ಕೈಲಾಸ ನಮ್ಮ ನೆಲದಲ್ಲಿಯೇ ಇದೆ: ಶ್ರೀ ಪ್ರಭುಚನ್ನಬಸವ ಸ್ವಾಮೀಜಿ
ನದಿ ಇಂಗಳಗಾಂವ: ಶಿವರಾತ್ರಿ ಇದು ಎಲ್ಲರನ್ನು ಆದ್ಯಾತ್ಮದೇಡೆ ಬೇಸೆಯುವ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಂಕೇತವಾಗಿದೆ. ನಾವುಗಳು ಎಲ್ಲಿ ಕಳೆದುಕೊಂಡಿದ್ದೇವೆ ಅಲ್ಲಿಯೇ ಹುಡುಕಿಕೊಳ್ಳಬೇಕೆಂದು ಮೋಟಗಿಮಠ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ 5 ನೇ ದಿನದ ಕಾರ್ಯಕ್ರಮದಲ್ಲಿ ಜೀವನ ದರ್ಶನ ಪ್ರವಚನದಲ್ಲಿ ಮಾತನಾಡುತ್ತಾ ಅನುಭವ ಪಡೆದುಕೊಳ್ಳಬೇಕಾದರೆ ನಮ್ಮ ಮನೆಯಲ್ಲಿ ಮಠ ಮಾನ್ಯಗಳಲ್ಲಿ ಸಂಸ್ಕೃತಿ, ಸಂಸ್ಜಾರ,ನಮ್ಮ ಅಂಗೈಯಲ್ಲಿ ದೊರೆಯುತ್ತದೆ. ಕೈಲಾಸ ನಮ್ಮ ನೆಲದಲ್ಲಿಯೇ ಇದೆ. ಎಂದು ಶರಣರು ಹೇಳುತ್ತಾರೆ.
ನಮ್ಮ ಹೃದಯದೊಳಗೆ ಇಷ್ಟಲಿಂಗವನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು. ವಚನಗಳ ಅರ್ಥ ಮಾಡಿಕೊಂಡು ನಡೆದರೆ. ಈ ಸಮಾಜದಲ್ಲಿ ಮಹಾತ್ಮರಾಗುತ್ತಾರೆ. ಈಗಿನ ಮಕ್ಕಳ ಕೈ ಬೆರಳಿನಲ್ಲಿ ಜಗ್ಗತ್ತೆ ಇದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಯಲ್ಲಿ ಮಾರ್ಗದರ್ಶನ ನೀಡಬೇಕು. ನುಡಿದಂತೆ ನಡೆ ಅದೆ ನಮ್ಮ ಕಡೆ ಜನ್ಮವಾಗುತ್ತದೆ. ಈ ನೆಲದಲ್ಲಿ ಮಹಾನ ಶರಣರು ಜನ್ಮ ತಾಳಿದ್ದಾರೆ. ಅದನ್ನು ನಾವುಗಳು ಮುನ್ನೆಡೆಸಬೇಕೆಂದು ಕರೆ ನೀಡಿದರು.
ವರದಿ: ವಿಲಾಸ ಕಾಂಬಳೆ