ಅಳಿಯನನ್ನು ಗೆಲ್ಲಿಸಿದ ಹಾಗೆ ಮಗಳನ್ನು ಗೆಲ್ಲಿಸಿ : ಮಂಗಲಾ ಅಂಗಡಿ
ಉರಿಯುವ ಬಿಸಿಲನ್ನು ಲೆಕ್ಕಸದೆ ಗೋಕಾಕದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ದಿನದಿನಕ್ಕೆ ರಂಗೆರುತ್ತಲಿದೆ,
ಗೋಕಾಕ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ತಮ್ಮ ಗೆಲುವಿಗಾಗಿ ಸ್ಥಳಿಯ ಮುಖಂಡರೊಂದಿಗೆ ಮತಯಾಚನೆ ಮಾಡುತ್ತ ಬಿಜೆಪಿ ಅಬ್ಯರ್ಥಿ ಶ್ರೀಮತಿ, ಮಂಗಲಾ ಅಂಗಡಿಯವರು ನಾಲ್ಕು ಬಾರಿ ಸುರೇಶ ಅಂಗಡಿಯವರನ್ನು ನಾಲ್ಕು ಬಾರಿ ಅಳಿಯನಾಗಿ ಗೆಲ್ಲಿಸಿದ್ದಿರಿ, ಈಗ ನನ್ನನ್ನು ತಮ್ಮ ಮನೆಯ ಮಗಳಾಗಿ ಗೆಲ್ಲಿಸಿರೆಂದು ಮತದಾರರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಇವರು ಮಾತನಾಡಿ ಸುರೇಶ ಅಂಗಡಿಯವರ ದರ್ಮ ಪತ್ನಿಯವರಿಗೆ ಮತನೀಡಿ ಸುರೇಶ ಅಂಗಡಿಯವರಿಗೆ ಶೃದ್ದಾಂಜಲಿ ಅರ್ಪಿಸಿ ಎಂದರು,
ಇದೆ ಸಂದರ್ಭದಲ್ಲಿ ಮಾತನಾಡಿದ ಸಂಜಯ ಪಾಟೀಲ ಇವರು ಬಿಜೆಪಿ ಮುಸ್ಲಿಂ ಸಮುದಾಯದ ವಿರೋದಿಯೆಂದು ಕಾಂಗ್ರೆಸ್ ಬಿಂಬಿಸುತ್ತಾ ಬಂದಿದೆ.ಆದರೆ ಇವತ್ತು ನರೇಂದ್ರ ಮೋದಿಯವರ ತಲಾಕದಂತಹ ಅಲ್ಪ ಸಂಖ್ಯಾತರ ಅಬಿವೃದ್ದಿಗಾಗಿ ಹತ್ತು ಹಲವಾರು ಯೋಜನೆಗಳನ್ನು ತರುವುದರ ಮೂಲಕ ಬಿಜೆಪಿ ಮುಸ್ಲಿಂರ ಪರ ಎಂದು ತೊರಿಸದೆ,ಅದಲ್ಲದೆ ಬಿಜೆಪಿ ಯಾವತ್ತು ಜಾತಿ ಮತ ಬ್ಯಾಂಕ ನೋಡಲ್ಲ ಮನುಷ್ಯತ್ವವನ್ನು ನೋಡುತ್ತಾ ಬಂದಿದೆ, ಅದಕ್ಕೆ ಇವತ್ತು ಎಲ್ಲ ಸಮುದಾಯದವರು ಬಿಜೆಪಿ ಪರ ನಿಂತಿದ್ದಾರೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್, ಎಲ್,ಮುತ್ತೆನ್ನವರ, ಬಿಜೆಪಿಯ ಜಿಲ್ಲಾದಕ್ಷ ಸಂಜಯ ಪಾಟೀಲ,ಸುಭಾಸ ಪಾಟೀಲ, ಶೃದ್ದಾ ಶೆಟ್ಟರ, ನಗರ ಘಟಕದ ಅದ್ಯಕ್ಷ ಭೀಮಶಿ ಭರಮನ್ನವರ,ಪರಶುರಾಮ ಭಗತ್, ದುರ್ಗಪ್ಪ ಶಾಸ್ತ್ರಿಗೊಲ್ಲರ, ಖುತುಬುದ್ದೀನ್ ಗೋಕಾಕ, ಅಬ್ಬಾಸ ದೇಸಾಯಿ,ಅಜರ ಮುಜಾವರ, ಜಾವೇದ ಗೋಕಾಕ,ಪ್ರೇಮಾ ಬಂಡಾರಿ,ರಾಜೇಶ್ವರಿ ವಡೆಯರ, ಶ್ರೀದೇವಿ ತಡಕೂಡ, ನೂರಾರಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.