Breaking News

ಸುಳ್ಳು ಜಾತಿ ಪ್ರಮಾಣ ತೆಗೆದುಕೊಂಡವರಿಗೆ ಕಾದಿದೆ ಸಂಕಷ್ಟ್

Spread the love

ಸುಳ್ಳು ಜಾತಿ ಪ್ರಮಾಣ ತೆಗೆದುಕೊಂಡವರಿಗೆ ಕಾದಿದೆ ಸಂಕಷ್ಟ್

ಬೆಂಗಳೂರು: ರಾಜ್ಯದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗೆ ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಕುರಿತಂತೆ ಮಾಹಿತಿ ಸಂಗ್ರಹಿಸಿ, ನೀಡಲು ಇದೀಗ ಆದೇಶಿಸಿದೆ.

ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದ ಹಲವಾರು ಕಡೆ ಅನರ್ಹರು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರೋ ಬಗ್ಗೆ ದಿನಾಂಕ 20-04-2022ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಪಂಗಡಗಳ ಕಲ್ಯಾಮ ಸಮಿತಿ ಸಭೆಯಲ್ಲಿ ಚರ್ಚೆಯಾಗಿರುತ್ತದೆ.

ಅಲ್ಲದೇ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡಿರುವ ಅಧಿಕಾರಿ, ನೌಕರರನ್ನು ಕೂಡಲೇ ಅಮಾನತುಗೊಳಿಸಲು, ವಾರ್ಷಿಕ ವೇತನ ಬಡ್ತಿಗಳನ್ನು ಕಡಿತಗೊಳಿಸಲು ಹಾಗೂ ಆಂತಹ ಅಧಇಕಾರಿಗಳ ಸೇವಾ ವಹಿಯಲ್ಲಿ ನಮೂದಿಸಲು ತಿಳಿಸಿರುತ್ತಾರೆ.

ಹೀಗಾಗಿ 2010ರಿಂದ ಇಲ್ಲಿಯವರೆಗೆ ಬೇಡ ಜಂಗಮ ಜಾತಿಯ ಎಷ್ಟು ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿ ನೀಡುವುದು. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕುಗಳಲ್ಲಿ ಬೇಡ ಜಂಗಮ ಪ್ರಮಾಣ ಪತ್ರಗಳನ್ನು ನೀಡಿದವರುಗಳ ಹಾಗೂ ಪಡೆದುಕೊಂಡಿರುವವರ ವಿವರಗಳನ್ನು ಮತ್ತು ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಕ್ರೂಡೀಕರಿಸಿ, ಮರು ಟಪಾಲಿನಲ್ಲಿ ಸರ್ಕಾರಕ್ಕೆ ಕಳುಹಿಸುವಂತೆ ನಿರ್ದೇಶಿಸಿದ್ದಾರೆ.


Spread the love

About Fast9 News

Check Also

ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ: BLJ-

Spread the love*ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ*. *ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷ …

Leave a Reply

Your email address will not be published. Required fields are marked *