ಸಮಾಜದ ಕಣ್ಣು ಮಹಿಳೆ, ಅವಳಿಂದಲೆ ಸಮಾಜ ಬೆಳಗುತ್ತದೆ: ವಿದ್ಯಾವತಿ ಬಜಂತ್ರಿ,
ಕುಡಚಿ: ಮಹಿಳೆ ಈ ಸಮಾಜದಲ್ಲಿ ತಾಯಿ ಮಡದಿಯಾಗಿ ತಂಗಿಯಾಗಿ ಮಗಳಾಗಿದ್ದಾಳೆ. ಈ ಸಮಾಜದಲ್ಲಿ ಮಹಿಳೆಯರಿಗೆ ಬಾಬಾಸಾಹೇಬ ಡಾ: ಅಂಬೇಡಕರ ಅವರು ಸಮಾನತೆಯನ್ನು ನೀಡಿದ್ದಾರೆಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿದೇರ್ಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ ಹೇಳಿದರು.
ಹಾರೂಗೇರಿಯಲ್ಲಿ ಅವರು ಮಹಿಳಾ ಜಾಗೃತಿ ಮತ್ತು ರಕ್ಷಣಾ ಸಂಘ ಹಾರೂಗೇರಿ. ಡಾ. ಬಿ ಆರ್. ಅಂಬೇಡಕರ್ ಶಿಕ್ಷಣ ಸಂಸ್ಥೆ ಕುಡಚಿ ವತಿಯಿಂದ ಆಯೊಜಿಸಲಾಗಿದ್ದ ಮಹಿಳಾ ಸಮಸ್ಯೆ ನಿವಾರಣಾ ಘಟಕದಲ್ಲಿ ಬಿ. ಶಂಕರಾನಂದ ಪದವಿ ಮಹಾವಿದ್ಯಾಲಯ ಕುಡಚಿ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತ ಜಿಲ್ಲಾ ಘಟಕ ಚಿಕ್ಕೋಡಿ ದಳವಾಯಿ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಘ ಕುಡಚಿ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಕುಡಚಿ ಇವರ ಸಂಯುಕ್ತ ಆಶ್ರಯದಲ್ಲಿ ರಾಯಬಾಗ ತಾಲೂಕಾ ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ” ಜಾಗೃತಿಯುತ್ತ ಮಹಿಳೆ” ಕಾರ್ಯಕ್ರಮ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ. ಮಹಿಳೆಯರು ಸ್ವತಂತ್ರವಾಗಿ ಸಮಾಜದಲ್ಲಿ ಎಲ್ಲಾ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಈ ಭೂಮಿಯ ಮೇಲೆ ಜನ್ಮ ಪಡೆದುಕೊಂಡು ಬಂದಿದ್ದೆವೆ ನಾವುಗಳು ಎನಾದರು ಸಾಧನೆ ಮಾಡುವ ಜವಾಬ್ದಾರಿ ನಮ್ಮದ್ದಾಗಿದೆ. ಈ ಸಮಾಜದ ಕಣ್ಣು ಮಹಿಳೆ ಈ ಸಮಾಜಕ್ಕೆ ಬೆಳಕಾಗಬೇಕು ತಾಯಿಯೇ ಮೊದಲು ಗುರುವಾಗಿದ್ದಾಳೆ ತಾಯಿಯನ್ನು ನಾವುಗಳು ಗೌರವದಿಂದ ಕಾಣಬೇಕಾಗಿದೆ.
ಈ ಜಗ್ಗತ್ತಿನಲ್ಲಿಯಾಗುತ್ತಿರುವ ಕೆಡಕುಗಳ ಬಗ್ಗೆ ಜಾಗೃತಿ ಮೂಡಿಸಿ ಅದರ ಬಗ್ಗೆ ತಿಳಿಸಬೇಕಾಗಿದೆ. ಮಹಿಳೆರಾದ ನಾವು ಸಂಘಟನೆಯ ಸಮಾಜದ ಮುಖಿಯಾಗಿ ಕಾರ್ಯ ಮಾಡುತ್ತಿದ್ದು ಮತ್ತು ಪ್ರತಿಯೊಂದು ಮಹಿಳೆಯರು ಸ್ವೌವಲಂಭಿಯಾಗಿ ಬದುಕುತ್ತಿದ್ದಾರೆಂದು ಕರೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಶ್ರೀಮತಿ ಎಸ್ ಎಸ್ ಕೊಕಟನೂರ ಇವರು ಮಾತನಾಡುತ್ತಾ ಅನ್ಯಾದ ವಿರುದ್ದ ಹೋರಾಟ ಹಾಗೂ ಗ್ರಾಮೀಣ ಜನರ ನಡುವೆ ಸ್ವಚ್ಛತೆ ಹಾಗೂ ಚಿಕ್ಕ ಕುಟುಂಬ ಹೆಣ್ಣು ಮಕ್ಕಳ ಪಾಲನೆ ಪೋಷಣೆ ಬಗ್ಗೆ ಕಾಳಜಿ ವಹಿಸಿ ಜವಾಬ್ದಾರಿಯುತ ಕಾರ್ಯ ಸಂಘದಿಂದ ನಿರಂತರವಾಗಿ ನಡೆಯುತ್ತ ಬಂದಿದೆ ಎಂದು ಪ್ರಾಸ್ತಾವಿಕ ಹೇಳಿದರು.
ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಹಾಗೂ ಪುರುಷ್ಯರಿಗೆ ಸನ್ಮಾನಿಸಿದರು.
ಪರಿಚಯ ಹಾಗೂ ಸ್ವಾಗತ ಶ್ರೀಮತಿ ಶ್ರದೇವಿ ಸಂಜು ಬ್ಯಾಕೂಡೆ ನೆರವೆರಿಸಿದ್ದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಬ್ರಹ್ಮಕುರಿಮಾರಿ ವಿದ್ಯಾ ಅಕ್ಕ. ಶ್ರೀಮತಿ ಡಾ. ರತ್ನ ಬಾಳಪ್ಪನ್ನವರ. ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ. ಬಿ.ಎಲ್.ಘಂಟಿ. ಹಾಗೂ ಸ್ಥಳಿಯ ಗಣ್ಯರು ಉಪಸ್ಥಿತರಿದ್ದರು.