Breaking News

ಬಾಲಚಂದ್ರ ಜಾರಕಿಹೊಳಿ ದೂರದೃಷ್ಟಿ ಚಿಂತನೆ, ನೀಡುತ್ತಿರುವ ಸಹಾಯ, ಸಹಕಾರದ ಪ್ರತಿಫಲವೇ ವಿದ್ಯಾರ್ಥಿಗಳ ಸಾಧನೆ ಹೆಚ್ಚುತ್ತಿದೆ: ಸರ್ವೋತ್ತಮ ಜಾರಕಿಹೋಳಿ

Spread the love

ಬಾಲಚಂದ್ರ ಜಾರಕಿಹೊಳಿ ದೂರದೃಷ್ಟಿ ಚಿಂತನೆ, ಸಹಾಯ, ಸಹಕಾರದ ಪ್ರತಿಫಲವೇ ವಿದ್ಯಾರ್ಥಿಗಳ ಸಾಧನೆ ಹೆಚ್ಚುತ್ತಿದೆ: ಸರ್ವೋತ್ತಮ ಜಾರಕಿಹೋಳಿ

ಗೋಕಾಕ- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆಯ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ ೨೦೨೩-೨೪ ನೇ ಸಾಲಿನ ವ್ಯಾಸಂಗ ಮಾಡಿ ಉನ್ನತ ವೃತ್ತಿಪರ ಕೋರ್ಸಗಳಿಗೆ ಆಯ್ಕೆಗೊಂಡ ೫೫ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು, ಈ ಎಲ್ಲ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶನ ನೀಡಿದ ಗುರುವೃಂದದವರನ್ನು ಅಭಿನಂದಿಸಿದರು.
ಬಾಲಚಂದ್ರ ಜಾರಕಿಹೊಳಿ ಅವರು ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದೂರದೃಷ್ಟಿ ಚಿಂತನೆಯೊಂದಿಗೆ ನೀಡುತ್ತಿರುವ ಸಹಾಯ, ಸಹಕಾರದ ಪ್ರತಿಫಲವೇ ಈ ಸಾಧನೆಯಾಗಿದೆ. ಸರ್ಕಾರಕ್ಕಿಂತ ಮೊದಲೇ ಮೂಡಲಗಿ ವಲಯದ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಅವರಿಗೆ ತಮ್ಮ ವೈಯಕ್ತಿಕವಾಗಿ ವೇತನವನ್ನು ಕಲ್ಪಿಸಿಕೊಟ್ಟ ಮಹಾನುಭಾವರು ನಮ್ಮ ಶಾಸಕರು ಎಂದ ಅವರು, ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಯಾರೂ ಮರೆಯಲಾರರು ಎಂದು ಹೇಳಿದರು.
ಸಾಧಕರಾದವರು ತಮ್ಮ ವೃತ್ತಿ ಬದುಕಿನಲ್ಲಿ ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಬೇಕು. ಸಾಧ್ಯವಿದ್ದ ಮಟ್ಟಿಗೆ ಹುಟ್ಟೂರಿನ ಋಣ ತೀರಿಸಲು ಪ್ರಯತ್ನಿಸಬೇಕು. ತಂದೆ-ತಾಯಿ, ಕಲಿತ ಶಾಲೆಗೆ ಒಳ್ಳೆಯ ಹೆಸರು ತರುವ ಮೂಲಕ ಕ್ಷೇತ್ರದ ಕೀರ್ತಿಯನ್ನು ಎಲ್ಲೆಡೆ ಹರಡುವಂತೆ ಅವರು ತಿಳಿಸಿದರು.
ಇತ್ತಿಚೆಗೆ ನಾನು ವಿದೇಶ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ನನ್ನ ಪಾಸ್ ಪೋರ್ಟ್ ತಪಾಸಿಸುವಾಗ ಅಲ್ಲಿದ್ದ ಸಿಬ್ಬಂದಿಯೋರ್ವರು, ಸರ್ ನಾನು ಕೂಡ ನಿಮ್ಮ ಸಂಸ್ಥೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೀನಿ ಅಂತಾ ಪರಿಚಯ ಮಾಡಿಕೊಂಡರು. ನನಗೂ ಕೂಡ ಖುಷಿಯಾಯ್ತು. ಇದರರ್ಥ ನಾವು ಎಷ್ಟೇ ಸಾಧನೆಗಳು ಮಾಡಿದ್ದರೂ ಹಿಂದಿನದನ್ನು ಮರೆಯಬಾರದು. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ ಅವರು ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಆಯ್ಕೆಯಾದ ೪೩ ವಿದ್ಯಾರ್ಥಿಗಳು, ೪ ಜನ ಚಿನ್ನದ ಪದಕ ವಿಜೇತರು, ಐಐಟಿ ಮತ್ತು ಎನ್‌ಐಟಿಗೆ ಆಯ್ಕೆಯಾದ ಮೂವರು ವಿದ್ಯಾರ್ಥಿಗಳು, ಇಬ್ಬರು ಲೆಕ್ಕ ಪರಿಶೋಧಕರು, ತಲಾ ಓರ್ವರಾದ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ ಸಹಾಯಕ ಕಮಾಂಡೆಂಟ್ ಮತ್ತು ಪಿಎಚ್‌ಡಿ ಪಡೆದ ಒಟ್ಟು ೫೫ ಸಾಧಕರನ್ನು ಸತ್ಕರಿಸಿ ಸವಿ ನೆನಪಿನ ಕಾಣಿಕೆಯನ್ನು ನೀಡಿದರು. ಇದರ ಜೊತೆಗೂ ಪಾಲಕರನ್ನು ಸಹ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ತಾ.ಪಂ. ಇಓಗಳಾದ ಪರಶುರಾಮ ಘಸ್ತಿ, ಫಕೀರಪ್ಪ ಚಿನ್ನನವರ, ಗೋಕಾಕ ಬಿಇಓ ಜಿ.ಬಿ.ಬಳಗಾರ, ಸಮಾಜ ಕಲ್ಯಾಣ ಇಲಾಖೆಯ ಎಡಿ ಮಲಬನ್ನವರ, ಡಾ. ಬೆಂಚಿನಮರಡಿ, ಕಲ್ಲೊಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ರಾಘವೇಂದ್ರ ಗಂಗರಡ್ಡಿ, ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ, ಮೂಡಲಗಿ ಶಿರಸ್ತೆದಾರ ಪರಶುರಾಮ ನಾಯಿಕ ಹಾಗೂ ಮುಖಂಡರು ಉಪಸ್ಥಿತರಿದ್ದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

About Fast9 News

Check Also

ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ*

Spread the love*ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ* ಗೋಕಾಕ- ಬಿಜೆಪಿಯು ಇಷ್ಟು …

Leave a Reply

Your email address will not be published. Required fields are marked *