ಮಹಾನಾಯಕನ ನುಡಿ ಮಾಸಿಕ ಪತ್ರಿಕೆ ಬಿಡುಗಡೆ
ಇವತ್ತು ಆಗಸ್ಟ್ 5 ರಿಂದ ಪ್ರಾರಂಭವಾಗಲಿರುವ ಕನ್ನಡ ಮಾಸ ಪತ್ರಿಕೆ ಮಹಾನಾಯಕನ ನುಡಿ ರಾಜ್ಯದ ಎಲ್ಲೆಡೆ ಕಡೆಯಲ್ಲೂ ಲಭ್ಯವಿರುತ್ತದೆ.
ಮಹಾನಾಯಕನ ನುಡಿ ಎಂಬ ಕನ್ನಡ ಪತ್ರಿಕೆಯು ತನ್ನ ಮೊದಲ ಸಂಚಿಕೆಯನ್ನು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಪತ್ರಿಕೆಯ ಮುಖ್ಯ ಆಧಾರವು ಸ್ಥಳಿಯ ಸುದ್ದಿ,ರಾಜಕೀಯ,ಶಿಕ್ಷಣ,ಕ್ರೀಡೆ,ವಿಶೇಷ ಹಾಗೂ ಮನರಂಜನೆಯ ಸುದ್ದಿ ಕವರೇಜ್ ಆಗಿರುತ್ತದೆ, ಜೊತೆಗೆ ಅಂತರರಾಷ್ಟ್ರೀಯ ಸುದ್ದಿಗಳ ಕವರೇಜ ಆಗಿರುತ್ತದೆ,
ಮಹಾನಾಯಕನ ನುಡಿ ಕನ್ನಡ ಪತ್ರಿಕೆ ಬಿಡುಗಡೆ 1000 ಪ್ರತಿಗಳ ಆರಂಭಿಕ ಮುದ್ರಣದೊಂದಿಗೆ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆ ಎಂದು ಮಹಾನಾಯಕನ ನುಡಿ ಮಾಸ ಪತ್ರಿಕೆಯ ಮುಖ್ಯ ಸಂಪಾದಕ ಸಂಜಯ ಮ್ಯಾಗೇರಿ ಹೇಳಿದ್ದಾರೆ.ಇದು 8 ಪುಟಗಳನ್ನು ಹೊಂದಿರುತ್ತದೆ ಮತ್ತು ಕವರ್ ಬೆಲೆ 25 ರೂ.ಇರುತ್ತದೆ ಎಂದು ತಿಳಿಸಿ ಉಪಸ್ಥಿತರಿದ್ದ ಗಣ್ಯರಿಗೆ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಶಾಸಕ ಅಪ್ತ ಸಹಾಯಕ ಬೀಮಗೌಡ್ರ ಪೊಲಿಸ್ ಪಾಟೀಲ,ಸುರೇಶ ಸನದಿ,ಎತ್ತಿನಮನಿ, ನಗರ ಬಿಜೆಪಿ ಮಂಡಲದ ಅದ್ಯಕ್ಷ ಬೀಮಶಿ ಭರಮನ್ನವರ ಯಶವಂತ ಮ್ಯಾಗೇರಿ, ಪ್ರಕಾಶ ಮೇತ್ರಿ,ಬಾಳಪ್ಪ ಕೇಳಗೇರಿ, ಮಾರುತಿ ಕರಗಾಂವಿ, ಆನಂದ ಮೇಗೇರಿ,ಪ್ರವೀಣ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದು ಮಾಸ ಪತ್ರಿಕೆಗೆ ಶುಭ ಹಾರೈಸಿದರು.