Breaking News

ಅಂಕಲಗಿ ಪಿಎಸ್ಐ ವಿರುದ್ದ ದಲಿತ ಸಂಘಟನೆಗಳ ಪ್ರತಿಭಟನೆ,ತಕ್ಷಣ ವರ್ಗಾವಣೆ ಮಾಡಲು ಒತ್ತಾಯ,

Spread the love

ಅಂಕಲಗಿ ಪಿಎಸ್ಐ ವಿರುದ್ದ ದಲಿತ ಸಂಘಟನೆಗಳ ಪ್ರತಿಭಟನೆ,ತಕ್ಷಣ ವರ್ಗಾವಣೆ ಮಾಡಲು ಒತ್ತಾಯ,

ನ್ಯಾಯ ಕೆಳಲು ಹೋದ ದಲಿತ ಮುಖಂಡನ ಮೇಲೆ ಪಿ,ಎಸ್,ಐ, ಒಬ್ಬರು ಅವಾಜ ಹಾಕಿದ್ದಲ್ಲದೆ ತನ್ನ ಅದಿಕಾರದ ದುರಪಯೋಗ ಪಡೆಸಿಕೊಂಡು ಆ ಮುಖಂಡನ ಮೇಲೆ 307 ಪ್ರಕರಣ ದಾಖಲಿಸಿದ್ದ ಘಟನೆ ಗೋಕಾಕ ತಾಲೂಕಿನ ಅಂಕಲಗಿ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಕಲ್ಲಪ್ಪ ಪುಂಡಲೀಕ ಮಾದರ ಈತನ ಮನೆಗೆ ಸ್ಥಳಿಯರ ಜೊತೆ ಪೋಲಿಸ್ ಅಧಿಕಾರಿ ಸೇರಿ ಕಲ್ಲಪ್ಪ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಮನೆಗೆ ನುಗ್ಗಿ ಕೃತ್ಯ ಎಸಗಿದ್ದರ ಬಗ್ಗೆ ಅಂಕಲಗಿ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದನ್ನು ಪಿ,ಎಸ್,ಐ, ಪ್ರಕಾಶ ರಾಥೋಡ ಇವರು ತಪ್ಪಿಸ್ಥರ ಮೇಲೆ ಕ್ರಮಕೈಗೊಳ್ಳದೆ ಇದ್ದಾಗ ದಲಿತ ಮುಖಂಡ ಕರೆಪ್ಪಾ ಗುಡೆನ್ನವರ ಇವರು ವಿಚಾರಿಸಲು ಹೋದ ಸಮಯದಲ್ಲಿ ಪಿ,ಎಸ್,ಐ, ಪ್ರಕಾಶ ರಾಥೋಡ ಇವರು ನ್ಯಾಯ ಕೊಡಿಸುವ ಬದಲಾಗಿ ತಿರುಗಿ ಹಲ್ಲೆ ಮಾಡಿದ ಕರಿಂಸಾಬ,ಅಕಾನಸಾಬ,ದೇಸಾಯಿ, ಮತ್ತು ಮುಖಂಡರು ಸಾಹೇಬಸಾಬ,ದೇಸಾಯಿ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದೆ ಅನ್ಯಾಯಕ್ಕೋಳಗಾದ ಪುಂಡಲೀಕ ಮಾದರ ಹಾಗೂ ಅರ್ಜುನ ಗುಡೆನ್ನವರ ಇವರ ಮೇಲೆ ಸೆಕ್ಷೇನ್ 307 ಹಾಕಿ ತನ್ನ ಅಧಿಕಾರದ ದರ್ಪ ತೋರಿದ್ದಾನೆಂದು ಗೋಕಾಕದ ಬಸವೇಶ್ವರ ವೃತ್ತದಿಂದ ತಹಸಿಲ್ದಾರ ಕಚೇರಿ ತನಕ ಪಾದಯಾತ್ರೆ ಮಾಡಿ ದಲಿತರನ್ನು ತಪ್ಪಿಸ್ಥರ ಜೊತೆ ಕೈ ಜೋಡಿಸಿದ ಅಂಕಲಗಿ ಪಿ,ಎಸ್,ಐ, ಪ್ರಕಾಶ ರಾತೋಡ ಇವರನ್ನು ತಕ್ಷಣ ವರ್ಗಾವಣೆ ಮಾಡಿ ಆದೇಶಿಸಿ ನ್ಯಾಯ ದೊರಕಿಸಲು ಹಲವಾರು ಜನ ದಲಿತ ಮುಖಂಡರು ತಹಸಿಲ್ದಾರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಒಂದು ವೇಳೆ ತಪ್ಪಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಪೋಲಿಸ ವರಿಷ್ಟಾದಿಕಾರಿಗಳ ಕಚೇರಿ ಮುಂದೆ ಪ್ರತಿಬಟನೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಭೀಮ‌ ಆರ್ಮಿಯ ಅದ್ಯಕ್ಷರಾದ ಸುನೀಲ ಕೊಟಬಾಗಿ, ಸಂತೋಷ ದೊಡಮನಿ, ಸತ್ತೆಪ್ಪ ಕರವಾಡಿ,ಲಕ್ಷಣ ದರ್ಮಟ್ಟಿ ಇನ್ನು ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.


Spread the love

About Fast9 News

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *