Breaking News

ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಪ್ರೇಮ ಬಿತ್ತುವ ಕಾರ್ಯಮಾಡಬೇಕು : ಜೊಗನ್ನವರ

Spread the love

ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಪ್ರೇಮ ಬಿತ್ತುವ ಕಾರ್ಯಮಾಡಬೇಕು : ಜೊಗನ್ನವರ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗೋಕಾಕ ಘಟಕ ವತಿಯಿಂದ ವಿದ್ಯಾರ್ಥಿ ಪರಿಷತ್ ನ ಸಂಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯನ್ನು ಗೋಕಾಕದ ಶಾರದಾ ಪೀಠದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಮಾತೊಶ್ರೀ ಶಿವಾಮಯಿ ಮಾತಾಜಿ ವಹಿಸಿದ್ದರು.ಈ ದಿನಾಚರಣೆಯಲ್ಲಿ ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಶವ ಸಂಸ್ಕಾರ ಮಾಡಿ ನಸ್ವಾರ್ಥ ಸೇವೆ ಸಲ್ಲಿಸಿದ ಸಂಘಟನೆಯ ಕಾರ್ಯಕರ್ತರಾದ ರಮೇಶ ಬಿರಡಿ ಹಾಗೂ ಪತ್ರಕರ್ತರಿಗೆ ಸತ್ಕರಿಸಿ ಸನ್ಮಾನಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತಿನ ಗೋಕಾಕ ಘಟಕದ ಅದ್ಯಕ್ಷ ಚೇತನ ಜೊಗನ್ನವರ ಮಾತನಾಡಿ

ವಿದ್ಯಾರ್ಥಿಗಳ ಮನಸ್ಸಿನೊಳಗೆ ದೇಶ ಪ್ರೇಮವನ್ನು‌ ಬಿತ್ತುವುದರ ಜೊತೆಯಲ್ಲಿ ಮಾನವಿಯ ಮೌಲ್ಯಗಳನ್ನು ಬೆಳೆಸಿ ಇನ್ನೊಬ್ಬರಿಗೆ ಸಹಾಯ ಮಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಈ ಸಂಘಟನೆ ಹಮ್ಮಿಕೊಳ್ಳುತ್ತಾ ಬಂದಿದೆ.

ಅದಲ್ಲದೆ ಈಗಿನ‌ ಸನ್ನಿದ್ದ ಪರಿಸ್ಥಿತಿಯಲ್ಲಿ ಮಕ್ಕಳು ಆನಲೈನ್ ಪಾಠ ಕಲಿಯುತ್ತಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಮಾನವಿಯ ಬಾಂಧವ್ಯ ಕಳೆದುಕೊಳ್ಳುತ್ತಿದೆ.ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆ ಅವರ ವಿಚಾರಗಳನ್ನು ಬದಲಿಸಿ ತಮ್ಮ ಪಕ್ಕದ ಜನರಿಗೆ ಯಾವ ರೀತಿ ಸಹಕಾರ ನೀಡಬೇಕು ನಾಯಕತ್ವದ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಲು ತಿಳಿಸುತ್ತಾ ಅದರ ಜೊತೆಯಲ್ಲಿ ಅನೇಕ‌ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಳ್ಳುತ್ತಾ ಬರ್ತಾಯಿದೆ ಎಂದರು.

ಅಲ್ಲದೆ ಆನಲೈನ್ ಪಾಠಗಳು ಬಂದಾಗಿನಿಂದ ಈಗಿನ ಮಕ್ಕಳ ಕೈಯಲ್ಲಿ ನಾವುಗಳು ಮೊಬೈಲ ಕೊಟ್ಟು ಅವರು ಪಾಠ ಮಾಡುತಿದ್ದಾರೋ ,ಆಟ ಆಡುತಿದ್ದಾರೋ ಎಂಬುದನ್ನು ಸರಿಯಾಗಿ ವಿಚಾರಿಸದೆ ಇದ್ದಲ್ಲಿ ಅವರು ದಾರಿ ತಪ್ಪುವುದಕ್ಕೆ ನಾವು ಕೂಡ ಕಾರಣರಾಗುತ್ತಿದ್ದೇವೆ, ಅದಕ್ಕಾಗಿ ಪಾಲಕರು ಮಕ್ಕಳು ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾದಕ್ಷರಾದ ರಜನಿ,ಜಿರಗ್ಯಾಳ, , ಶ್ರೀಮತಿ ಜಯಾ ಚುಣಮರಿ , ಪತ್ರಕರ್ತರು ಮನೋಹರ ಮ್ಯಾಗೇರಿ., ತಾಲೂಕಾ ಸಂಚಾಲಕರಾದ ಕುಮಾರ್ ಸಂಜು ಹತ್ತೀಕಟಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಾದ್ಯಾಪಕರಾದ ಶ್ರೀಮತಿ ವಿದ್ಯಾ ರೆಡ್ಡಿಯವರು ನಿರೂಪಿಸಿ ವಂದಿಸಿದರು.


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *