ಭಾರತ ದೇಶದಲ್ಲಿ ಹುಟ್ಟಿದವರು ಪುಣ್ಯವಂತರು: ನಾರಾಯಣ ಮಠಾಧಿಕಾರಿ
ಗೋಕಾಕದ ಸೋಮಾವಾರ ಪೇಠದಲ್ಲಿರುವ ಮುಪ್ಪಯ್ಯನಮಠದಲ್ಲಿ ಹಿಂದೂಪರ ಸಂಘಟನೆಗಳು ತಾಲೂಕಾ ಘಟಕ ಗೋಕಾಕ ಇವರಿಂದ ಕ್ರಾಂತಿವೀರ ಭಗತ ಸಿಂಗ ಅವರ 115 ನೇ ಜಯಂತಿಯನ್ನು ಆಚರಿಸಿದರು.
ಕಾರ್ಮಿಕ ದುರೀಣ ಅಂಬಿರಾವ ಪಾಟೀಲ ಇವರು ಭಾರತಾಂಬೆ ಮತ್ತು ಕ್ರಾಂತಿವೀರ ಭಗತ ಸಿಂಗ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪೂಜೆ ಸಲ್ಲಿಸುವುದರ
*ಮೇರೆ ರಂಗ ದೆ ಬಸಂತಿ ಚೋಲಾ* ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಹಿಂದೂ ಪರ ಸಂಘಟನೆಗಾಗಿ ದುಡಿದಂತಹ ಗಣ್ಯರಿಗೆ ಮತ್ತು ಕೊರೋನಾ ಸಮಯದಲ್ಲಿ ದುಡಿದಂತಹ ವಾರಿಯರ್ಸಗಳಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ನಂತರ ವಕ್ತಾರ ನಾರಾಯಣ ಮಠಾಧಿಕಾರಿ ಇವರು ಮಾತನಾಡಿ ಭಗತ ಸಿಂಗರ ಇತಿಹಾಸವನ್ನು ತಿಳಿಸುತ್ತ ಕೇವಲ ಶಾಂತಿಯಿಂದ ಸ್ವಾತಂತ್ರ್ಯ ಸಿಕ್ಕಿದೆ ಅಂದರೆ ಇವತ್ತು ಬಲಿದಾನ ನೀಡಿದ ಕ್ರಾಂತವೀರರಾದ ಭಗತ ಸಿಂಗ್, ರಾಜಗುರು ಇವರ ಬಲಿದಾನ ವ್ಯರ್ಥವಾಗುತ್ತದೆ,
ಭಾರತ ಪುಣಭೂಮಿ, ಭಾರತದಲ್ಲಿ ಹುಟ್ಟಿದವರು ಪುಣ್ಯವಂತರು,ಭಾರತದ ಇತಿಹಾಸ ಹೋರಾಟ ಮಾಡಿದ ಜೊತೆ ಜಯಬೇರಿಯ ಇತಿಹಾಸ ಹೊಂದಿದೆ,ಎಲ್ಲ ರಂಗದಲ್ಲೂ ನಿಶ್ವಾರ್ಥ ಸೇವೆ ಮಾಡುವುವರು ನಿಜವಾದ ದೇಶ ಭಕ್ತರು.ಈಗಿನ ಯುವಕರು ತಮ್ಮಲ್ಲಿ ಭಗತ ಸಿಂಗನಂತೆ ದೇಶದ ಭಕ್ತಿಬೆಳೆಸಿಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಮಂಡಲದ ಅದ್ಯಕ್ಷ ಬೀಮಶಿ ಭರಮನ್ನವರ, ತಾಲೂಕಾ ಅದ್ಯಕ್ಷ ರವಿ ಪೂಜೇರಿ, ಶೀವು ಹೀರೆಮಠ, ರಾಮಚಂದ್ರ ಕಾಕಡೆ,ನಗರಸಭೆಯ ಅದ್ಯಕ್ಷರು,ಸದಸ್ಯರು ಮತ್ತು ನೂರಾರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.