Breaking News

ಡೆ- ನಲ್ಮ್ ಯೋಜನೆಯ ಸದುಪಯೋಗ ಪಡೆದುಕೊಂಡು ಉದ್ಯೊಗವಂತರಾಗಿ : ಕುರಣಿ

Spread the love

ಡೆ- ನಲ್ಮ್ ಯೋಜನೆಯ ಸದುಪಯೋಗ ಪಡೆದುಕೊಂಡು ಉದ್ಯೊಗವಂತರಾಗಿ : ಕುರಣಿ

ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಡೆ ನಲ್ಮ್ ಯೊಜನೆಯಡಿಯಲ್ಲಿ ಸನ್ 2019-20 ನೆ ಸಾಲಿನ ತರಬೇತಿ ಯೋಜನೆಯಡಿ ಹೊಲಿಗೆ ಮತ್ತು ಕಂಪ್ಯೂಟರ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಕೊಣ್ಣೂರಿನ ಶ್ರೀ ಲಕ್ಷಿ ದೇವಸ್ಥಾನದಲ್ಕಿ ಜರುಗಿತು,

ಈ ಸಮಯದಲ್ಲಿ ಮಾತನಾಡಿದ ಪುರಸಭೆಯ ಡೆ ನಲ್ಮ್ ಸಂಘಟನಾಧಿಕಾರಿ ಸಂಪ್ತರಾವ ಕುರಣಿಯವರು ಡೆ-ನಲ್ಮ್ ಯೋಜನೆಯು ಸುಮಾರು 28 ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದೆ, ಅದರಂತೆ ಸಾವಿರಾರು ಯುವಕರು ಇದರಿಂದ ಸದುಪಯೋಗ ಪಡೆದುಕೊಂಡು ಉದ್ಯೋಗದಲ್ಲಿದ್ದಾರೆ, ಎಲ್ಲರಿಗೂ ಸರಕಾರಿ ನೌಕರಿ ಸಿಗುವುದು ಕಷ್ಟ ಅದಕ್ಕಾಗಿ ಕೇವಲ ಸರಕಾರಿ ನೌಕರಿಗಾಗಿ ಕಾಲಹರಣ ಮಾಡದೆ ಸರಕಾರ ಸ್ವಯಂ ಉದ್ಯೋಗ ಮಾಡುವವರಿಗೆ ಡೆ- ನಲ್ಮ್ ಯೊಜನೆಯಲ್ಲಿ ಹಲವಾರು ತರಬೇತಿಗಳನ್ನು ನೀಡುತ್ತಲಿದೆ ಅದನ್ನು ತಾವೆಲ್ಲರೂ ಸದಯಪಯೋಗ ಪಡೆದುಕೊಳ್ಳಲು ತಿಳಿಸಿದರು,

ಕಾರ್ಯಾಕ್ರಮವನ್ನು ಪುರಸಭೆಯ ಸದಸ್ಯರಾದ ಪ್ರಕಾಶ ಕರನಿಂಗ, ಪುರಸಭೆಯ ಅದ್ಯಕ್ಷರಾದ ರಜಿಯಾ ಬೇಗಂ ಹೊರಕೇರಿ, ಸದಸ್ಯರುಗಳಾದ ಮಾರುತಿ ಪೂಜೇರಿ, ರಜಿಯಾ ಸುಲ್ತಾನ ನದಾಫ, ಸಾಹಿರಾಬಾನು ಜಮಾದರ ಉದ್ಘಾಟಿಸಿದರು.ಪುರಸಭೆಯ ಕಂದಾಯ ಅಧಿಕಾರಿ ರಮೇಶ ಸೊನ್ನದ, ರಾಜೇಶ ಎಂಟರ ಪ್ರೈಜಸ್ ಶಾಖೆ ಕೊಣ್ಣೂರ ತರಬೇತುದಾರ ಅನೀಲ‌ ಹೀರೆಮಠ, ಕೊಣ್ಣೂರಿನ ಕಂಪ್ಯೂಟರ ಮತ್ತು ಹೊಲಿಗೆ ತರಬೇತುದಾರರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಸಮುದಾಯ ಸಂಘಟಕರಾದ ಮಲ್ಲಪ್ಪ ಪೆದನ್ನವರ ಮಾಡಿದರು,


Spread the love

About fast9admin

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *