ಕ್ರೀಡೆಗಳಲ್ಲಿ ಭಾಗವಹಿಸಲು ಯುವ ಜನತೆ ಸದೃಢವಾಗಬೇಕು: ಅಮರನಾಥ ಜಾರಕಿಹೊಳಿ
ಇವತ್ತು ಜಗತ್ತಿನಲ್ಲಿ ನಮ್ಮದೇಶ ಕ್ರೀಡೆಗಳಿಂದ ಪ್ರಸಿದ್ದಿ ಪಡೆಯುತ್ತಲಿದೆ,ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವು ಮಾಡಬೇಕಾದದ್ದು ಬಹಳ ಇದೆ ಎಂದು
ಗೋಕಾಕದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ SCP /TSP ಯೋಜನೆ ಅಡಿಯಲ್ಲಿ ರಾಜ್ಯ ವಲಯ ಕ್ರೀಡಾ ತರಬೇತಿಯಲ್ಲಿ ಭಾಗವಹಿಸಿದ 50ಕ್ರೀಡಾ ಪಟುಗಳಿಗೆ ಹಾಗೂ ಗೋಕಾಕ ಮತಕ್ಷೇತ್ರದ 22 ಸರಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಗಳನ್ನು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ನಗರದ ಶಾಸಕರ ಕಛೇರಿಯಲ್ಲಿ ವಿತರಿಸಿ ಮಾತನಾಡಿದರು.
ಅದಲ್ಲದೆ ಭಾರತವು ಹೆಚ್ಚು ಯುವಕರಿಂದ ಕೂಡಿದ ದೇಶವಾಗಿದೆ, ಈಗಿನ ಯುವ ಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿಲು ಶಾರರಿಕ ಹಾಗೂ ಮಾನಸಿಕ ಸದೃಢವಾಗಿರಬೇಕು, ಯುವಶಕ್ತಿ ಸದೃಢವಾದರೆ ಇಡೀ ದೇಶವೇ ಸದೃಢವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ, ತುಕಾರಾಮ ಕಾಗಲ ,ಮಡೆಪ್ಪಾ ತೋಳಿನವರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ, ಶಾಸಕರ ಆಪ್ತ ಸಹಾಯಕರಾದ ಲಕ್ಷ್ಮಿಕಾಂತ ಎತ್ತಿನಮನಿ, ಸುರೇಶ ಸನದಿ, ಕೆಂಪಣ್ಣಾ ಮೈಲನ್ನವರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ,ನಗರ ಸಭೆ ಸದಸ್ಯರಾದ ಅಬ್ಬಾಸ ದೇಸಾಯಿ,ದುರ್ಗಪ್ಪಾ ಶಾಸ್ತ್ರೀಗೊಲ್ಲ , ಇಲಾಖೆಯ ಅನುಸ್ಠಾನ ಅಧಿಕಾರಿ ಎಂ ಪಿ ಮರನೂರ, ಸಿಬ್ಬಂದಿ ಎಸ್ ಡಿ ನಗಾರಿ. ಹಾಗೂ ಅನೇಕ ಉಪಸ್ಥಿತರಿದ್ದರು.