Breaking News

ಶರಣರ ಮೂರ್ತಿ ಪ್ರತಿಷ್ಟಾಪನೆಯಿಂದ ಸಮಾಜದ ಇತಿಹಾಸ ತಿಳಿಯುತ್ತದೆ: ಪ್ರಕಾಶ ಕರನಿಂಗ.

Spread the love

ಶರಣರ ಮೂರ್ತಿ ಪ್ರತಿಷ್ಟಾಪನೆಯಿಂದ ಸಮಾಜದ ಇತಿಹಾಸ ತಿಳಿಯುತ್ತದೆ: ಪ್ರಕಾಶ ಕರನಿಂಗ.

ಗೋಕಾಕ: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶ್ರೀ ನಿಜ ಶರಣ ಅಂಬಿಗೇರ ಚೌಡಯ್ಯನವರ 901 ನ ಜಯಂತಿ ನಿಮಿತ್ಯ ಶ್ರೀ ಅಂಬಿಗೇರ ಚೌಡಯ್ಯನವರ ಮೂರ್ತಿ ಪ್ರತಿಷ್ಟಾಪನೆ ಮಾಡಿ ಲೊಕಾರ್ಪಣೆ ನಡೆಯಿತು,
ಮೂರ್ತಿಯ ಪ್ರತಿಷ್ಟಾಪನೆಯನ್ನು ಮರಡಿಮಠದ ಶ್ರೀ ಮ,ಘ,ಚ, ಪವಾಡೇಶ್ವರ ಸ್ವಾಮಿಜಿಗಳು ಮತ್ತು ಕಾರ್ಮಿಕ ದುರಿಣ, ಕೊಡುಗೈ ದಾನಿ ಅಂಬಿರಾವ ಪಾಟೀಲ ಇವರು ನೆರವೆರಿಸಿದರು.

ಈ ಸಂದರ್ಬದಲ್ಲಿ ಕೊಣ್ಣೂರಿನ‌ ಗಂಗಾಮಾತಾ ಸಮಾಜದವರಿಂದ ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಮತ್ತು ವೇದಿಕೆ ಮೇಲೆ ಆಸಿನರಾದ ಗಣ್ಯವ್ಯಕ್ತಿಗಳಿಂದ ಸನ್ಮಾನಿಸಲಾಯಿತು.

ಇನ್ನು ಇದೆ ಸಂದರ್ಭ ಮಾತನಾಡುತ್ತಾ ಗಂಗಾ ಮಾತಾ ಜಿಲ್ಲಾ ಅದ್ಯಕ್ಷರಾದ, ಶೆಟ್ಟೆಪ್ಪಾ ತಳವಾರ ಇವರು ಸಮಾಜವನ್ನು ಒಂದಾಗಿರಸಲು ಇವತ್ತು ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅವಶ್ಯವಾಗಿದೆ, ಅದಲ್ಲದೆ ