Breaking News

ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*

Spread the love

*ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*

ಗೋಕಾಕ : ಗೋಕಾಕ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಸತತವಾಗಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೋಳಿ ಕುಟುಂಬದ ಜೊತೆ ಇದ್ದಿರಿ, ಇಲ್ಲಿ ಗೆದ್ದವರು ಸೋತವರು ಎಲ್ಲರೂ ನೀವು ನಮ್ಮವರೆ
ಸಚಿವರು, ಶಾಸಕರು ಮಾಡದಂತ ಕೆಲಸಗಳನ್ನು ಗ್ರಾಮ ಪಂಚಾಯತ. ಸದಸ್ಯರು ಮಾಡಬಹುದು. ಗ್ರಾಮದಲ್ಲಿ ಪ್ರತಿ ದಿನ ಇರುವವರು ನೀವುಗಳು ತಮ್ಮ ಗ್ರಾಮದ ಸಮಸ್ಯೆಗಳು ನಿಮಗೆ ಗೊತ್ತಿರುತ್ತವೆ. ಆದ ಕಾರಣ ತಾವು ಜನರ ಧ್ವನಿಯಾಗಿ, ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡುವುದಕ್ಕಾಗಿ ನಾವು ಸದಾ ನಿಮ್ಮ ಜೊತೆ ಇರುತ್ತೇವೆ, ಯಾರು ಗ್ರಾಮದ ಅಭಿವೃದ್ಧಿಗೆ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೋ ಅಂತವರು ಒಳ್ಳೆಯ ನಾಯಕರಾಗಲು ಸಾಧ್ಯ. ನಿಮಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ ಎಂದು ಆಯ್ಕೆಯದ ಸದಸ್ಯರಿಗೆ ಕಿವಿಮಾತು ಹೇಳಿದರು.

ಇನ್ನೂ ಕೆಲವರು ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ ಬರ್ಜರಿ ಗೆಲುವೆಂದು ಬಿಗುತಿದ್ದಾರೆ, ಅದಕ್ಕೆ ನಾನು ಮನಸ್ಸು ಮಾಡಿದರೆ 24 ತಾಸಿನಲ್ಲಿ ಕಾಂಗ್ರೇಸ್ಸಿನವರು ಬಿಜೆಪಿಗೆ ಬರುತ್ತಾರೆ. ಇನ್ನೂ ಬೆಳಗಾವಿ ಲೊಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಅಂಗಡಿ ಕುಟುಂಬದವರಿಗೆ ನೀಡಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಆದ್ರೆ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸುವ ಎಲ್ಲ ಪ್ರಯತ್ನವನ್ನು ಮಾಡಲು ಸಿದ್ಧರಿದ್ದೇವೆ.

ಇನ್ನು ನಾನು ಪ್ರದಾನ ಮಂತ್ರಿ ಮೋದಿ, ಅಮೀತ ಷಾ ಹಾಗೂ ಯಡಿಯೂರಪ್ಪನವರ ಗಟ್ಟಿತನ ನೋಡಿ ಕಾಂಗ್ರೇಸ್ ಬಿಟ್ಟು ಬಿಜೆಪಿಗೆ ಬಂದಿದ್ದೇನೆ, ಇದನ್ನು ನೋಡಿ ಬಿಜೆಪಿಗೆ ಬಂದಿದ್ದಕ್ಕೆ ಕೆಲ ಕಾಂಗ್ರೆಸ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.

ನಂತರ ಸಚಿವರು ನೂತನವಾಗಿ ಆಯ್ಕೆಯಾದ ಮಮದಾಪುರ, ಪಾಮಲದಿನ್ನಿ, ಕುಂದರಗಿ, ಶಿಲ್ತಿಬಾಂವಿ, ಮಾಲದಿನ್ನಿ, ಕೊಣ್ಣೂರ ಗ್ರಾಮೀಣ,ಸಾವಳಗಿ, ಮಾಲದಿನ್ನಿ ಇನ್ನುಳಿದ ಗ್ರಾಮ ಪಂಚಾಯತಿಯ ಚುನಾಯಿತ ನೂತನ ಬಿಜೆಪಿ ಬೆಂಬಲಿತ ಸದಸ್ಯರಿಗೆ ಸತ್ಕರಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಶಾಸಕ ಎಂ,ಎಲ್,ಮುತ್ತೆಣ್ಣವರ,
ಬಿಜೆಪಿ ಜಿಲ್ಲಾ ಪ್ರಧಾನ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮುಖಂಡರುಗಳಾದ ಸಿದ್ದಲಿಂಗ ದಳವಾಯಿ, ಶಶಿಧರ ದೇಮಶೆಟ್ಟಿ,ಡಿ ಎಮ್ ದಳವಾಯಿ, ಸುರೇಶ ಪಾಟೀಲ, ಸಿದ್ಧಗೌಡ ಪಾಟೀಲ,ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು


Spread the love

About fast9admin

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *