ಇ ಪುರಸಭೆಯಲ್ಲಿ ಕಸದ ಬುಟ್ಟಿಗೂ ಬರ ಇದೆಯಂತೆ,,
ಪಟ್ಟಣದ ಪೌರ ಕಾರ್ಮಿಕರಿಗೆ ನಗರದ ಕಸ ಎತ್ತಲು ಬುಟ್ಟಿಗೂ ಬರ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಾದರೂ ಪಟ್ಟಣದ ಬೀದಿ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಸಮರ್ಪಕ ಸವಲತ್ತು ಸಿಗದೇ ಕಸ ಎತ್ತಲು ಹಾಕುವ ಶ್ರಮ ಆಡಳಿತ ಮತ್ತು ಅಧಿಕಾರಿ ವರ್ಗದ ಅಸಡ್ಡೆಗೆ ಕಸ ಹೊರುವ, ತ್ಯಾಜ್ಯ ವಾಹನಕ್ಕೆ ತುಂಬಲು ಬಳಸುವ ಬುಟ್ಟಿ(ಹೆಡಿಗೆ)ಗಳು ಹರುಕು ಮುರುಕಾಗಿದ್ದು, ಹೊಸ ಬುಟ್ಟಿ ಕೊಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪೌರ ಕಾರ್ಮಿಕ ದಂಡಪ್ಪ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಾದುಗೋಳಕರ ಅವರು ಕೂಡ ಪೌರ ಕಾರ್ಮಿಕರಿಗೆ ಕಸ ತೆಗೆಯಲು ಅಗತ್ಯವಾದ ಸಲಕರಣೆಗಳನ್ನು ಕೊಡದೇ ಸತಾಯಿಸುತ್ತಿರುವ ಕಾರಣ ದಿನಕ್ಕೆ ಮೂರು ಟ್ರಿಪ್ಪು ಪಟ್ಟಣದ ತ್ಯಾಜ್ಯ ಸಾಗಿಸಬೇಕಿದ್ದರೂ, ಕಸ ತುಂಬುವ ಬುಟ್ಟಿಗಳ ಕೊರತೆಯಿಂದ ಈಗಿನ ಮಿರಿದ ಬುಟ್ಟಿಗಳಿಂದಾಗಿ ದಿನಕ್ಕೆ ಒಂದು ಟ್ರಿಪ್ಪು ಕಸ ಮಾತ್ರ ವಿಲೇವಾರಿಯಾಗುತ್ತಿದೆ. ಇನ್ನಾದರೂ ಪುರಸಭೆ ಆಡಳಿತ, ಅಧಿಕಾರಿಗಳು ಕಸ ವಿಲೇವಾರಿಗೆ ಹೊಸ ಬುಟ್ಟಿಗಳನ್ನು ಪೌರ ಕಾರ್ಮಿಕರಿಗೆ ಒದಗಿಸುವರೇ ಎಂದು ಕಾದು ನೋಡಬೇಕಿದೆ.