ಗೋಕಾಕ ಶಹರ ಪೊಲೀಸರಿಂದ ಸೈಕಲ್ ಕಳ್ಳರ ಬಂಧನ .10 ಮೊಟರ ಸೈಕಲಗಳು ವಶ,ಸಾರ್ವಜನಿಕರಿಂದ ಪ್ರಶಂಸೆ.
ಗೋಕಾಕ : ದಿ: 02-07-2024 ರಂದು 11-00 ಗಂಟೆಗೆ ಗೋಕಾಕದ ಬಸ್ ಸ್ಟಾಂಡದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ಮೋಟಾರ್ ಸೈಕಲ ಮತ್ತು ದಿನಾಂಕ: 10-03-2024 ರಂದು ಮದ್ಯಾಹ್ನ 2 ಗಂಟೆಯಿಂದ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಗೋಕಾಕ ನಗರದ ಸೋಮವಾರಪೇರದಲ್ಲಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಟಿ.ವಿ.ಎಸ್.ಕಂಪನಿಯ ಸ್ಕೂಟಿ ಕಳ್ಳರು ಕಳ್ಳತನ ಮಾಡಿಕೊಂಡ ಬಗ್ಗೆ ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಕು.ಶೃತಿ ಎಚ್.ಎಸ್. ಮತ್ತು. ಆರ್.ಬಿ ಬಸರಗಿ ಗೋಕಾಕ ಡಿ,ಎಸ್,ಪಿ,. ಡಿ.ಎಚ್.ಮುಲ್ಲಾ ಗೋಕಾಕ ವೃತ್ತದ ಸಿ,ಪಿ,ಆಯ್, ಗೋಪಾಲ. ಆರ್. ರಾಠೋಡ ರವರ ಮಾರ್ಗದರ್ಶನದಲ್ಲಿ ಗೋಕಾಕ ಶಹರ ಪೊಲೀಸ ಠಾಣೆಯ ಪಿ,ಎಸ್,ಆಯ್,
ಕೆ.ಬಿ.ವಾಲೀಕಾರ.ಮತ್ತು ಸಿಬ್ಬಂದಿಗಳಾದ ಕೆ. ಆರ್. ಹಕ್ಯಾಗೋಳ, ವಿಠಲ ನಾಯಿಕ, ಎಸ್.ಬಿ.ತೋರಗಲ್, ಎ.ಸಿ.ಕಾಪಸಿ ಎನ್.ಬಿ.ಬೆಳಗಲಿ ಇನ್ನೂಳಿದವರು ಪ್ರಕರಣದ ಬೆನ್ನಟ್ಟಿ ದಿನಾಂಕ: 05-09-2024 ರಂದು ಕಳ್ಳತನ ಮಾಡಿದ್ದ ಆರೋಪಿತರಾದ 1) ನಿಂಗಪ್ಪ ಉದ್ದಪ್ಪ ಪಿಡಾಯಿ ಸಾ। ದೇವಪುರಹಟ್ಟಿ 2) ಸಂತೋಷ ಗೂಳಪ್ಪಾ ಪಾಟೀಲ ಸಾ।। ತುಕ್ಕಾನಟ್ಟಿ ಇವರನ್ನು ಪತ್ತೆ ಹಚ್ಚಿ ದಸ್ತಗೀರ್ ಮಾಡಿ ತನಿಖೆಯ ವೇಳೆಯಲ್ಲಿ ಸದರಿ ಆರೋಪಿತರು ಕಳ್ಳತನ ಮಾಡಿದ್ದ ಸುಮಾರು 5,00,000 /- ರೂ ಕಿಮ್ಮತ್ತಿನ ವಿವಿಧ ಕಂಪನಿಗಳ ಒಟ್ಟು 10 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ
ಈ ಪ್ರಕರಣವನ್ನು ಬೇದಿಸಿದ ಗೋಕಾಕ ಪೋಲಿಸರನ್ನು
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಕು.ಶೃತಿ ಎಚ್.ಎಸ್. ಮತ್ತು. ಆರ್.ಬಿ ಬಸರಗಿಯವರು ಪ್ರಶಂಶಿರುತ್ತಾರೆ.ಅಷ್ಟೆ ಅಲ್ಲದೆ ಗೋಕಾಕ ಜನತೆ ಶ್ಲ್ಯಾಘನೀಯ ವ್ಯಕ್ತ ಪಡಿಸಿದ್ದಾರೆ.