Breaking News

ಡಿ.26ರಂದು ಹಳೆ ಪಿಂಚಣಿ ಕುರಿತು ಸುವರ್ಣಸೌದದ ಎದುರು ಪ್ರತಿಭಟನೆ

Spread the love

ಡಿ.26ರಂದು ಹಳೆ ಪಿಂಚಣಿ ಕುರಿತು ಸುವರ್ಣಸೌದದ ಎದುರು ಪ್ರತಿಭಟನೆ

ಬಾದಾಮಿ: ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಡಿ.26ರಂದು ಬೆಳಗಾವಿಯ ಸುವರ್ಣಸೌಧದ ಎದುರು ಒಂದು ದಿನದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅನುದಾನಿತ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಎಸ್ ಬಿ ಪವಾಡಶೆಟ್ಟಿ ತಿಳಿಸಿದರು.
ಅವರು ಗುರುವಾರ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯಲ್ಲಿ ಅನುದಾನಿತ ನೌಕರರಿಗೆ ಪಿಂಚಣಿಗೆ ಆಗ್ರಹಿಸಿ ಡಿ.26ರಂದು ಭಾಗವಹಿಸಲು ಕೋರಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ತಾಲೂಕಿನ ಎಲ್ಲ ಅನುದಾನಿತ ನೌಕರರು ಇದರಲ್ಲಿ ತಪ್ಪದೇ ಭಾಗವಹಿಸಿ ಧರಣಿ ಯಶಸ್ವಿಗೊಳಿಸಬೇಕು. ಈಗಾಗಲೇ ಅನುದಾನಿತ ಸಂಸ್ಥೆಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅನುದಾನಿತ ನೌಕರರಾದ ಬಿ.ಬಿ.ಮುದಕನಗೌಡರ, ವಿಜಯ ಲಮಾಣಿ, ನೇತ್ರಾ ಪಲ್ಲಕ್ಕಿ, ಬಸವರಾಜ ಮಾದರ, ರಮೇಶ ಲಮಾಣಿ, ಪುಟ್ಟೇಶ ಲಮಾಣಿ ಡಾ.ಪಾರ್ವತಿ ಲೆಂಕನ್ನವರ, ಕೆ.ವೈ.ಪಾಟೀಲ, ಸಿ ಎ ಮಾಳವಾಡ ವಿದ್ಯಾವತಿ ಬಾಣದ, ಎ.ಆರ್.ನಾಯಕ, ಎಂ.ಆರ್.ಹುಲ್ಲೂರ, ಪಿ.ಎಸ್‌. ಜವಳಿ, ಬಿ.ಎಲ್.ಹೂಲಿ, ಎಂ.ಆರ್.ಪಾಟೀಲ, ಬಿ.ಜಿ.ರೇವಡಿ ಇದ್ದರು.

ವರದಿ. ಕನಕಪ್ಪ ಶಾಂತಗೇರಿ,ಬಾದಾಮಿ


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *