Breaking News

ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ ಮಾಡುವುದು ನೆನಪಿರಲಿ : PSI ನಾಗರಾಜ ಖಿಲಾರೆ,

Spread the love

ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ ಮಾಡುವುದು ನೆನಪಿರಲಿ : PSI ನಾಗರಾಜ ಖಿಲಾರೆ,

ಗೋಕಾಕ : ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶನಿವಾರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಆಯ್, ನಾಗರಾಜ ಖಿಲಾರೆಯವರು
ಶ್ರೀಲಕ್ಷ್ಮಿ ದೇವಸ್ಥಾನದಲ್ಲಿ ಜನಸಂಪರ್ಕ ಸಭೆ ಮತ್ತು ಅಂಬೇಡ್ಕರ ನಗರದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ದಲಿತ ಸಬೆ ಮತ್ತು ಒಂದೆ ದೇಶ ಒಂದೆ ತುರ್ತು ಸಂಖ್ಯೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸ್ಥಳಿಯರನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸುತ್ತಮುತ್ತಲು
ಅಗ್ನಿ ದುರಂತ ಸಂಭವಿಸಿದ್ದಲ್ಲಿ,ಅಪಘಾತವಾಗಿದ್ದಲ್ಲಿ,ಅಪರಾಧವಾಗಿದ್ದಲ್ಲಿ ಹಾಗೂ ವಿನಾಕಾರಣ ಯಾರಾದರೂ ಅಣ್ಯ ವ್ಯಕ್ತಿಗಳು ಕುಡಿದು ಗಲಾಟೆ ಮಾಡಿ ತೊಂದರೆ ನೀಡುತಿದ್ದರೆ ಮತ್ತು ಇತರೆ ವಿಪತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿ 112 ತುರ್ತು ಸಂಖ್ಯೆಗೆ ಕರೆ ಮಾಡಲು ತಿಳಿಸಿದರು.ಅದಲ್ಲದೆ ತಾವುಗಳು ಕರೆ ಮಾಡಿದಾಗ ಕೆಲವೆ ಸಮಯದಲ್ಲಿ ತಮ್ಮ ಸಮಸ್ಯೆಗಳಿಗೆ ಪೋಲಿಸ್ ಸಿಬ್ಬಂದಿಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂದರು,

ಇದಕ್ಕಾಗಿಯೇ ಕೊಣ್ಣೂರಲ್ಲಿ ಒಂದು ವಾಹನವನ್ನು ಮೀಸಲಿರಿಸಿದ್ದು, ವಾಹನದಲ್ಲಿ ಪೊಲೀಸ್ ಅಧಿಕಾರಿಗಳು 24 ಗಂಟೆ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ.ಅದಕ್ಕಾಗಿ
ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ 112 ನಂಬರಿಗೆ ಕರೆ ಮಾಡಿ ಆಪತ್ತಿನಿಂದ ರಕ್ಷಿಸಿಕೊಳ್ಳಬಹುದು

ವಿಶೇಷವಾಗಿ ಶಾಲಾ ಮಕ್ಕಳನ್ನು ಒಂದೂಗೂಡಿಸಿ ತಾವುಗಳು ಶಾಲೆಗೆ ಹೋಗುವಾಗ ಯಾರಾದರೂ ತಮ್ಮ ಜೊತೆ ಅಸಬ್ಯ ವರ್ತನೆ, ಯಾವುದೋ ವ್ಯಕ್ತಿಯು ಸಂಶಯಾಸ್ಪದವಾಗಿ ಕಂಡು ಬಂದಲ್ಲಿ ತಾವುಗಳು 112 ತುರ್ತು ಸಂಖ್ಯೆಗೆ ಕರೆ ಮಾಡಲು ಹಾಗೂ ಶಾಲೆಯಲ್ಲಿರುವ ತಮ್ಮಸಹಪಾಠಿಗಳಿಗೂ ತಿಳಿಸಲೂ ಹೇಳಿ ಸಣ್ಣ ಮಕ್ಕಳ ಚಾಣಾಕ್ಷತನ ಕಂಡು ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಕೊಣ್ಣೂರ ಪುರಸಭೆಯ ಹಿರಿಯ ಸದಸ್ಯರಾದ ಪ್ರಕಾಶ ಕರನಿಂಗ, ಪ್ರವೀಣ ಗುಡ್ಡಾಕಾಯು, ರಾಜು ಪೂಜೇರಿ, ದಲಿತ ಸಮಾಜದ ಮುಖಂಡರಾದ ಪುಂಡಲಿಕ ಕೇಳಗೇರಿ, ನಿವೃತ್ತ ಪೋಲಿಸ್ ಅಧಿಕಾರಿ ಯಮನಪ್ಪ ಕೊಣ್ಣೂರ, ವಿಠ್ಠಲ ಗುಡಜ, ಮಯೂರ ಗುಡಜ, ಸುರೇಶ ಹೊನಕುಪ್ಪಿ, ಶೇಖರ ಕೊಣ್ಣೂರ, ಕೆಂಪಣ್ಣಾ ನಡಗೇರಿ ಹಾಗೂ ಹಲವಾರು ಮಹಿಳೆಯರು ಸೇರಿದಂತೆ ಪೊಲೀಸ್ ಇಲಾಖೆಯ ಎ,ಎಸ್,ಆಯ್, ,ಬಿ,ಎಸ್,ಬಡಿಗೇರ ಸಿಬ್ಬಂದಿಯಾದ ದುಂಡೇಶ ಅಂತರಗಟ್ಟಿ, ಹಾಜರಿದ್ದರು.


Spread the love

About fast9admin

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *