ದೇಶ ಕಟ್ಟುವಲ್ಲಿ ಮಹಿಳೆಯರದು ಸಿಂಹಪಾಲು ಇದೆ.: ಪ್ರಭಾವತಿ ಪಾಟೀಲ
ನಮ್ಮ ದೇಶದಲ್ಲಿ ಕಟ್ಟುವಲ್ಲಿ ಸಿಂಹ ಪಾಲು ಮಹಿಳೆಯರು ಸಾಕಷ್ಟು ಶ್ರಮವಹಿಸಿದ್ದಾರೆ ಮತ್ತು ದೇಶವನ್ನು ರಕ್ಷಿಸಲು ಸಾಕಷ್ಟು ಮಹಿಳೆಯರು ಹೋರಾಡಿದ್ದಾರೆಂದು ರಾಯಬಾಗ ಕ್ಷೇತ್ರಶಿಕ್ಷಣಾಧಿಕಾರುಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ಹೇಳಿದರು.
ಅವರು ಶ್ರೀಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶ್ರೀ ಎಸ್ ಎಮ್. ನಾರಗೊಂಡ ಅಂತರಾಷ್ಟೀಯ ಸಿ ಬಿ ಎಸ್ ಇ ನ್ಯೂ ದೆಹಲಿ ಶಾಲೆ ಹಾರೂಗೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡುತ್ತಾ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದೆ ವರ್ಣದ ೩೬೪ ದಿನಗಳೆಲ್ಲ ಮಹಿಳಾ ದಿನಾಚರಣೆಯಾಗಿರುತ್ತದೆ. ಮಹಿಳೆಯರಿಗೆ ನಾವುಗಳು ಗೌರವವನ್ನು ನಾವು ನೀಡಬೇಕು, ಸಮಾಜದಲ್ಲಿ ತಾಯಿ. ತಂಗಿ. ಮಗಳಾಗಿ ಜವಾಬ್ದಾರಿಗಾಗಿ ನಿಬಾಯಿಸುತ್ತಿದ್ದಾಳೆ. ಪುರಷರ ಹಿಂದೆ ಅಗಾದವಾದ ಶಕ್ತಿವಿದೆ ಎಂದರೆ ಅದು ತಾಯಿ ಪಾತ್ರ ಇರುತ್ತದೆ. ಮಕ್ಕಳು ಶಾಲೆಯ ಅವದಿಗಿಂತ ಮನೆಯಲ್ಲಿ ಇರುತ್ತಾರೆ ಅವರುಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಬೇಕು. ಮಕ್ಕಳು ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಮಕ್ಕಳು ಕೇವಲ ಪ್ರಮಾಣ ಪತ್ರ ಪಡೆದುಕೊಂಡು ಹೋಗದೆ ಸ್ವಾವಲಂಭಿಯ ಜೀವನ ಬಗ್ಗೆ ಅರಿತುಕೊಂಡು ಹೋರ ಹೊಮ್ಮಬೇಕಾಗಿದೆ. ಮಕ್ಕಳಲ್ಲಿ ಧೈರ್ಯ ಭಾರತದ ಸಂಸ್ಕ್ರತಿ ಅರಿವು ಮೂಡಿಸಲಿ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಒಳ್ಳೆಯ ಶಿಕ್ಷಣ ನೀಡಿಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರೆ ನೀಡಿದರು.
ಪ್ರಪಂಚದಾದ್ಯಂತ ‘ಅಂತರರಾಷ್ಟ್ರೀಯ ಮಹಿಳಾ ದಿನ’ ಒಂದು ವಿಶೇಷ ದಿನ. ಜಾಗತಿಕವಾಗಿ ಆಚರಿಸುವ ದಿನವಾಗಿದ್ದು, ಮಹಿಳೆ ‘ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ’ಯನ್ನು ನೆನೆಯುವ ದಿನವಾಗಿದೆ. ಮಹಿಳಾ ದಿನಾಚರಣೆಯನ್ನು ಮುಂಬರುವ ದಿನಗಳಲ್ಲಿ ಅತ್ಯಂತ ವಿಶೇಷವಾಗಿ ಆಚರಣೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಮಾದರಿ ಮಾಡುವ ಕನಸು ಶಿಕ್ಷಣ ಸಂಸ್ಥೆಯದಾಗಿದೆ ಎಂದು ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಹೇಳಿದರು.
ಮಹಿಳೆಯರಲ್ಲಿ ಸಾಕಷ್ಟು ಪ್ರತಿಭೆಗಳು ಅಡಗಿವೆ ಅದಕ್ಕೆ ಉನ್ನತವಾದ ವೇದಿಕೆಯನ್ನು ರೂಪಿಸಿ ಅವರುಗಳಲ್ಲಿರುವ ಕಲೆಗಳು ಬೆಳಕಿಗೆ ತರುವ ಪ್ರಯತ್ನಯಾಗಬೇಕು. ಮಹಿಳೆಯರು ಉನ್ನತ ವ್ಯಾಸಂಗ ಮಾಡಿ ಸಮಾಜದಲ್ಲಿ ಮುಂದೆ ಬರಬೇಕು. ತಾಯಿಯಲ್ಲಿ ಸಹನೆಯ ರೂಪ ಇರುತ್ತದೆ ತಾಯಿ ರೂಪ ನೂರು ಜನ್ಮ ಪಡೆದರು ತಿರಿಸಲು ಸಾಧ್ಯವಿಲ್ಲ ಎಂದು ಡಾ. ಗಿರೀಶ ನಾರಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ದಿನಾಚಣೆ ಅಂಗವಾಗಿ ಬರುವ ದಿನಗಳಲ್ಲಿ ಮಹಿಳೆ ವಿಶೇಷ ಜಾನಪದ ಸಂಸ್ಕೃತಿ. ಆಟ ಕ್ರೀಡೆಗಳು ನಡೆಸಬೇಕೆಂದು ಶ್ರೀಮತಿ ಮಹಾದೇವಿ ಕಬ್ಬೂರ ಸಲಹೆ ನೀಡಿ ಶಿಕ್ಷಣ ಸಂಸ್ಥೆಯ ರಾಜ್ಯ ದೇಶದಲ್ಲಿ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ಕಿತ್ತೂರ ರಾಣಿ ಚನ್ನಮ್ಮ. ಝಾನ್ಸೀ ರಾಣಿ ಲಕ್ಣ್ಮೀಬಾಯಿ. ಒನಕೆ ಒಬ್ಬವ್ವಾ. ಕಿರಣ ಬೇಡಿ. ಪರಿಸರ ರಕ್ಷಣೆ ಹೀಗೆ ವಿವಿಧ ರೂಪಕಗಳನ್ನು ಅಯೋಜಿಸಿ ಜನಮನಗಳು ಸೇಳೆದವು
ಈ ಸಂದರ್ಭದಲ್ಲಿ ಡಾ. ಗೀತಾ ನಾರಗೊಂಡ. ತ್ರೀವೇಣಿ ನಾರಗೊಂಡ. ಶಿಕ್ಷಣ ಸಂಯೊಜಕರು ಹಣಮಂತ ಬೇನ್ನಾಡಿ. ಸಿದ್ದು ನೋಗನಿಹಾಳ. ಅಮೃತಾ ಹುಬ್ಬಳ್ಳಿ ಸ್ವಾಗತಿಸಿದರು.
ಶೃತಿ ಶಿರಗುಪ್ಪಿ. ಪಿಯುಷ ಪಾಟೀಲ. ಅನುಷಾ ಅಮ್ಮನಗಿ ವಂದಿಸಿದರು.