ವಿದ್ಯಾರ್ಥಿಗಳು ಸದೃಢ ಭಾರತ ನಿರ್ಮಾಣ ನಿರ್ಮಿಸಬೇಕಾಗಿದೆ : ಕಾರಜೋಳ
ಕರ್ನಾಟಕ ಸರಕಾರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಇವರ ಆದೇಶದಂತೆ
15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಕಾರ್ಯಕ್ರಮದ ಅಂಗವಾಗಿ ಗೋಕಾಕ ತಾಲೂಕಿನ ಖನಗಾಂವದಲ್ಲಿರುವ
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗೋಕಾಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಖನಗಾಂವನ ಜಂಟಿ ನೆತೃತ್ವದಲ್ಲಿ ದಿನಾಂಕ ಇಂದು ಖನಗಾಂವ ವಸತಿ ಶಾಲೆಯಲ್ಲಿ ಲಸಿಕಾಕರಣ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಪ್ರಾರಂಭಿಸಲಾಯಿತು.
ಸದೃಢ ಭಾರತ ನಿರ್ಮಾಣ ನಿರ್ಮಿಸುವ ನಿಟ್ಟಿನಲ್ಲಿ ಪ್ರಾಂಶುಪಾಲರ ನೇತೃತ್ವದಲ್ಲಿ ಸಮಸ್ತ ಸಿಬ್ಬಂದಿಗಳು ಪಾಲಕರ ಸಭೆ ಆಯೋಜಿಸಿ ಪಾಲಕರಿಗೆ ಹಾಗೂ ಮಕ್ಕಳಿಗೆ ಲಸಿಕೆಯ ಮಹತ್ವ ಹಾಗೂ ಕೋವಿಡ ನಿಯಮ ಪಾಲನೆ ಕುರಿತು ಮನವರಿಕೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು ಎಲ್ಲರಿಗೆ ಲಸಿಕೆ ನೀಡಲು ಪಾಲಕರಲ್ಲಿ ಮನವರಿಕೆ ಮಾಡಿಕೂಟ್ಟರು.
ಹಾಗೂ ಎಲ್ಲ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗೋಕಾಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿಗಳು ಮತ್ತು ವಸತಿ ಶಾಲೆಯ ಸಮಸ್ತ ಸಿಬ್ಬಂದಿಗಳು ಪಾಲ್ಗೊಂಡಿದ್ದರು.