Breaking News

ವಿದ್ಯೆ ಹೆಣ್ಣುಮಕ್ಕಳಿಗೆ ಭೂಷಣವಿದ್ದಂತೆ : ಕಾರಜೋಳ

Spread the love

ವಿದ್ಯೆ ಹೆಣ್ಣುಮಕ್ಕಳಿಗೆ ಭೂಷಣವಿದ್ದಂತೆ : ಕಾರಜೋಳ

ಶಿಕ್ಷಣಕ್ಕೆ ಶ್ರೀಮಂತ,ಬಡತನ ಅನ್ನೋದು ಗೊತ್ತಿರುವುದಿಲ್ಲ ಅದರಂತೆ ಈಗಿನ ಮಕ್ಕಳ ಪಾಲನೆಯಲ್ಲಿ ಜವಾಬ್ದಾರಿಯನ ಪಾಲಕಾರು ಮುತುರ್ವಹಿಸಿ ಜವಾಬ್ದಾರಿಯನ್ನು ನಿಬಾಯಿಸಬೇಕಾಗಿದೆ ಎಂದುಗೋಕಾಕ ತಾಲೂಕಿನ‌ ಖನಗಾಂವ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ದಸರಾ ಹಬ್ವದ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ರಜೆ ನೀಡಿದ ನಿಮಿತ್ಯ ನಡೆದ ಪಾಲಕರ ಸಭೆಯಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಕಾರಜೋಳ ಇವರು ಸಂಸ್ಕಾರ ನಮ್ಮಲ್ಲಿದ್ದ ಪೌರುಷವನ್ನು ಎತ್ತಿ ಹಿಡಿಯುವಂತಾಗಬೇಕು,

ಅದಕ್ಕಾಗಿ ಹೆಣ್ಣು ಎಂಬ ಬೇದ ಭಾವಮಾಡದೆ ಹೆಚ್ಚಿನ ವಿದ್ಯಾಬ್ಯಾಸ ನೀಡಿರಿ, ಸರಕಾರ ನೀಡುವ ಎಲ್ಲ ಸೌಲಬ್ಯಗಳ ಸದುಪಯೋಗ ಪಡೆದುಕೊಳ್ಳಬೇಕು, ಎಲ್ಲರ ಮನೆಯಲ್ಲಿ ಆಗುವಂತೆ ಇಲ್ಲಿಯೂ ಕೂಡ ತಪ್ಪುಗಳು ಆಗುವುದು ಸಹಜ ಅದನ್ನು ಪಾಲಕರು ಅರಿತುಕೊಂಡು ಇಲ್ಲಿ ಕಲಿಯುತ್ತಿರುವ ತಮ್ಮ ವಿದ್ಯಾಬ್ಯಾಸದ ಜೊತೆ ಆರೋಗ್ಯ ಕಡೆ ಗಮನ ಹರಿಸಲು ತಿಳಿಸಿದರು, ಅದಲ್ಲದೆ ಮಕ್ಕಳ ಕೈಯಲ್ಲಿ ಪಾಲಕರು ಮೊಬೈಲ್ ನೀಡುವುದನ್ನು ನಿಲ್ಲಿಸಬೇಕು.

ಯಾಕೆಂದರೆ ಮೊಬೈಲ ಉಪಯೋಗ ಎಷ್ಟು ಒಳ್ಳೆಯದು ಅದರಿಂದ ದುರುಪಯೋಗ ಕೂಡ ಅಷ್ಟೆ ಇದೆ ಅಂದರು, ಈ ಸಮಯದಲ್ಲಿ ಪ್ರಾಂಶುಪಾಲರು ಇಲ್ಲಿನ ನೀರಿನ ಸಮಸ್ಯೆ, ಸೋಲಾರ ಸಮಸ್ಯೆ ಬಗ್ಗೆ ಪಾಲಕರ ಎದುರು ಹೇಳುತ್ತಿರುವಾಗ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತಿಳಿಸಲು ವಿನಂತಿಸಿ ಈಗ ಕಂಪ್ಯೂಟರ್ ಯುಗವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿದ್ಯೆ ನೀಡಲು ಪಾಲಕರು ಶಿಕ್ಷಕರಲ್ಲಿ ವಿನಂತಿಸಿದರು.

ಈ ಸಮಯದಲ್ಲಿ ವಾರ್ಡನ ಗುರುಸಿದ್ದಪ್ಪ ಕಣಬರ್ಗಿ ಮಾತನಾಡಿ ಕೊರಾನಾ ಕಾರಣದಿಂದ ಪಾಲಕರ ಮತ್ತು ನಮ್ಮ ಸಿಬ್ಬಂದಿಗಳ ನಡುವಿನ ಭಾಂದವ್ಯ ಕಳಚಿದಂತಾಗಿತ್ತು ಆದರೆ ಈಗ ಮತ್ತೆ ಎಲ್ಲರೂ ಕೂಡಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ದುಡಿಯೋಣ ಅದಕ್ಕಾಗಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದಾಗ ಆಟದ ಜೊತೆಯಲ್ಲಿ ಅವರ ವಿದ್ಯಾಬ್ಯಾಸ ಕಡೆ ಒತ್ತು ನೀಡಲು ತಿಳಿಸಿದರು.

ಇನ್ನೊರ್ವ ಶಿಕ್ಷಕರಾದ ಈರಣ್ಣಾ ಶಿರಾಳಶೆಟ್ಟಿ ಇವರು ಈಗಿನ ಸಮಯದಲ್ಲಿ ಪಾಲಕರು ತಮ್ಮ ಮಕ್ಕಳು ಎಸ್,ಎಸ್,ಎಲ್,ಸಿ, ಉತ್ತೀರ್ಣರಾದ ನಂತರ ತಮ್ಮ ಸಂಬಂದಿಕರ ಜೊತೆಯಲ್ಲಿ ಬೇಗನೆ ಮದುವೆ ಮಾಡಿಕೊಡುತ್ತಾರೆ ಅದನ್ನು ನಿಲ್ಲಿಸಬೇಕು, ಅವರಿಗೂ ಜೀವನದಲ್ಲಿ ಎನಾದರೂ ಸಾದಿಸಬೇಕೆಂಬ ಚಲ ಇರುತ್ತದೆ ಅದಕ್ಕೆ ತಾವು ಬೆನ್ನುಲುಬಾಗಿ ನಿಲ್ಲಬೇಕು,ಅದೆ ರೀತಿ ಈ ನಮ್ಮ ಶಾಲೆಯಿಂದ ಸರಕಾರದ ಎಲ್ಲ ಇಲಾಖೆಗಳಲ್ಲಿಯೂ ಸೇವೆ ಸಲ್ಲಿಸುತಿದ್ದಾರೆ ಆದರೆ ವೈದ್ಯಾರಾಗಿ ಸೇವೆ ಸಲ್ಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಇನ್ಮುಂದೆ ಮುಂದಿನ ದಿನಮಾನಗಳಲ್ಲಿ ಈ ಶಾಲೆಯಿಂದ ವಿದ್ಯೆ ಕಲಿತವರು ವೈದ್ಯರಾಗಿ ಸೇವೆ ಸಲಿಸಲು ಪಾಲಕರು ಹೆಚ್ಚಿನ ವಿದ್ಯಾಬ್ಯಾಸ ನೀಡಲು ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಶಿಕ್ಷಕರು, ಸಿಬ್ಬಂದಿಗಳು ನೂರಾರು ಪಾಲಕರು ಉಪಸ್ಥಿತರಿದ್ದರು


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *