Breaking News

ಅಬಿವೃದ್ದಿಗಾಗಿ ಬಿಜೆಪಿ ಬಿಟ್ರು, ಕಾಂಗ್ರೆಸ್ಸಿಗೆ ಸೇರಿದ್ರು,,,

Spread the love

ಅಬಿವೃದ್ದಿಗಾಗಿ ಬಿಜೆಪಿ ಬಿಟ್ರು, ಕಾಂಗ್ರೆಸ್ಸಿಗೆ ಸೇರಿದ್ರು,,,

ಸುಮಾರು ಇಪ್ಪತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದ ಹುಕ್ಕೇರಿ ತಾಲೂಕಿನ ಪಾಶ್ಛಾಪುರ ಗ್ರಾ,ಪಂ, ಸದಸ್ಯರೊಬ್ಬರು ಇವತ್ತು ಕೆ,ಪಿ,ಸಿ,ಸಿ,ಕಾರ್ಯಾದಕ್ಷರಾದ ಪುತ್ರ ರಾಹುಲ ಜಾರಕಿಹೋಳಿ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೋಳಿಯವರ ಸಮ್ಮುಖದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಹುಸೇನ್ ಪಟ್ಟನಕೋಡಿ,ಮಾತನಾಡಿ ಗ್ರಾಮದಲ್ಲಿ ಸತೀಶ ಜಾರಕಿಹೋಳಿಯವರ ಅಬಿವೃದ್ದಿ ಕಾರ್ಯ ನೋಡಿ ತಮ್ಮನ್ನು ಗೆಲ್ಲಿಸಿ ಕಳಿಸಿದ ಜನತೆ, ಗ್ರಾಮಕ್ಕೆ ಅಬಿವೃದ್ದಿ ಮಾಡಲು ಮನಿಶಾ ಶಿಂದೆ ಅವರು ಬಿಜೆಪಿಯಿಂದ ಅಬಿವೃದ್ದಿ ಕೆಲಸ ಆಗದಿದ್ದಕ್ಕೆ ಇವತ್ತು ಕಾಂಗ್ರೆಸ್ ಸೆರ್ಪಡೆಯಾಗಿದ್ದು ನಮಗೆಲ್ಲಾ ಖುಷಿ ತಂದಿದೆ, ಅದಲ್ಲದೆ ಇವರ ಜೊತೆ ಇನ್ನೂ ಕೆಲವರು ಬಿಜೆಪಿ ತೊರೆದು ಕಾಂಗ್ರೇಸ್ಸಿಗೆ ಬರುತ್ತೇವೆಂದು ಹೇಳಿದ್ದಾರೆ.ಅವರ ಜೊತೆ ನಾವೆಲ್ಲರೂ ಮತ್ತೆ ಸಂಪರ್ಕ ಮಾಡಿ ಶೀಘ್ರದಲ್ಲೇ ಉಳಿದ ಗ್ರಾಮ ಪಂಚಾಯತ ಸದಸ್ಯರು ಬಿಜೆಪಿಯಿಂದ ಕಾಂಗ್ರೇಸ್ಸಿಗೆ ಬರಲಿದ್ದಾರೆಂದು ಮಾದ್ಯಮದವರ ಮುಂದೆ ಹೇಳಿದರು

ಈ ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ,ಕುಮಾರ ಗುಡಗನಟ್ಟಿ .ರಾಮಚಂದ್ರ ಆವೋಜಿ,ಬಾಬು ಹೀರೆಕೋಡಿ,ಕೆಂಪಣ್ಣಾ ಮುಗಳಿ ಇನ್ನುಳಿದ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About fast9admin

Check Also

ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ: BLJ-

Spread the love*ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ*. *ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷ …

Leave a Reply

Your email address will not be published. Required fields are marked *