ಕನ್ನಡಿಗರಿಗೆ ಅವಮಾನ ಮಾಡಿದ ಎಮ್,ಇ,ಎಸ್,ಪುಂಡರನ್ನು ಗಡಿಪಾರು ಮಾಡಬೇಕು : ಈರಪ್ಪ ಮಾರಾಪುರ.
2
ಗೋಕಾಕದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆಯಿಂದ ಎಮ್.ಇ.ಎಸ್. ಮತ್ತು ಶಿವಸೇನೆಯ ಪುಂಡರ ವಿರುದ್ಧ
ಪ್ರತಿಭಟನೆ ಮಾಡಿದರು.
ಕನ್ನಡಿಗರ ಆಶಾ ಕಿರಣ ಕೆಚ್ಚೆದೇಯ
ಭಂಟ ಅಪ್ಪಟ ದೇಶ ಭಕ್ತ ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಕ್ರಾಂತಿ ಕಿಡಿ ಸಂಗೊಳ್ಳಿ ರಾಯಣ್ಣನ
ಮೂರ್ತಿಯನ್ನು ಹಾಗೂ ಸರ್ಕಾರದ ವಾಹನಗಳನ್ನು ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿ
ಎಮ್.ಇ.ಎಸ್ ಹಾಗೂ ಶಿವ ಸೇನೆ ಕಾರ್ಯಕರ್ತರು ತಮ್ಮ ಹೇಡಿತನ ತೊರಿಸುತಿದ್ದಾರೆ,
ಕನ್ನಡ ಭಾವುಟ ಸುಟ್ಟು ರಾಯಣ್ಣನ ಮೂರ್ತಿ,ಧ್ವಂಸ ಮಾಡಿ,ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಸೆಗಣಿ ಏರಚಿ ಅಪಮಾನ ಮಾಡಿ ಅಖಂಡ ಕರ್ನಾಟಕದ
ಏಳು ಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಮಾಡಿ
ಗುಂಡಾವರ್ತನೆ ಮಾಡುತಿದ್ದಾರೆ.
ಇದನ್ನುಕರ್ನಾಟಕ ನವ ನಿರ್ಮಾಣ ವೇದಿಕೆ (ರಿ) ವತಿಯಿಂದ ಖಂಡಿಸುತ್ತದೆ. ಹಾಗೂ ಕನ್ನಡ
ನಾಡುನುಡಿ,ನೆಲ,ಜಲ.ಭಾಷೆ ಮತ್ತು ಕನ್ನಡಿಗರ ಅಶ್ಮಿತೆಯನ್ನು ಪದೇ ಪದೇ ಕೆಣಕುತ್ತಿರುವ ಕನ್ನಡಿಗರ
ತಾಳ್ಮೆಯನ್ನು ಪರಿಕ್ಷೀಸುತ್ತಿರುವ ಎಮ್.ಇ.ಎಸ್ ಕಾರ್ಯಕರ್ತರ ಪುಂಡಾಟಿಕೆಯನ್ನು ಹತ್ತಿಕ್ಕಬೇಕೆಂದು
ಬಸವೇಶ್ವರ ವೃತ್ತದಿಂದ ತಹಸಿಲ್ದಾರ ಕಚೇರಿಗೆ ತರೆಳಿ ತಹಸಿಲ್ದಾರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆಯ ಯುವ ಘಟಕದ
ರಾಜ್ಯಾಧ್ಯಕ್ಷರು ಈರಪ್ಪ ಮಾರಾಪುರ,ರಾಜ್ಯ ಉಪಾದಕ್ಷರು, ಅಡಿವೆಪ್ಪ ಬಿಲಕುಂದಿ, ಜಿಲ್ಲಾ ಅದ್ಯಕ್ಷ ಪೂಜಾ ಅಟಕರ, ಚಿಕ್ಕೋಡಿ ತಾಲೂಕಾ ಅದ್ಯಕ್ಷ ಶ್ರೀಶೈಲ ಬಗವತಿ, ತಾಲೂಕಾ ಅದ್ಯಕ್ಷ ಮಹೇಶ ಹುಡೇದ, ರಾಷ್ಟ್ರೀಯ ಸಂಗೋಳ್ಲಿ ರಾಯಣ್ಣ ಸೇನೆ ತಾಲೂಕಾ ಅದ್ಯಕ್ಷ ಗೋಪಾಲ ವಾಲಿಕಾರ,ವಿನಯಕುಮಾರ ಬಾನಸಿ, ಮಾರುತಿ ಮುಗುಳಿಹಾಳ ಹಾಗೂ ಇನ್ನೂಳಿದ ನೂರಾರು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಬಾಗಿಯಗಿದ್ದರು, ಇವರಿಂದ ಆಗ್ರಹಿಸಿದರು.
Fast9 Latest Kannada News