Breaking News

ಅಲಖನೂರು ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ಮಡಲಿಗೆ

Spread the love

ಅಲಖನೂರು ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ಮಡಲಿಗೆ

ಹಾರೂಗೇರಿ,೨೮: ಕುಡಚಿ ಶಾಸಕ ಪಿ ರಾಜೀವ್ ಸ್ವಗ್ರಾಮದಲ್ಲಿ ಬಿಜೆಪಿ ಬೆಂಬಲತ ಅಭ್ಯರ್ಥಿಗಳು ಅಲಖನೂರ ಗ್ರಾಮ ಪಂಚಾಯತ ಪ್ರಥಮ ಅವಧಿಯ ಅಧ್ಯಕ್ಷ ಉಪಾಧ್ಯಾಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲವು ಸಾಧಿಸಿದ್ದಾರೆಅಲಖನೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವ ಭರವಸೆ ನೂತನ ಅಧ್ಯಕ್ಷರಾದ ಸತ್ಯವ್ವ ಶಿವಾನಂದ ಪೂಜೇರಿ ಹೇಳಿದರು.

ಅವರು ಅಲಖನೂರ ಗ್ರಾಮ ಪಂಚಾಯತ ಪ್ರಥಮ ಅವಧಿಯ ನೂತನ ಅಧ್ಯಕ್ಷರಾಗಿ ಗೆಲ್ಲು ಸಾಧಿಸಿದ ಬಳಿಕ ವಿಜಯೋತ್ಸವದಲ್ಲಿ ಮಾತನಾಡುತ್ತಾ ಸ್ಥಳೀಯ ಶಾಸಕರು ಹಾಗೂ ಸಂಸದರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದ್ದಾಗಿ ಭರವಸೆ ನೀಡಿದರು.
ತಾಲೂಕಿನ ಅಲಖನೂರು ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಿತ್ತು. ಅಲಖನೂರು ಗ್ರಾಮ ಪಂಚಾಯತ ಒಟ್ಟು ೨೮ ಸದಸ್ಯರನ್ನು ಹೊಂದಿದ್ದು ಇದರಲ್ಲಿ ಬಹುಮತಕ್ಕೆ ೧೫ ಸದಸ್ಯರ ಬಲಾಬಲ ಬೇಕು ಮತದಾನ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಪ್ರಕ್ರೀಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದು ಬಿಜೆಪಿ ಬೆಂಬಲಿತ ಶ್ರೀಮತಿ ಸತ್ಯವ್ವ ಶಿವಾನಂದ ಪೂಜೇರಿ ೧೬ ಮತಗಳು ಪಡೆದುಕೊಂಡರು ಇವರ ವಿರುದ್ಧ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಸತ್ಯವ್ವಾ ಲಕ್ಷ್ಮಣ ಹಾಲಗೊಂಡರ ಇವರು ೧೨ ಮತಗಳನ್ನು ಪಡೆದುಕೊಂಡಿರುವುದರಿAದ ಸತ್ಯವ್ವ ಶಿವಾನಂದ ಪೂಜೇರಿ ಇವರು ೪ ಮತಗಳ ಅಂತರದಿಂದ ಅಧ್ಯಕ್ಷರಾಗಿ ಗೆಲ್ಲುವು ಸಾಧಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು ಅದರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಕವ್ವ ಕರೆಪ್ಪ ಚೌಗಲಾ ಇವರು ೧೮ ಮತಗಥಿ ಪಡೆದಕೊಂಡರು ಇವರ ವಿರುದ್ಧ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸುರೇಶ ಕರೇಪ್ಪಾ ಪೂಜಾರಿ ೧೦ ಮತಗಳನ್ನು ಪಡೆದುಕೊಂಡಿರುವುದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಕಪ್ಪ ಕರೇಪ್ಪ ಚೌಗಲಾ ಇವರು ೮ ಮತಗಳ ಅಂತರದಿAದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಅಧ್ಯಕ್ಷರಾಗಿ ಶ್ರೀಮತಿ ಸತ್ಯವ್ವ ಶಿವಾನಂದ ಪೂಜೇರಿ ಹಾಗೂ ಉಪಾಧ್ಯಕ್ಷರಾಗಿ ಲಕ್ಕಪ್ಪ ಕರೆಪ್ಪ ಚೌಗಲಾ ಇವರು ಆಯ್ಕೆಯಾಗಿದ್ದಾರೆಂದು ಗೊತ್ತುಪಡಿಸಿದ ಚುನಾವಣೆ ಅಧಿಕಾರಿ ಸಹಯಕ ಕಾರ್ಯನಿರ್ವಾಹಕ ಅಭಿಯಂತರು ಚುನಾವಣೆ ಅಧಿಕಾರಿಯಾಗಿ ಘೋಷಿಸಿದ್ದರು.

ಅಲಖನೂರು ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲವು ಸಾಧಿಸಿರುವುದರಿಂದ ಗ್ರಾಮದಲ್ಲಿ ಬಿಜೆಪಿ ಪಕ್ಷದ ಧ್ವಜಹಾಗೂ ಸೇಲೆ ಹಿಡಿದುಕೊಂದು ವಿಜಯೋತ್ಸವ ಆಚರಿಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಕಪ್ಪ ಕರೇಪ್ಪ ಚೌಗಲಾ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಗ್ರಾಮ ಪಂಚಾಯತಿಯಲ್ಲಿ ಪಕ್ಷತಿಥವನ್ನು ಮರೆತ್ತು ನನಗೆ ಮತ ಚಲವನ್ನು ಮಾಡಿದ್ದಾರೆ ಅವರುಗಳನ್ನು ನಾವು ವಿಶ್ವಾಸಕ್ಕೆ ತಗೆದುಕೊಂಡು ಗ್ರಾಮದಲ್ಲಿ ಚಂರಡಿ, ಕುಡಿಯುವ ನೀರಿನ ಸೌಲಭ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ನಮ್ಮ ಗ್ರಾಮ ಸ್ವಚ್ಛ ಗ್ರಾಮ ಮಾಡುವುದ್ದೆ ನಮ್ಮ ಕನಸಾಗಿದ್ದೆ ಅದಕ್ಕೆ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಬೆಂಬಲ ಅವಶ್ಯವಾಗಿ ಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಶಶಿಕಲಾ ಸದೇಪ ಗಡ್ಡಿ, ಕುಮಾರ ಯಲಟ್ಟಿ, ಹಣಮಂತ ಸನದಿ, ಸಾತವ್ವಾ ಗಡ್ಡಿ, ಶಿವಾನಂದ ಇಂಗಳಿ, ರಾಮಾ ಪೂಜೇರಿ ಸಂಜು ಹೊರಟ್ಟಿ, ಪ್ರದಾನಿ ಚೌಗಲಾ, ಸಂಜು ಬಡಿಗೇರ, ಸಂಗವ್ವಾ ಬಾನಿ, ಸಿದ್ದವ್ವಾ ನಾಯಿಕ, ಗಂಗವ್ವಾ ಶಿರಗಾವೆ, ಯಲ್ಲವ್ವಾ ನಾಯಿಕ, ಪಾರವ್ವಾ ಪಾಟೀಲ, ರೇಖಾ ಬಡಿಗೇರ, ಗ್ರಾಮದ ಗಣ್ಯರಾದ ಸದಾಶಿವ ಗಡ್ಡಿ, ಸಿದ್ದಪ್ಪಾ ಪೂಜೇರಿ, ಸದಾಶಿವ ಪೂಜೆರಿ, ಶಂಕರ ಪೂಜೇರಿ, ಸಿದ್ರಾಮ ಹಸರೆ, ಸಿದ್ದಪ್ಪಾ ಕರಿಗಾರ , ಶ್ರೀಶೈಲ ಕರಿಗಾರ ಗ್ರಾಮದ ಮುಂಖಡರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.


Spread the love

About fast9admin

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *