Breaking News

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love

*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

ಗೋಕಾಕ : ಅಂದಾಜು 25 ರಿಂದ 30 ವರ್ಷದ ಮಹಿಳೆಯ ಕುತ್ತಿಗೆ ಕೊಯ್ದು ನಂತರ ಕೆನಾಲ ಪಕ್ಕ ಸುಟ್ಟು ಬಿಸಾಕಿ ಹೋದ ಘಟನೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಮದಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮದ್ಯಾನ್ಹ 2 ಗಂಟೆಗೆ ಹೊಗೆ ಬರುವುದನ್ನ ಸ್ಥಳೀಯರು ನೋಡಿ ಸುಟ್ಟು ಬಿದ್ದಿದ ಮಹಿಳೆಯ ಶವ ನೋಡಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಆಗಮಿಸಿ ಪರಿಶಿಲನೆ ಮಾಡುತಿದ್ದಾರೆ, ಇನ್ನು ಕೊಲೆಗಿಡಾದ ಮಹಿಳೆಯ ವಿವರ ಪತ್ತೆಯಾಗದ ಕಾರಣ ಪೋಲಿಸರು ವಿವರ ಕಲೆಹಾಕುತಿದ್ದಾರೆ.

ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿದ್ದು ತನಿಖೆ ಆರಂಭಿಸಿದ್ದಾರೆ.ಮಹಿಳೆಯನ್ನು ಬೇರೆ ಕಡೆ ಮೊದಲು ಕೊಲೆ ಮಾಡಿ ನಂತರ ಸಾಕ್ಷ್ಯವನ್ನು ನಾಶಪಡಿಸುವ ಪ್ರಯತ್ನದಲ್ಲಿ ಸುಟ್ಟು ಹಾಕಲಾಗಿದೆ ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.ಅದರಂತೆ ಸ್ಥಳದಲ್ಲಿ ರಕ್ತದ ಕಲೆಗಳು ಗುರ್ತು ಪತ್ತೆಯಾಗಿದ್ದು ಪರಿಶಿಲನೆ ಮಾಡುತಿದ್ದಾರೆ.


Spread the love

About Fast9 News

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *