Breaking News

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ

Spread the love

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ

ಗೋಕಾಕ: ಬುದ್ದ,ಬಸವ,ಅಂಬೇಡ್ಕರ ತತ್ವ ಮತ್ತು ವೈಚಾರಿಕ ಪ್ರಜ್ಞೆಯುಳ್ಳ ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ ,ಎಲ್ಲೆಡೆ ಸಮಾನತೆಯನ್ನು ವಿವಿದ ಸಮಾರಂಭಗಳನ್ನು ಮಾಡುವುದರ ಮೂಲಕ ಸಾರುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಕರವೆ ತಾಲೂಕಾ ಅದ್ಯಕ್ಷ ರೆಹಮಾನ್ ಮೊಕಾಶಿ ಹೈಕಮಾಂಡಗೆ ಅಗ್ರಹಿಸಿದ್ದಾರೆ.

ಸತೀಶ ಜಾರಕಿಹೋಳಿ ಕೇವಲ ಹೆಸರಲ್ಲ ಅವರು ಕಾಂಗ್ರೇಸ್ಸಿನ ಶಕ್ತಿ,ಯಾವುದೆ ಕಳಂಕ ಇರದ ಸತೀಶ ಜಾರಕಿಹೋಳಿ ಇವರಿಗೆ ಹೈಕಮಾಂಡ್ ಸ್ಪಂದಿಸಲಿ ಎಂದು ಕರವೆ ತಾಲೂಕಾ ಅದ್ಯಕ್ಷ ರೆಹಮಾನ್ ಮೊಕಾಶಿ ಆಗ್ರಹಿಸಿದ್ದಾರೆ.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡಿರುವ ಸತೀಶ ಜಾರಕಿಹೋಳಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ.

ವೈಜ್ಞಾನಿಕ ಮತ್ತು ವೈಚಾರಿಕ ನಿಲುವುಗಳ ಮೂಲಕ ಯುವ ಸಮೂಹಕ್ಕೆ ಆದರ್ಶವಾಗಿದ್ದಾರೆ. ಇಂತಹ ವಿಭಿನ್ನ ಯೋಚನೆಯುಳ್ಳ
ಅವರು ಮುಖ್ಯಮಂತ್ರಿಯಾದರೆ ಆಗುವುದರಲ್ಲಿ ಸಂಶಯವಿಲ್ಲ. ಕೇವಲ
ಆಲೋಚನೆಗೆ ರಾಜ್ಯ ಸಮೃದ್ಧಿ ಸಾಂಪ್ರದಾಯಿಕ
ರಾಜ್ಯ,ಅಂಟಿಕೊಂಡಿರುವ ಮನಸ್ಸುಗಳನ್ನು
ಬದಲಾಯಿಸಲು ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ
ಸಹಕರಿಸಬಲ್ಲರು. ಅದಕ್ಕಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದಾರೆ.ಅದಕ್ಕಾಗಿ ಹೈಕಮಾಂಡ್ ಅವರು ಸತೀಶ ಜಾರಕಿಹೋಳಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಅಗ್ರಹಿಸಿದ್ದಾರೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *