ಕೊರೊನಾ ತಂತು ಮತ್ತೆ ಶಾಲೆಗೆ ಬಿಗ,ನಾಳೆಯಿಂದ ಇದೆ ದಿ: 18ರವರೆಗೆ 1ರಿಂದ 9 ವರೆಗಿನ ಶಾಲೆಗಳು ಬಂದ್,,,
ರಾಜ್ಯಾದ್ಯಂತ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಸನ್ಮಾನ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು , ರಾಜ್ಯ ಕಾರ್ಯಕಾರಿ ಸಮಿತಿ ಕರ್ನಾಟಕ ಸರ್ಕಾರ ರವರು ಉಲ್ಲೇಖ ( 1 ) ರವರು ಉಲ್ಲೇಖ ( 1 ) ಮತ್ತು ( 2 ) ರಂತೆ ಹಲವಾರು ಮುನ್ನೇಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿರುತ್ತಾರೆ . ದಿನಾಂಕ : 10.01.2022 ರಂದು ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಸಭೆಯಲ್ಲಿ ವಿವರವಾಗಿ ಚರ್ಚಿಸಿದಂತೆ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿಯಾಗಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ . ಆದೇಶ ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಕೋವಿಡ್ -19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗೃತಾ ಕ್ರಮವಾಗಿ ಎಂ.ಜಿ.ಹಿರೇಮಠ , ಭಾ.ಆ.ಸೇ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ , ಬೆಳಗಾವಿ.ಇವರು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಹಾಗೂ ಸರ್ಕಾರದ ಉಲ್ಲೇಖ ( 1 ) ರ ಆದೇಶದ ಭಾಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ವಸತಿ ಶಾಲೆಗಳನ್ನೊಳಗೊಂಡು 1 ರಿಂದ 9 ನೇ ತರಗತಿ ವರೆಗಿನ ಎಲ್ಲಾ ಮಾಧ್ಯಮದ ಶಾಲೆಗಳನ್ನು ದಿನಾಂಕ .11.2022 ರಿಂದ 18.01.2022 ರ ವರೆಗೆ ತೆರೆಯದಂತೆ ಆದೇಶಿಸಲಾಗಿದೆ . ಈ ಆದೇಶವನ್ನು ದಿನಾಂಕ : 10 .01.2022 ರಂದು ಆದೇಶ ಹೊರಡಿಸಲಾಗಿದೆ . ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ತಿಳಿಸಿದ್ದಾರೆ.