Breaking News

Spread the love

ಅಂಬೇಡ್ಕರ ಅನುಭವಿಸಿದ ನೋವು ಕಷ್ಟಗಳು ನಿಮಗೆ ಬಂದಿಲ್ಲ : ಮಹೇಶ ಕುಮಟಳ್ಳಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಿದರು.

ಇದೆ ಸಂಧರ್ಭದಲ್ಲಿ ಅಥಣಿ ಮತಕ್ಷೇತ್ರದ ಶಾಸಕರು ಹಾಗೂ ರಾಜ್ಯ ಕೋಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮಹೇಶ ಕುಮಠಳ್ಳಿ ಮಾತನಾಡಿ ಅಂಬೇಡ್ಕರ್ ಅವರು ದೇಶ ಹಾಗೂ ವಿದೇಶದಲ್ಲಿ ಶಾಲೆಯನ್ನು ಕಲೆತು ಅವರ ಅನುಭವ ವಿದ್ಯೆಯೆ ಪ್ರತಿಫಲವೆ ಸಂವಿಧಾನ ಅವರು ಅನುಭವಿಸಿದ ನೋವು ಕಷ್ಟಗಳು ನಿಮಗೆ ಬಂದಿಲ್ಲ ಯಾರು ಶಿಕ್ಷಣವನ್ನು ಪಡೆದಿದ್ದಾರೊ ಅವರಿಗೆ ಸಮಾನತೆ ಹಾಗೂ ಸ್ಥಾನಮಾನದ ಅರಿವು ಇದೆ. ಯಾರೂ ಶಿಕ್ಷದಿಂದ ವಂಚಿತರಾಗಿದ್ದಾರೊ ಅವರಿಗೆ ಯಾವ ಅರಿವು ಇಲ್ಲಾ ಶಿಕ್ಷಣವನ್ನು ಪಡೆಯಿರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿ‌ಕೊಟ್ಟ ಮಾರ್ಗ, ತತ್ವ ಸಿದ್ದಾಂತ ಹಾಗೂ ಸಂಸ್ಕಾರವನ್ನು ಕಲಿಯಬೇಕು ಎಂದು ಹೇಳಿದರು

ಇನ್ನೂ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಅಥಣಿಯ ನ್ಯಾಯವಾದಿಗಳಾದ ರಾಮು ಮರೆಳರ ಮಾತನಾಡಿ ಈ ದೇಶದಲ್ಲಿ ಸಕಲ ಜನ ಗೌರವದಿಂದ ಸ್ವಾಭಿಮಾನದಿಂದ ಬದುಕುತಿದ್ದರೆ ಹಾಗೂ ದೇಶಕ್ಕೆ ಒಂದು ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಿರುವ ಮಹಾ ಮನವತಾವಾದಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಮಾಡುತ್ತಿದ್ದೆವೆ. ಬಾಬಾ ಸಾಹೇಬರು ಅಂದ್ರೆ ಇಡಿ ಜಗತ್ತೆ ಅವರನ್ನು ಗೌರವಿಸಿ ಅವರ ಆದರ್ಶಗಳನ್ನು ಒಪ್ಪತ್ತದೆ ಎಂದರು

ಈ ವೇಳೆ ದಲಿತ ಮುಖಂಡರಾದ ಸಿದ್ದಾರ್ಥ ಸಿಂಗೆ, ಮಹಾಂತೇಶ ಬಾಡಗಿ, ಬಾಹುಸಾಹೇಬ ಕಾಂಬಳೆ,ಶಸಿ ಸಾಳವೆ, ಡಿ ವಾಯ್ ಎಸ್ ಪಿ. ಎಸ್ ವಿ ಗೀರಿಶ, ಕೆಇಬಿ ಅಧಿಕಾರಿ ರಾವಸಾಬ ಕಾಂಬಳೆ,ಫರೀದ ನನ್ನೆ, ಪ್ರಕಾಶ ಚನ್ನಣ್ಣವರ, ವಿಲಾಸ ಕಾಂಬಳೆ,ಪಿರಪ್ಪ ಕಾಂಬಳೆ,ಸಂಜು ಕಾಂಬಳೆ,ಪವನ ಕಾಂಬಳೆ,ಜಗದೀಶ ಕಾಂಬಳೆ, ಪ್ರಭಾಕರ ಕಾಂಬಳೆ, ಇನ್ನೂ ಹಲವಾರು ಮುಖಂಡರು ಭಾಗಿಯಾಗಿದ್ದರು


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *