Breaking News

ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹೆಚ್ಚಿನ ಚಿಕಿತ್ಸೆಗೆ ಸಿದ್ದೇಶ್ವರ ಸ್ವಾಮೀಜಿ ನಿರಾಕರಣೆ.

Spread the love

ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹೆಚ್ಚಿನ ಚಿಕಿತ್ಸೆಗೆ ಸಿದ್ದೇಶ್ವರ ಸ್ವಾಮೀಜಿ ನಿರಾಕರಣೆ.

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ. ಶ್ರೀಗಳ ದರ್ಶನ ಪಡೆದು ಹೊರಬಂದ ಸಿಎಂ ಹಾಗೂ ಸಚಿವರಾದ ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ. ಸ್ವಾಮೀಜಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ರು. ಪ್ರಹ್ಲಾದ್ ಜೋಷಿ ಅವರ ಮೊಬೈಲ್ ಮೂಲಕ ಶ್ರೀ ಆರೋಗ್ಯ ವಿಚಾರಿಸಿದ್ರು. ಹೆಚ್ಚಿನ ಚಿಕಿತ್ಸೆ ಬಗ್ಗೆ ಪ್ರಧಾನಿ ಕೇಳಿದಾಗ ಶ್ರೀಗಳು ಕೈಮುಗಿದು ಧನ್ಯವಾದ ಹೇಳಿದ್ದಾರೆ..

ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹೆಚ್ಚಿನ ಚಿಕಿತ್ಸೆಗೆ ಸಿದ್ದೇಶ್ವರ ಸ್ವಾಮೀಜಿ ನಿರಾಕರಣೆ. ಮಾಡಿದ್ದಾರೆ. ಒಂದು ತಿಂಗಳಿಂದ ದ್ರವಾಹಾರದ ಮೇಲಿರುವ ಸಿದ್ದೇಶ್ವರ ಸ್ವಾಮೀಜಿ.

ಸಿದ್ದೇಶ್ವರ ಆರೋಗ್ಯ ವೈದ್ಯರಿಗೂ ಅಚ್ಚರಿ, ಚೇತರಿಕೆ ಕಾಣುತ್ತಿರೋ ಶ್ರೀ ಆರೋಗ್ಯ. ಬಿಪಿ, ಶುಗರ್, ನಾಡಿಮಿಡಿತ ಸೇರಿ ಆರೋಗ್ಯ ಸರಿಯಾಗಿದೆ. ನಾನು 80 ವರ್ಷ ದೇಹ ಸಾಥ್ ಕೊಟ್ಪಿದೆ… ನಾನು 80 ವರ್ಷ ಎಂದಿಟ್ಟುಕೊಂಡಿದ್ದೆ.

ಇನ್ನು ಎರಡ್ಮೂರು ವರ್ಷ ಹೆಚ್ಚಾಗಿದೆ, ಸಾಕಿನ್ನು ಅಂದಿರೋ ಸಿದ್ದೇಶ್ವರ ಸ್ವಾಮೀಜಿ. ಕನ್ನೇರಿಮಠದ ಶ್ರೀ ಬಳಿ ಹೇಳಿದ್ದನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ಹೇಳಿದ ಶ್ರೀಗಳು. ದೇಹಕ್ಕೆ ನೋವು ಆಗದಂತೆ ನೋಡಿಕೊಳ್ಳಿ ಅಷ್ಟೇ ಅಂದರು.

ಸಿಎಂ ಹಾಗೂ ಸಚಿವರಿಂದ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ
ರೋಗವೇನಿದ್ದರೂ ತನ್ನಿಂದ ತಾನೇ ವಾಸಿಯಾದ್ರೆ ಆಗಲಿ, ಇಲ್ಲವೇ ಬಿಡಲಿ‌‌ ಹೆಚ್ಚಿನ ಚಿಕಿತ್ಸೆ ಬೇಡಾ ಅಂತಾ ನಿರ್ಧರಿಸಿರುವ ಸಿದ್ದೇಶ್ವರ ಶ್ರೀ. ಔಷಧಿ ಕೊಡದಂತೆ ಹೇಳಿರೋ ಶ್ರೀ. ಮೊದಲಿಂದಲೂ ಕಾಯಿಲೆ ಬಂದಾಗ ಚಿಕಿತ್ಸೆ ತೆಗೆದುಕೊಳ್ಳದ ಶ್ರೀ.

