Breaking News

ಗೋಕಾಕ ಒಬಿಸಿ ಮೋರ್ಚಾ ನಗರ ಘಟಕದಿಂದ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಬರೆಯುವ ಮಹಾ ಅಭಿಯಾನ.

Spread the love

ಗೋಕಾಕ ಒಬಿಸಿ ಮೋರ್ಚಾ ನಗರ ಘಟಕದಿಂದ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಬರೆಯುವ ಮಹಾ ಅಭಿಯಾನ.

ಗೋಕಾಕ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್‌ 7ರ ವರೆಗೆ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೋಸ್ಟ್‌ ಕಾರ್ಡ್‌ ಮಹಾ ಅಭಿಯಾನವನ್ನು ನಗರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ವಾರ್ಡ ನಂ 19 ಮತ್ತು 20 ರ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಮ್ಮಿಕೊಂಡಿದ್ದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಸಾದರ ವಂದನೆಗಳು ಮತ್ತು ಜನುಮದಿನದ ಹಾರ್ಧಿಕ ಶುಭಾಶಯಗಳು. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು- ಅಭಿವೃದ್ಧಿ ಪರವಾದ ಆಡಳಿತ, ಭ್ರಷ್ಟಾಚಾರರಹಿತ ಅಧಿಕಾರಾವಧಿ, ಅತ್ಯುತ್ತಮ ಆಡಳಿತ- ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ನೀಡುತ್ತಿರುವುದು ಅಭಿನಂದನೀಯ ಎಂದು ಒಬಿಸಿ ಮೋರ್ಚಾ ಪದಾಧಿಕಾರಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಮಯದಲ್ಲಿ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಅವರು ಮಾತನಾಡಿ ಭಾರತವನ್ನು ವಿಶ್ವಗುರುವನ್ನಾಗಿಸುವ ತಮ್ಮ ಮಹೋನ್ನತ ಸಂಕಲ್ಪ ಹೊಂದಿರುವ ನಿಮಗೆ ಇನಷ್ಟು ಸೌಭಾಗ್ಯ, ಆಯುರ ಆರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ ಎಂದು ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣನವರ,ರಾಯಪ್ಪ ಗುದಗಣ್ಣವರ ಶಿವಾಜಿ ಸುಭಂಜಿ, ಶಶಿಕಾಂತ ಕುರಬೇಟ, ಶ್ರೀಶೈಲ್ ಕುಂಬಾರ, ಮಹಾಂತೇಶ ಕುಂಬಾರ, ಮಹಾದೇವ ಸಂಕಪಾಳ,ಸಂತೋಷ ಖಂಡ್ರೆ, ಶಶಿ ಕನಪ್ಪನವರ, ಸಾಯಿನಾಥ, ಟಿಪ್ಪುಕುಡೆ, ಅಮಿತ್ ಮಾಳಿ, ರಮೇಶ್ ನಾಯ್ಕ, ನವೀನ ಜರತಾರಕರ ಸುರೇಶ ಬೀರನಗಡ್ಡಿ, ಲಕ್ಷ್ಮಣ ಕಿಲಾರಿ, ಕಸ್ತೂರಿ ಸಿ ಶಾಹಾಬಂದರ, ಕೆಂಪಣ್ಣಾ ಮಲ್ಲಾಡದವರ, ಸತೀಶ್ ಮನ್ನಿಕೇರಿ, ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು, ವಾರ್ಡ ನಂ 19 ಮತ್ತು 20 ರ ಸಮಸ್ತ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *