ಗೋಕಾಕ ಆರ್,ಟಿ,ಓ,ಕಚೇರಿಯಲ್ಲಿನ ಎಜೆಂಟರ ವಿರುದ್ದ ಕರವೇ ಪ್ರತಿಭಟನೆ
ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕದ ವತಿಯಿಂದ ಗೋಕಾಕ ಆರ್ ಟಿ ಒ ಕಛೇರಿಯಲ್ಲಿನ ಹೆಚ್ಚಾಗುತ್ತಿರುವ ಏಜೆಂಟರ ಹಾವಳಿ ತಡೆಯಲು ಆಗ್ರಹಿಸಿ ಕರವೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು.
ಆರ್ ಟಿ ಒ ಕಛೇರಿಯಲ್ಲಿ ಸೇರಿದ ಕರವೇ ಕಾರ್ಯಕರ್ತರು ಆರ್ ಟಿಓ ಅಧಿಕಾರಿಗಳಿಗೆ ದಿಕ್ಕಾರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು,ಗೋಕಾಕ ಆರ್ ಟಿ ಒ ಕಛೇರಿಯಲ್ಲಿ ಎಜಂಟರು ಮಿತಿ ಮೀರಿದ್ದು ಒಂದು ಲಘು ವಾಹನ ಚಾಲನಾ ಪರವಾಣಿಗೆಗೆ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಾಗಿ ಹದಿನೈದು ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ, ಇದರ ಖರ್ಚು ಕೇವಲ ಎರಡು ಸಾವಿರ ಮಾತ್ರ ಇರುತ್ತದೆ,ಇನ್ನು ಮತ್ತೆ ಬ್ಯಾಡ್ಜ್ ಪರವಾನಿಗೆಗೆ ಇಪ್ಪತ್ತು ಸಾವಿರ ತೆಗೆದುಕೊಳ್ಳುತ್ತಾರೆ, ನೇರವಾಗಿ ಹೋದರೆ ಅಂತಹ ಅರ್ಜಿಗಳನ್ನು ರದ್ದು ಮಾಡೊ ಅದೆ ಅರ್ಜಿ ಎಜೆಂಟರ ಮುಖಾಂತರ ಹೋದರೆ ಮಾತ್ರ ಅದು ಪರವಾಣಿಗೆ ಸಿಗುತ್ತದೆ, ಹೀಗಿರುವಾಗ ಇಷ್ಟೊಂದು ಹಣ ನೀಡಲಿಕ್ಕೆ ಆಗದೆ ಬಡ ಜನರು ಲೈಸೆನ್ಸ್ ತೆಗೆದುಕೊಳ್ಳುತ್ತಿಲ್ಲ, ಇದರಿಂದ ಹಲವಾರು ಅಪಘಾತಗಳು ಕೂಡ ಸಂಭವಿಸಿವೆ,ಇಂತಹ ಸಂದರ್ಭದಲ್ಲಿ ಯಾವುದಾದರೂ ಅಪಘಾತ ಆದರೆ ಲೈಸನ್ಸ್ ಇಲ್ಲದ ಕಾರಣ ಪರಿಹಾರ ಸಿಗುವುದಿಲ್ಲ ಇದರಿಂದಾಗಿ ಜನ ಸಾಮಾನ್ಯರು ಕಷ್ಟ ಪಡುವಂತಾಗಿದ್ದು ಕೂಡಲೇ ಆರ್ ಟಿ ಒ ಅಧಿಕಾರಿಗಳು ಎಜಂಟರನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು ಈ ಸಂಧರ್ಭದಲ್ಲಿ ಜಿಲ್ಲಾ ಅದ್ಯಕ್ಷ ವಾಜೀದ್ ಹೀರೆಕೊಡಿ,ವಿಬಾಗಿಯ ಅದ್ಯಕ್ಷೆ ರೇಷ್ಮಾ ಕಿತ್ತೂರ ಕಸ್ತೂರಿ ಭಾವಿ, ರೆಹಮಾನ್ ಮೊಕಾಶಿ, ಗೌಸ ಸನದಿ, ರವಿ ನಾವಿ, ರಾಜು ಮುತ್ತೆನ್ನವರ, ಸುನೀಲ್ ಬೆಳಮರಡಿ, ಪರಶುರಾಮ ಬಾಡಕರಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು,