Breaking News

ರಸೀದಿ ನಿಡದೆ ಸಂತೆ ಕರ ವಸೂಲಿ,ಚಿಂಚಲಿ ಸದಸ್ಯರಿಂದ ಸಾಮಾನ್ಯ ಸಭೆಯಲ್ಲಿ ಆಕ್ರೋಶ

Spread the love

ರಸೀದಿ ನಿಡದೆ ಸಂತೆ ಕರ ವಸೂಲಿ,ಚಿಂಚಲಿ ಸದಸ್ಯರಿಂದ ಸಾಮಾನ್ಯ ಸಭೆಯಲ್ಲಿ ಆಕ್ರೋಶ

ಚಿಂಚಲಿ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ರತಿ ರವಿವಾರ ನಡೆಯುವ ಸಂತೆಯಲ್ಲಿ ವ್ಯಾಪರಸ್ಥರಿಂದ ಪಟ್ಟಣ ಪಂಚಾಯತ ಕರ ರಸೀದಿ ನೀಡದೆ ಮಾಡುತ್ತಿರುವ ಹಣ ಯಾವ ಲೆಕ್ಕಕ್ಕೆ ಸೆರ್ಪಡೆಯಾಗುತ್ತದೆ ಎಂದು ಹೇಳುವಂತೆ ಪಟ್ಟಣ ಪಂಚಾಯತ ಸದಸ್ಯರಾದ ಸಂಜು ಮೈಶಾಳೆ ಅಧಿಕಾರಿಗಳನ್ನು ಹೇಳಲು ಒತ್ತಾಯಿಸಿದರು.

ಅವರು ಇಂದು ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಪ್ರತ್ಯಕ್ಷವಾಗಿ ಸಂತೆಯಲ್ಲಿ ಸುತ್ತಾಡಿ ವಿಚಾರಿಸಿದಾಗ ಸದಸ್ಯ ಸಂಜು ಮೈಶಾಳೆ ಅವರು ಪಟ್ಟಣ ಪಂಚಾಯತ ಹಾಗೂ ಖಾಸಗಿ ಸಿಬ್ಬಂದಿಗಳು ಸರಕಾರಕ್ಕೆ ಸೇರಬೇಕಾದ ಹಣವನ್ನು ಗೋಲಮಾಲ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇಂಚಲಿ ಪಟ್ಟಣ ಪಂಚಾಯತ ಅಭಿವೃದ್ಧಿಗಾಗಿ ಬಳಸಬೇಕಾದ ಹಣ ಯಾರ ಜೇಬಿಗೆ ಸೇರಿ ಎಲ್ಲೋ ಮಾಯವಾಗುತ್ತಿದೆ ಎಂದರು.

ಅದಕ್ಕಾಗಿ ಮುಂಬರುವ ದಿನಗಳಲ್ಲಿ ಈ ರೀತಿ ಸ್ಥಳಿಯ ಸಿಬ್ಬಂದಿಗಳು ನಡೆಸುತ್ತಿರುವ ಸಂತೆ ಕರದ ಗೋಲ‌ಮಾಕ್ಕೆ ಮುಖ್ಯಾಧಿಕಾರಿ ತಕ್ಷಣ ಕಡಿವಾಣ ಹಾಕಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಅದಲ್ಲದೆ ಪಟ್ಟಣದಲ್ಲಿ ವಯಕ್ತಿಕ ಶೌಚಾಲಯದ ಕಟ್ಟಡಕ್ಕೆ ಕಾರ್ಯಾಲಯದಿಂದ ಫಲಾನುಭವಿಗಳಿಗೆ ಕೇವಲ 10 ಸಾವಿರ ನೀಡಿದ್ದಾರೆ ಇನ್ನೂ 6 ಸಾವಿರದಷ್ಟು ಹಣ ನೀಡಿದೆ ಸತಾಯಿಸುತ್ತಿರುವುದು ಸರಿಯಲ್ಲ, ಹೀಗಾಗಿ ಸಾರ್ವಜನಿಕರು  ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಹಿಂದೇಟು ಹಾಕುತಿದ್ದಾರೆ.

ಪ್ರತಿ ವರ್ಷ ಆಸ್ತಿ ತೆರಿಗೆ ಹೆಚ್ಚು ಮಾಡುವ ನೀಟಿನಲ್ಲಿ ಪ್ರತಿಶತ 5 ರಷ್ಟು ಹೆಚ್ಚಳ ಮಾಡುವ ಆಲೋಚನೆಗೆ ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಈ ಹೋರೆ ಸಾಮಾನ್ಯ ಜನರ ಮೇಲೆ ಬಿಳುತ್ತದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಹೋರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ವ ಸದಸ್ಯರು ಒಪ್ಪಿಗೆ ನೀಡಿದರು. ಈ ವಿಷಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿಕೊಳ್ಳಬೇಕೆಂದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *