Breaking News

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ

Spread the love

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ

ಮೂಡಲಗಿ : ಅರಭಾವಿ ವಿಧಾನಸಭಾ ಮತ ಕ್ಷೇತ್ರದ ವಡೆಯರಟ್ಟಿ ಗ್ರಾಮ ಪಂಚಾಯಿತಿಗೆ ಇತ್ತಿಚೇಗೆ ಆಯ್ಕೆಯಾದ ನೂತನ ಸದಸ್ಯರು ಭಾನುವಾರ ಗೋಕಾಕದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗುವ ಮೂಲಕ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮದಲ್ಲಿನ ಜನರ ಸಮಸ್ಯೆ, ಅವರ ಧ್ವನಿಯಾಗಿ ತಾವು ಕಾರ್ಯಗಳನ್ನು ಮಾಡಬೇಕು. ಗ್ರಾಪಂ.ಗೆ ಬರುವ ಅನುದಾನವನ್ನು ಗ್ರಾಮಾಭಿವೃದ್ಧಿಗೆ ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿ ಎಂದು ಗ್ರಾಪಂ. ಸದಸ್ಯರಿಗೆ ಶಾಸಕ ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.

ನಾಗಪ್ಪ ಪಾಟೀಲ, ಗೋಪಾಲ ಬೀರನಗಡ್ಡಿ, ಸಿದ್ದಯ್ಯ ಪೂಜೇರಿ, ಅಡಿವೇಪ್ಪ ಹಾದಿಮನಿ, ಕಾನಪ್ಪ ಹೊಳಕರ್ ಸೇರಿದಂತೆ ಶಾಸಕರ ಬೆಂಬಲಿತ ನೂತನ 12 ಜನ ಗ್ರಾಪಂ. ಸದಸ್ಯರು ಇದ್ದರು.


Spread the love

About fast9admin

Check Also

ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ದಲಿತರ ಮನವಿ

Spread the loveಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ಜಾರಕಿಹೊಳಿ ಅವರಿಗೆ …

Leave a Reply

Your email address will not be published. Required fields are marked *