ನಿಮ್ಮ ಕೈಯಲ್ಲಿನ ಬೆರಳೆ ಮತ ಚಲಾಯಿಸುವ ಬ್ರಹ್ಮಾಸ್ತ್ರ..
ತಪ್ಪಿಸಿಕೊಳ್ಳಬೇಡಿ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು
ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. 11 ಗಂಟೆಗಳ ಕಾಲ ಮತದಾನಕ್ಕೆ ಅವಕಾಶ ನೀಡಲಾಗಿದ್ದು ರಾಜ್ಯದ ಎಲ್ಲಾ ಅರ್ಹರು ಇದರಲ್ಲಿ ಭಾಗಿ ಪ್ರಜಾಪ್ರಭುತ್ವದ
ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಮಾಜದ ಗಣ್ಯರು ಕಳಕಳಿಯ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗವೂ ಮತದಾನ ತಪ್ಪಿಸಿಕೊಳ್ಳಬಾರದು ಎಂದು ಮತದಾರರಲ್ಲಿ
ಮನವಿ ಮಾಡಿದೆ.