Breaking News

ಕೊರೊನಾ ತಂತು ಮತ್ತೆ ಶಾಲೆಗೆ ಬಿಗ,ನಾಳೆಯಿಂದ ಇದೆ ದಿ: 18ರವರೆಗೆ 1ರಿಂದ 9 ವರೆಗಿನ ಶಾಲೆಗಳು ಬಂದ್,,,

Spread the love

ಕೊರೊನಾ ತಂತು ಮತ್ತೆ ಶಾಲೆಗೆ ಬಿಗ,ನಾಳೆಯಿಂದ ಇದೆ ದಿ: 18ರವರೆಗೆ 1ರಿಂದ 9 ವರೆಗಿನ ಶಾಲೆಗಳು ಬಂದ್,,,

ರಾಜ್ಯಾದ್ಯಂತ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಸನ್ಮಾನ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು , ರಾಜ್ಯ ಕಾರ್ಯಕಾರಿ ಸಮಿತಿ ಕರ್ನಾಟಕ ಸರ್ಕಾರ ರವರು ಉಲ್ಲೇಖ ( 1 ) ರವರು ಉಲ್ಲೇಖ ( 1 ) ಮತ್ತು ( 2 ) ರಂತೆ ಹಲವಾರು ಮುನ್ನೇಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿರುತ್ತಾರೆ . ದಿನಾಂಕ : 10.01.2022 ರಂದು ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಸಭೆಯಲ್ಲಿ ವಿವರವಾಗಿ ಚರ್ಚಿಸಿದಂತೆ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿಯಾಗಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ . ಆದೇಶ ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗೃತಾ ಕ್ರಮವಾಗಿ ಎಂ.ಜಿ.ಹಿರೇಮಠ , ಭಾ.ಆ.ಸೇ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ , ಬೆಳಗಾವಿ.ಇವರು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಹಾಗೂ ಸರ್ಕಾರದ ಉಲ್ಲೇಖ ( 1 ) ರ ಆದೇಶದ ಭಾಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ವಸತಿ ಶಾಲೆಗಳನ್ನೊಳಗೊಂಡು 1 ರಿಂದ 9 ನೇ ತರಗತಿ ವರೆಗಿನ ಎಲ್ಲಾ ಮಾಧ್ಯಮದ ಶಾಲೆಗಳನ್ನು ದಿನಾಂಕ .11.2022 ರಿಂದ 18.01.2022 ರ ವರೆಗೆ ತೆರೆಯದಂತೆ ಆದೇಶಿಸಲಾಗಿದೆ . ಈ ಆದೇಶವನ್ನು ದಿನಾಂಕ : 10 .01.2022 ರಂದು ಆದೇಶ ಹೊರಡಿಸಲಾಗಿದೆ . ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ತಿಳಿಸಿದ್ದಾರೆ.


Spread the love

About Fast9 News

Check Also

ದೃಶ್ಯ ಮಾದ್ಯಮಗಳ ಹೆಸರಿನಲ್ಲಿ  ಭ್ರಷ್ಟಾಚಾರ, ದರ್ಬಳಕೆ,ಹಪ್ತಾ ವಸೂಲಿಗೆ ಕಡಿವಾಣ ಹಾಕಲು ಮುಂದಾದ ಬೆಳಗಾವಿ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಮತ್ತು ಎಸ್,ಪಿ,ಗೆ ಮನವಿ

Spread the loveದೃಶ್ಯ ಮಾದ್ಯಮಗಳ ಹೆಸರಿನಲ್ಲಿ  ಭ್ರಷ್ಟಾಚಾರ, ದರ್ಬಳಕೆ,ಹಪ್ತಾ ವಸೂಲಿಗೆ ಕಡಿವಾಣ ಹಾಕಲು ಮುಂದಾದ ಬೆಳಗಾವಿ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ …

Leave a Reply

Your email address will not be published. Required fields are marked *