ತನ್ನಿಂದ ತಾನೇ ರೋಗ ವಾಸಿ ಆಗ್ಬೇಕು ಅನ್ನೋದು ಸಿದ್ದೇಶ್ವರ ನಿಲುವು. ಮಿತ ಆಹಾರ,ತಮ್ಮ ನಿತ್ಯ ಕಾರ್ಯ ತಾವೇ ಮಾಡಿಕೊಳ್ಳುತ್ತಿದ್ದ ಸಿದ್ದೇಶ್ವರ ಶ್ರೀ. ವಿಭಿನ್ನ ಜೀವನ ಶೈಲಿ ರೂಡಿಸಿಕೊಂಡಿರೋ ಸಿದ್ದೇಶ್ವರ ಶ್ರೀ. ಹೆಚ್ಚಿನ ಚಿಕಿತ್ಸೆ ತೆಗೆದುಕೊಳ್ಳಿ ನಾವು ನಿಮ್ಮ ಜೊತೆಗೆ ಇರ್ತವೆ.

ಕೈಮುಗಿದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬೊಮ್ಮಾಯಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಮನವಿ. ಸಿದ್ದೇಶ್ವರ ಸ್ವಾಮೀಜಿ ಕೈಮುಗಿದು ಬೇಡಾ ಎಂದು ನಿರಾಕರಣೆ. ನಿನ್ನೆ ರಾತ್ರಿ ಭೇಟಿ ವೇಳೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಮನವಿ.

ಭಕ್ತರಿಗೆ ನಿತ್ಯ ಮಧ್ಯಾಹ್ನ 1ಕ್ಕೆ, ಸಾಯಂಕಾಲ 7ಕ್ಕೆ ಭಕ್ತರಿಗೆ ದರ್ಶನ ನೀಡುತ್ತಿರೋ ಸಿದ್ದೇಶ್ವರ ಸ್ವಾಮೀಜಿ. ಇಂದಿನಿಂದ

ಇಂದಿನಿಂದ ಭಕ್ತರಿಗೆ ಆನ್ಲೈನ್ ಮೂಲಕವೇ ದರ್ಶನ ವ್ಯವಸ್ಥೆ. ಭಕ್ತರು ಯಾರೂ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಬರಬೇಡಿ ಎಂದು ಕಿರಿಯ ಸ್ವಾಮೀಜಿ ಬಸವಲಿಂಗ ಸ್ವಾಮೀಜಿ ಮನವಿ…

ಜನದಟ್ಟಣೆಯಿಂದಾಗಿ ಪೊಲೀಸರಿಗೆ ಟ್ರಾಫಿಕ್ ನಿಯಂತ್ರಿಸೋದು ಸಮಸ್ಯೆ ಆಗುತ್ತೆ. ಸಿದ್ದೇಶ್ವರ ಸ್ವಾಮೀಜಿಯವರ ಆನ್ಲೈನ್ ದರ್ಶನ ವ್ಯವಸ್ಥೆ. ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಣೆ.

ನಿನ್ನೆ ಸಿಎಂ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಿದ್ದೇಶ್ವರ ಸ್ವಾಮೀಜಿ ದರ್ಶನ ವೇಳೆ ಪೋನ್ ಕರೆ ಮೂಲಕ ಶ್ರೀ ಆರೋಗ್ಯ ವಿಚಾರಣೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡೋದಾಗಿ ಶ್ರೀಗೆ ಹೇಳಿದಾಗಲೂ ಕೈಮುಗಿದು ಬೇಡಾ ಎಂದು ಧನ್ಯವಾದ ತಿಳಿಸಿದ್ದಾರೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *