Breaking News

ನೌಕರಿ ಸೇರಿದ ನಂತರ ಸಮಾಜದಲ್ಲಿ ಧ್ವನಿ ಇಲ್ಲದ ಜನರ ಪರ ಕೆಲಸ ಮಾಡಿ : ಸತೀಶ ಜಾರಕಿಹೋಳಿ

Spread the love

ನೌಕರಿ ಸೇರಿದ ನಂತರ ಸಮಾಜದಲ್ಲಿ ಧ್ವನಿ ಇಲ್ಲದ ಜನರ ಪರ ಕೆಲಸ ಮಾಡಿ : ಸತೀಶ ಜಾರಕಿಹೋಳಿ

ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯ ಇನ್ನಷ್ಟು ವಿಸ್ತರಣೆ

ಘಟಪ್ರಭ: ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸ್ಸಿನಂತೆ ಹಲವು ಸಮಾಜಮುಖಿ ಚಟುವಟಿಕೆ ಹಮ್ಮಿಕೊಂಡಿದ್ದು, ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಮೂಲಕ ಇನ್ನಷ್ಟು ಅದನ್ನು ವಿಸ್ತರಿಸುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಸತೀಶ್‌ ಜಾರಕಿಹೊಳಿ ಫೌಂಡೇಶನ್ ನಿಂದ ಘಟಪ್ರಭ ಸೇವಾದಳಲ್ಲಿ ನಡೆಯುತ್ತಿರುವ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸೇರಬಯಸುವ ಯುವಕರಿಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರಬಯಸುವ ಯುವಕರಿಗೆ ತರಬೇತಿ ನಿಡುವುದಷ್ಟೇ ಅಲ್ಲದೇ ಅವರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ತರಬೇತಿ ಪಡೆದು ಮನೆಗೆ ಹೋಗುವ ಯುವಕರಿಗೆ ಸೇನೆ ಮತ್ತು ಪೊಲೀಸ್ ಇಲಾಖೆಯ ಆಯ್ಕೆ ಪ್ರಕ್ರಿಯೆ ನಡೆಯುವವರೆಗೂ ವೈದ್ಯರ ಸಲಹೆಯಂತೆ ಅವರಿಗೆ ಪೌಷ್ಟಿಕ ಆಹಾರದ ಖರ್ಚನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗುವುದು ಎಂದು ತಿಳಿಸಿದರು.

ಕಾರಣ ಶಿಬಿರಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬೇಕು. ನಿಮಗೆ ಪೌಷ್ಟಿಕ ಆಹಾರ, ದೈಹಿಕ ಹಾಗೂ ಪರೀಕ್ಷಾ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿ ಬದುಕು ಕಟ್ಟಿಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದರು.

ಇಲ್ಲಿ ಕಲಿತು ಸೇನೆ, ಪೊಲೀಸ್ ಇಲಾಖೆಗೆ ಸೇರಿದವರು ಸಮಾಜದಲ್ಲಿ ಧ್ವನಿ ಇಲ್ಲದ ಜನರ ಪರ ಕೆಲಸ ಮಾಡಬೇಕು. ಹೀಗೆ ಎಲ್ಲ ವಲಯದಲ್ಲೂ ಸಮಾನತೆಯ ಚಿಂತನೆಗಳು ಆರಂಭವಾದರೆ ಬುದ್ಧ, ಬಸವ, ಅಂಬೇಡ್ಕರ್ ಆಶಯದ ಸಮ ಸಮಾಜ ಕಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಮಾತನಾಡಿ, ಸೇನಾ ಹಾಗೂ ಪೊಲೀಸ್ ತರಬೇತಿ ನೀಡುವುದು ಸತೀಶ್‌ ಜಾರಕಿಹೊಳಿಯವರ ಬಹು ದಿನಗಳ ಕನಸಾಗಿತ್ತು. ಈ ತರಬೇತಿ ಮೂಲಕ ಅದು ನನಸಾಗಿದೆ ಎಂದು ಸ್ಮರಿಸಿದರು.
ಟಾರ್ಗೆಟ್ ಕೋಚಿಂಗ್ ಸೆಂಟರ್‌ನ ಪ್ರಕಾಶ್ ಮೇತ್ರಿ ಮಾತನಾಡಿ, ಬೇರೆಲ್ಲ ರಾಜಕಾರಣಿಗಳಿಗಿಂತ ಸತೀಶ್ ಜಾರಕಿಹೊಳಿಯವರು ವಿಭಿನ್ನ ವ್ಯಕ್ತಿತ್ವದವರು. ಇಲ್ಲಿ ತರಬೇತಿಗೆ ಆಗಮಿಸಿದ ಎಲ್ಲರಿಗೂ ಉಚಿತವಾಗಿ ತರಬೇತಿ ನೀಡುವುದರ ಜೊತೆಗೆ, ಉಚಿತವಾಗಿ ಸ್ಟಡಿ ಮೆಟೀರಿಯಲ್ ಕೊಟ್ಟಿದ್ದಾರೆ. ಇಂತಹ ಕೆಲಸ ನಿಜಕ್ಕೂ ಮಾದರಿಯಾಗಿದೆ ಎಂದರು.

ದೈಹಿಕ ತರಬೇತಿ ನೀಡಿದ ನಿವೃತ್ತ ಸೈನಿಕ ಸುಭಾಷ್ ನಾಯಕ್ ಮಾತನಾಡಿ, ಇಂತಹ ತರಬೇತಿ ಉಚಿತವಾಗಿ ನೀಡುತ್ತಿರುವ ಸತೀಶ್ ಜಾರಕಿಹೊಳಿ ಫೌಂಡೇಶನ್ ಕೆಲಸ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರು, ಘಟಪ್ರಭ ಸೇವಾದಳದ ಸಿಬ್ಬಂದಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *