ಪತ್ರಿಕಾಗೊಷ್ಟಿ ಮೂಲಕ ತಿಳಿಸಿದ್ದಾರೆ,
ಇದೆ ಸಂದರ್ಭದಲ್ಲಿ ಇನ್ನೊರ್ವ ದಲಿತ ಮುಖಂಡ ಬಸವರಾಜ ಕಾಡಾಪುರ ಮಾತನಾಡಿ 11 ದಿನಗಳಿಂದ ಮಾದ್ಯಮ ಮತ್ತು ಪತ್ರಿಕಾ ಮುಂದೇನು ಬರದೆ ರಮೇಶ ಜಾರಕಿಹೋಳಿಯವರ ದೂರು ದಾಖಲಿಸಿದ ನಂತರ ಪ್ರತ್ಯಕ್ಷವಾಗಿದ್ದನ್ನು ನೋಡಿದರೆ ಅವಳ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡದ ಜೊತೆಯಲ್ಲಿ ಷಡ್ಯಂತ್ರ ಇರುವುದು ಎಲ್ಲರಿಗೂ ಗೊತ್ತಾಗುತ್ತಲಿದೆ ಎಂದರು,
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕಾಡಪ್ಪ ಮೇಸ್ತ್ರಿ,ವಿಠ್ಠಲ ಸಣ್ಣಕ್ಕಿ,ಸತೀಶ ಹರಿಜನ ,ದೀಪಕ ಇಂಗಳಗಿ ಮತ್ತು ಮುಸ್ಲಿಂ ಮುಖಂಡರುಗಳಾದ ಜಾವೇದ ಗೋಕಾಕ,ಅಬ್ದುಲಗಪಾರ ಖಾಜಿ ಇನ್ನೂಳಿದವರು ಉಪಸ್ಥಿತರಿದ್ದರು,
ಗೋಕಾಕ