ಜೀವ ರಕ್ಷಿಸಿಕೊಳ್ಳಲು ಸಂಚಾರ ನಿಯಮ ಪಾಲಿಸಿ : Dsp, ಜಾವೀದ್ ಇನಾಂದಾರ,
ಗೋಕಾಕ: ಗೋಕಾಕ ವಲಯ ಡಿ,ವಾಯ್ ಎಸ್,ಪಿ, ಜಾವಿದ್ ಇನಾಂದಾರ ಇವರ ನೇತೃತ್ವದಲ್ಲಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಒಂದೆ ದೇಶ ಒಂದೆ ತುರ್ತು ಸಂಖ್ಯೆ 112ಗೆ ಕರೆ ಮಾಡುವ ಜೊತೆಯಲ್ಲಿ , ಕಾನೂನನ್ನು ಪಾಲಿಸುವುದರ ಜೊತೆಯಲ್ಲಿ ತಮ್ಮ ಜೀವ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ
ರಸ್ತೆ ನಿಯಮಗಳ ಪಾಲನೆ ಮಾಡುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು.
ಇದರ ಜೊತೆಯಲ್ಲಿ ಅರಿವು ಮೂಡಿಸುವ ಹಾಗೂ ರಸ್ತೆ ಸುರಕ್ಷತೆಗಾಗಿ ಪೋಲಿಸ್ ಇಲಾಖೆಯ ವತಿಯಿಂದ ನಗರದಲ್ಲಿ ಸಂಚರಿಸುವ ಆಟೊ ರಿಕ್ಷಾಗಳು, ಬಸ್ಸುಗಳು ಮತ್ತು ಇನ್ನಿತರ ವಾಹನಗಳಿಗೆ ಸಂಚಾರ ನಿಯಮ ಪಾಲಿಸುವ ಹಾಗೂ ತುರ್ತು ಸಂಖ್ಯೆ 112 ರ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಸಿಪಿಐ ರಮೇಶ ಚಾಯಾಗೋಳ, ಪಿಎಸ್ಐಗಳಾದ ಗಣಪತಿ ಕೊಂಗನೊಳಿ, ಎಸ್ ಎಚ್ ಕರನಿಂಗ, ರಮೇಶ್ ಪಾಟೀಲ, ಆರ್ ಎಸ್ ಖೋತ ಸೇರಿದಂತೆ ಪೋಲಿಸ್ ಸಿಬ್ಬಂದಿ ಇದ್ದರು
Fast9 Latest Kannada News