Breaking News

ಭೀಮಶಿ ಭರಮನ್ನವರಗೆ ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ

Spread the love

ಭೀಮಶಿ ಭರಮನ್ನವರಗೆ ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ

ನಿಪ್ಪಾಣಿ: ಕೈ .ಬಸವಂತ ನಾಗು ಶಿಂಗಾಡೆ ಚೈರಟೆಬಲ ಟ್ರಸ್ಟ್ ವತಿಯಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಸಮಾಜ ಸೇವಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ ” ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗೋಕಾಕ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಪತ್ರಕರ್ತರಾಗಿ, ಮಾಜಿ ನಗರ ಸಭೆ ಸದಸ್ಯ ಹಾಗೂ ಗೋಕಾಕ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಸಮಾಜ ಸೇವೆ ಸಲ್ಲಿಸುತ್ತಾ, ರಾಜಕೀಯವಾಗಿ ಸಾಮಾಜಿಕವಾಗಿ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಭೀಮಶಿ ಭರಮಣ್ಣವರ ಕೋವಿಡ್ ದಂತಹ ಸಂಕಷ್ಟದ ಸಮಯದಲ್ಲಿ ತಮ್ಮ ತಂಡವನ್ನು ಕಟ್ಟಿಕೊಂಡು ತಾಲೂಕಿನಲ್ಲಿರುವ ಕಡು ಬಡವರನ್ನ ಗುರುತಿಸಿ ಆಹಾರ ಕಿಟ್ ಗಳನ್ನು ವಿತರಿಸಿ ಶ್ಲಾಘನೀಯ ಕಾರ್ಯ ಮಾಡಿದ್ದರು.

ಇಂತಹ ಸಮಾಜದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬಂದಿರುವ ಭೀಮಶಿ ಭರಮಣ್ಣವರ ಅವರನ್ನು ಗುರುತಿಸಿ ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿಯನ್ನು ಕೈ .ಬಸವಂತ ನಾಗು ಶಿಂಗಾಡೆ ಚೈರಟೆಬಲ ಟ್ರಸ್ಟ್ ಸಲ್ಲಿಸಿದ್ದಾರೆ.

ಈ ಪ್ರಶಸ್ತಿ ಯಾರಿಗೆ ಏಕೆ ನೀಡುತ್ತಾರೆ?

“ಈ ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿಯನ್ನು ಮೇಲೆ ಹೇಳಿರುವ ಊಕ್ಕಿಯಂತೆ ಒಳ್ಳೆಯ ನೀತಿಯಿಂದ ಎಲ್ಲರ ಜೊತೆ ಭಾಂಧವರಂತೆ ತಿಳಿದು ನಡೆಯೊದು ಆಯುಷ್ಯದೊಳಗೆ ಪುಣ್ಯ ಪೂಂಜಿ ಇಟ್ಟಂತೆ, ತಾವು ಎಲ್ಲರ ಜೊತೆ ಸ್ನೇಹದಿಂದ ಒಡನಾಟಿಗಳಂತೆ ವರ್ತಿಸಿದ್ದೀರಿ. ನಿಮ್ಮ ಈ ಸೌಜನ್ಯಶೀಲ ವರ್ತನೆಯಿಂದ ಜನ ಸಾಮಾನ್ಯರ ಮನಸ್ಸನ್ನು ಗೆದ್ದು, ಒಂದು ಆದರಣೀಯ ಸ್ಥಾನವನ್ನು ಗಿಟ್ಟಿಸಿದ್ದಿರಿ.
ತಾವು ಸಂಯಮ ,ಸಹನತೆಯ ಮಹಾ ಮೇರು ,ದಯೆ ಕರುಣೆಯ ಸಾಗರವಾಗಿ ತಂದೆ ತಾಯಿಯರ ಪ್ರೀತಿಯ ಮಗ ಶ್ರವಣನಾಗಿ ಸೇವಾ ಭಾವನೆ ತುಂಬಿದ ಒಳ್ಳೆಯ ಸಮಾಜ ಉದ್ಧಾರಕ್ಕನಾಗಿ, ಸಹಕಾರಿಯಾಗಿ ಹಾಗೂ ಗ್ರಾಹಕ ವರ್ಗದವರ ಜೀವನದ ಸ್ನೇಹಮಯಿಯಾಗಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿದವರು, ಒಟ್ಟಿನಲ್ಲಿ ತಮ್ಮ ಜೀವನವು ಅತ್ಯಂತ ಅಭಿನಂದನೀಯವಾಗಿದೆ. ನಿಮ್ಮ ಈ ಸೇವಾ ಭಾವವು ನಮ್ಮಲ್ಲರಿಗೂ ನಿಮ್ಮಿಂದ ಸಿಕ್ಕಿರುವ ಒಂದು ಪ್ರೇರಣೆಯ ಶಕ್ತಿಯಾಗಿದೆ. ಅಂತೆಯೇ ನಾವು ನಮ್ಮ ಕೈ .ಬಸವಂತ ನಾಗು ಶಿಂಗಾಡೆ ಚೈರಟೆಬಲ ಟ್ರಸ್ಟ್ ವತಿಯಿಂದ ಸನ್ಮಾನ ಪ್ರಶಸ್ತಿ ಕೊಟ್ಟು ನಿಮಗೆ ನಿಮ್ಮ ಕಾರ್ಯಕ್ಕೆ ಗೌರವ ಸಲ್ಲಿಸಿದ್ದೆವೆ.” ಎಂದು ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *