Breaking News

ಉಪ್ಪಾರ ಸಮಾಜವನ್ನು ಎಸ್ಸಿ, ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಗೋಕಾನಲ್ಲಿ ಬೃಹತ್ ಪ್ರತಿಭಟನೆ.!

Spread the love

ಉಪ್ಪಾರ ಸಮಾಜವನ್ನು ಎಸ್ಸಿ, ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಗೋಕಾನಲ್ಲಿ ಬೃಹತ್ ಪ್ರತಿಭಟನೆ.!

ಗೋಕಾಕ: ರಾಜ್ಯದಲ್ಲಿ ಉಪ್ಪಾರ ಸಮುದಾಯ ಹೀನಾಯ ಸ್ಥೀತಿಯಲ್ಲಿದ್ದು, ರಾಜ್ಯ ಸರಕಾರ ಕೂಡಲೇ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಉಪ್ಪಾರ ಸಮಾಜದ ಮುಂದಿನ ಪೀಳಿಗೆಯಾದರೂ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಹಕರಿಸುವಂತೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಮನವಿ ಮಾಡಿದರು.
ಅವರು, ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದಿAದ ಹಮ್ಮಿಕೊಂಡ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ಉಪ್ಪಾರ ಸಮಾಜ ೫೨ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಆದಿಕಾಲದಿಂದಲೂ ಉಪ್ಪಾರ ಸಮಾಜ ಹಿಂದುಳಿದಿದೆ. ಕಳೆದ ಐದು ದಶಕಗಳಿಂದ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ನಮ್ಮ ಹಕ್ಕನ್ನು ಕೇಳುತ್ತ ಬಂದಿದ್ದೆವೆ ಆದರೆ ಈ ವರೆಗೆ ಯಾವುದೇ ಸರಕಾರ ನಮ್ಮ ಕೂಗನ್ನು ಕೇಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
೨೦೦೬ರ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರಕಾರ ಅಸ್ಥಿತ್ವದಲ್ಲಿದ್ದ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪನವರಲ್ಲಿ ಹಾಗೂ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ನಮ್ಮ ಬೇಡಿಕೆನ್ನು ಇಡೇರಿಸುವದಾಗಿ ಭರವಸೆ ನೀಡಿದ್ದರು ಸಹ ಈವರೆಗೆ ಬೇಡಿಕೆ ಇಡೇರಿಲ್ಲ. ೨೦೦೯ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಜನಾಂಗವಾಗಿದ್ದು, ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಸದ್ಯ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿಯವರು ಈ ಕೂಡಲೇ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ ಮಾತನಾಡಿ, ಉಪ್ಪಾರ ಸಮಾಜ ಅತಿ ಹಿಂದುಳಿದ ಸಮಾಜ ಈ ಸಮುದಾಯನ್ನು ಹಿಂದುಳಿದ ಆಯೋಗಗಳಾದ ನ್ಯಾ.ಹಾವನೂರ, ನ್ಯಾ.ವೆಂಕಟಸ್ವಾಮಿ ಹಾಗೂ ನ್ಯಾ.ಚಿನ್ನಪ್ಪಾ ರೆಡ್ಡಿ ಆಯೋಗಗಳು ವರದಿ ನೀಡಿ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಗಳ ರೀತಿಯಲ್ಲಿ ಹಿಂದುಳಿದಿದ್ದು ಉಪ್ಪಾರ ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ವರದಿ ಸಲ್ಲಿಸಿವೆ. ಅನೇಕ ಸರಕಾರಗಳು ರಾಜ್ಯದಲ್ಲಿ ಆಡಳಿತ ನಡೆಸಿದರು ಈವರೆಗೂ ಮೀಸಲಾತಿ ನೀಡಿಲ್ಲ. ಉಪ್ಪಾರ ಸಮಾಜದ ಕುಲಶಾಸ್ತಿçಯ ಅಧ್ಯಯನವನ್ನು ಹಂಪಿ ವಿಶ್ವವಿದ್ಯಾಲಯದ ಡಾ|| ಕೆ ಎಮ್ ಮೇತ್ರಿಯವರ ನೇತ್ರತ್ವದ ತಂಡ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾಜದ ಬಹಳಷ್ಟು ಉಪಯುಕ್ತ ವಿಷಯಗಳನ್ನು ಸಂಗ್ರಹಿಸಿ ಈಗಾಗಲೇ ದೇವರಾಜ ಅರಸು ಸಂಶೋಧನ ಸಂಸ್ಥೆ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಹಿಂದುಳಿದ ಉಪ್ಪಾರ ಸಮಾಜವನ್ನು ಮಲತಾಯಿ ಧೋರಣೆ ತೋರದೆ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ ಆರ್ ಕೊಪ್ಪ ಮಾತನಾಡಿದರು.
ಗೋಕಾಕ ತಾಲೂಕ ಉಪ್ಪಾರ ಸಂಘದ ಉಪಾಧ್ಯಕ್ಷರುಗಳಾದ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿ ಯಲ್ಲಪ್ಪ ದುರದುಂಡಿ, ವಿಠ್ಠಲ ಮೆಳವಂಕಿ, ಮುಖಂಡರುಗಳಾದ ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ಶಂಕರ ಬಿಲಕುಂದಿ, ಭೀಮಶಿ ಭರಮನ್ನವರ, ಅಶೋಕ ಗೋಣಿ, ಮುತ್ತೆಪ್ಪ ಕುಳ್ಳೂರ, ಮಲ್ಲಿಕಾರ್ಜುನ ಚೌಕಾಶಿ, ಲಕ್ಷö್ಮಣ ಖಡಕಭಾಂವಿ, ಬಸವರಾಜ ಖಾನಪ್ಪನವರ, ಗಂಗಾಧರ ಭಟ್ಟಿ, ಎಸ್ ಎಸ್ ಪಾಟೀಲ, ಸದಾನಂದ ಗುದಗೋಳ, ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಭರಮಣ್ಣ ಉಪ್ಪಾರ, ಪರಸಪ್ಪ ಬಬಲಿ, ಯಲ್ಲಪ್ಪ ಸುಳ್ಳನವರ, ಲಕ್ಕಪ್ಪ ಭೂಮನ್ನವರ, ಎಲ್ ಎಸ್ ಭಂಡಿ, ವಾಯ್ ಎಲ್ ಹೆಜ್ಜೆಗಾರ, ಮಾಯಪ್ಪ ತಹಶೀಲದಾರ, ಮಂಜುನಾಥ ಜಲ್ಲಿ, ಕಲ್ಲಪ್ಪ ಕಿಚಡಿ, ರಾಮಸಿದ್ಧ ನಾಗನೂರ, ಗೋಪಾಲ ಗೋಣಿ, ರೇವಪ್ಪ ದುರದುಂಡಿ, ಸಿದ್ದಪ್ಪ ಗೌಡಪ್ಪನವರ, ವಾಯ್ ಕೆ ಕೌಜಲಗಿ, ಅಲ್ಲಪ್ಪ ಕಂಕಣವಾಡಿ, ಸತ್ತೆಪ್ಪ ಬಬಲಿ, ಮಹಾದೇವ ಕಣವಿ, ಶಿವಪುತ್ರ ದುರದುಂಡಿ, ಅವ್ವಣ್ಣ ಗೌಡಿ, ಧರೆಪ್ಪ ಅಂತರಗಟ್ಟಿ, ಶಂಕರ ಸಣ್ಣಲಮನ್ನವರ, ಯಮನಪ್ಪ ಚುಂಚನೂರ ಸೇರಿದಂತೆ ನೂರಾರು ಜನ ಇದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *