Breaking News

ಜ್ಞಾನಕಾಗಿ ನಮ್ಮ ಬದುಕನ್ನು ಮೀಸಲಾಗಿ ಇಡಬೇಕು : ಸಂಗಮೇಶ ಸ್ವಾಮಿಗಳು.

Spread the love

ನದಿ ಇಂಗಳಗಾವ : ಒಳ್ಳೆಯ ಎರಡು ಮಾತುಗಳನ್ನು ಮಾತನಾಡಿದರೆ ನಾವುಗಳು ಈ ಜಗ್ಗತನ್ನೆ ಗೆಲ್ಲಬಹುದು. ಮಾತುಗಳಲ್ಲಿ ಅದ್ಬುತವಾದ ಶಕ್ತಿ ಇದೆ.

ಮಾತು ಬಲವ ಮಾಣಿಕ್ಯ ತರುತ್ತಾನೆ,ಆದರೆ ಮಾತು ಬಾರದೆ ಇರುವವನು ಮನೆಗೆ ಜಗಳ ತಗೆದುಕೊಂಡ ಬರುತ್ತಾನೆಂದು ಶ್ರೀ ಸಂಗಮೇಶ್ವರ ದೇವರು ಹೇಳಿದರು.ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ನಿಮಿತ್ಯ ಶರಣ ಸಂಸ್ಕ್ರತಿ ಉತ್ಸವದಲ್ಲಿ ಮಾತನಾಡುತ್ತಾ. ಸರಿಯಾದ ಮಾರ್ಗ ತೋರಿಸುವುದೆ ಶರಣ ಸಂಸ್ಕೃತಿ ಉತ್ಸವ ಅದಕ್ಕಾಗಿ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಮುಖ್ಯವಾಗಿ ಜ್ಞಾನಬೇಕು. ಜ್ಞಾನಕ್ಕೆ ಬೆಲೆ ಕಟ್ಟಲಾರದು ಹಣ. ಬಂಗಾರ. ಭೂಮಿ ಎಲ್ಲವು ಸಂಪಾದನೆ ಮಾಡಬಹುದು. ಆದರೆ ಜ್ಞಾನ ಮಾತ್ರ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಂಪತ್ತು ಬರುತ್ತದೆ ಹೋಗುತ್ತಿರುತ್ತವೆ. ಅದು ಕ್ಷಣಿಕಮಾತ್ರ ಆದರೆ ಶಾಸ್ವತ ಸಂಪತ್ತು ಜ್ಞಾನ ಸಂಪತ್ತು ಯಾವಾಗಲೂ ಶಾಶ್ವತವಾಗಿರುತ್ತದೆ.

ಬದುಕಿನಲ್ಲಿ ಸುಖ, ದುಃಖ ಸಾಕಷ್ಟು ಇರುತ್ತದೆ. ನಮ್ಮ ಶರೀರ ಹೂವಿನಂತಿರುತ್ತದೆ. ಜಗ್ಗತ್ತಿನಲ್ಲಿ ಜ್ಞಾನಕ್ಕಾಗಿ ಬಡಿದಾಡಿದವರು ಯಾರು ಇಲ್ಲವೆ ಇಲ್ಲ. ಮನುಷ್ಯ ಸಣ್ಣ ಸಣ್ಣ ವಸ್ತುಗಳಿಗಾಗಿ ಹೋರಾಟ ಮಾಡುತ್ತಿದ್ದಾನೆ ಆದರೆ ಜ್ಞಾನಕ್ಕೆ ನಾವುಗಳು ಯಾಕೆ ಹೋರಾಟ ಮಾಡಬಾರದು ಎಂದು ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಜ್ಞಾನಕ್ಕಿಂತ ಮೀಗಿಲಾದದ್ದು ಯಾವುದ್ದು ಇಲ್ಲ.

  • ಅದಕ್ಕೆ ಸಾಕಷ್ಟು ರೂಪವಿದ್ದು ಒಳ್ಳೆ ಗುಣವು ಹೊಂದಿರುತ್ತದೆ, ನಮ್ಮಲ್ಲಿ ಪರಮಾತ್ಮನನ್ನು ಅರಿವಿನ ಜ್ಞಾನವಿಲ್ಲ. ಜ್ಞಾನ ಮನುಷ್ಯನಿಗೆ ಸ್ವ- ದೈರ್ಯ ನೀಡುತ್ತದೆ. ಜ್ಞಾನಕಾಗಿ ನಮ್ಮ ಬದುಕನ್ನು ಮೀಸಲಾಗಿ ಇಡಬೇಕು.

ಈ ಸಂದರ್ಭದಲ್ಲಿ ಅಥಣಿಯ ಡಿವೈಎಸ್ ಪಿ ಎಸ್ ವ್ಹಿ ಗಿರೀಶ. ಅಥಣಿ ಸಿಪಿಐಗಳಾದ ಶಂಖರಗೌಡ ಬಸನಗೌಡರ. ಮುರಘೇಶ ಚನ್ನಣ್ಣವರ. ಪಿಎಸ್ ಐ ಲಕ್ಷ್ಮೀ ಮಡಿಗೇರಿ ವೇದಿಕೆ ಮೇಲೆ ಆಸಿನರಾಗಿದ್ದು ಪೂಜ್ಯರಿಂದ ಸತ್ಕರಿದರು


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *