Breaking News

ಸಮಾಜ ಸೇವಕ ವಸಂತ ರಾಣಪ್ಪಗೋಳ ಹುಟ್ಟು ಹಬ್ಬ ಆಚರಿಸಿದ ಅಭಿಮಾನಿಗಳು.

Spread the love

ಸಮಾಜ ಸೇವಕ ವಸಂತ ರಾಣಪ್ಪಗೋಳ ಹುಟ್ಟು ಹಬ್ಬ ಆಚರಿಸಿದ ಅಭಿಮಾನಿಗಳು.

ಘಟಪ್ರಭಾ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರಾಜಕೀಯ ಹಾಗೂ ಪ್ರಚಾರದ ಹಿನ್ನೆಲೆಯಲ್ಲಿ ಹಲವರು ಮಾಧ್ಯಮಗಳಲ್ಲಿ ಪ್ರಚಾರದ ಮೂಲಕ ಹಾಗೂ ವೇದಿಕೆಯ ಭರ್ಜರಿ ಭಾಷಣಗಳ ಮೂಲಕ ತಮ್ಮ ಹೆಸರು ಮತ್ತು ಪ್ರಸಿದ್ಧಿಯನ್ನು ವೃದ್ಧಿಸಿಕೊಳ್ಳುತ್ತಾರೆ.

ಆದರೆ ವಸಂತ ಕೃಷ್ಣಪ್ಪಾ ರಾಣಪ್ಪಗೋಳ ಇವರು ತನ್ನಷ್ಟಕ್ಕೆ ತಾನು ಜನರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾ, ತಮ್ಮ ಹಾಗೂ ಪ್ರಾಮಾಣಿಕ ಸೇವೆಯನ್ನು ತಳಮಟ್ಟದಿಂದ ಮಾಡುವಲ್ಲಿ ಹೆಸರುವಾಸಿಯಾಗಿದ್ದು ತಮ್ಮ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಮಾಜ ಸೇವೆ ಮಾಡುವುದರಲ್ಲಿ ತೊಡಗಿಸಿಕೊಂಡವರು,

ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದಲ್ಲಿ ಜನಿಸಿದ್ದರು ಸಮಾಜ ಸೇವೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ ಕಾರಣ ಅಗಸ್ಟ್ 10 ನೆ ದಿನದಂದು ಅಪಾರ ಅಭಿಮಾನಿಗಳು, ವಿವಿದ ಸಂಘನೆಗಳ ಸ್ನೇಹಿತರು, ಇವರ 35 ನೆಯ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ್ದಾರೆ.

ಅದಲ್ಲದೆ ವಸಂತ ರಾಣಪ್ಪಗೋಳ ಇವರು ಸ್ವಯಂ ಪ್ರೇರಿತ ಸಮುದಾಯ ಮತ್ತು ಸಮಾಜ ಸೇವೆಯಲ್ಲಿ ಬಲವಾದ ನಂಬಿಕೆಯನ್ನಿಟ್ಟವರು ಹಾಗೂ ಈ ನಿಟ್ಟಿನಲ್ಲಿ ಹಿಂದುಳಿದ ಜನರಿಗೆ ಅವರೊಂದು ಆದರ್ಶ. ತಮ್ಮ ಜೀವನವನ್ನು ಸಮಾಜದ ಬಡ ಮತ್ತು ಕೆಳವರ್ಗದ ಜನಸೇವೆಗೆ ಮುಡಿಪಾಗಿಟ್ಟವರು, ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಅತ್ಮಿಯರು ಶುಭ ಹಾರೈಸಿದರು


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *