ಅಂಬೇಡ್ಕರ ಬಾವ ಚಿತ್ರ ತೆಗಿಸಿದಾತ ನ್ಯಾಯಾದೀಶ ಸ್ಥಾನಕ್ಕೆ ಅರ್ಹನಲ್ಲ : ಅರ್ಜುನ ಗಂಡವ್ವಗೋಳ
ಗೋಕಾಕ : ತಾಲೂಕಿನ ಘಟಪ್ರಭಾ ಪಟ್ಟಣ ಮೃತ್ತುಂಜಯ ಸರ್ಕಲ್ ನಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಅರ್ಜುನ ಗಂಡವ್ವಗೊಳ ನೇತೃತ್ವದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕೋರ್ಟ್ ಮುಖ್ಯ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡನ ಭಾವ ಚಿತ್ರಕ್ಕೆ ಚಪ್ಪಲಿ ಎಟು ಹಾಕುವ ಮೂಲಕ ಪ್ರತಿಬಟಿಸಿದರು.
ಈ ಸಂದರ್ಭದಲ್ಲಿ ಅರ್ಜುನ ಗಂಡವ್ವಗೋಳ ಮಾತನಾಡಿ ಈ ನ್ಯಾಯಾದೀಶನಾಗಿ ಈ ರೀತಿ ಮಾಡೊದು ಸರಿಯಲ್ಲ ಇತನು ನಿಜವಾಗಿ ಸಂವಿದಾನದ ಮೇಲೆ ಗೌರವವಿದ್ದರೆ ಸಂವಿಧಾನ ನೀಡಿದ ಬಾಬಾ ಸಾಹೇಬರ ಭಾವ ಚಿತ್ರ ತೆಗುಸುತ್ತಿರಲಿಲ್ಲ,ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈತನು ಧ್ವಜಾರೋಹಣದ ಸಂದರ್ಭದಲ್ಲಿ ಭಾರತರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ತೆಗೆದರೆ ಮಾತ್ರ. ಧ್ವಜಾರೋಹಣ ಮಾಡುವುದಾಗಿ ಹೇಳಿ ಬಾಬಾಸಾಹೇಬರನ್ನು ಮತ್ತು ಭಾರತ ದೇಶದ ಸಂವಿಧಾನವನ್ನು ಅವಮಾನ ಮಾಡಿದ್ದಾನೆ ಇಂತವರು ನ್ಯಾಯಾಧೀಶನ ಹುದ್ದೆಗೆ ಅರ್ಹರಲ್ಲ ಇಂತವರ ಮೇಲೆ ಸುಪ್ರಿಂ ಕೊರ್ಟ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ
ಘಟಪ್ರಭಾ ಪೋಲಿಸ ಠಾಣೆಯ ಸಿಪಿಐ ಮುಖಾಂತರ ಸುಪ್ರೀಂ ಕೋರ್ಟ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮೃತ್ಯುಂಜಯ ವೃತ್ತದ ವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀಮ ಆರ್ಮಿಯ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಹುಲಿ,ಕರ್ನಾಟಕ ಸಮತಾ ಸೈನಿಕ ದಳದ ಗೋಕಾಕ ತಾಲೂಕ ಅಲ್ಪಸಂಖ್ಯಾತರ ಅಧ್ಯಕ್ಷ ನಝೀರ ನಾಯಕವಾಡಿ. ಗೋಕಾಕ ತಾಲೂಕ ಅಧ್ಯಕ್ಷ. ಪ್ರಮೋದ ಮಹಿಂಗೋಳ. ಮೂಡಲಗಿ ತಾಲೂಕು ಅಧ್ಯಕ್ಷ ಗಣಪತಿ.ಕರೋಗೋಳ. ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜು ಸಾಂಗ್ಲಿಕರ. ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಶಿವರಾಜ ಮೋಗ್ಲಿ. ಅಜಿತ ರಾಮಪ್ಪಗೋಳ. ಹಾಗೂ ಇನ್ನೂ ಅನೇಕ ಸಂಘಟನೆಯ ಪದಾಧಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.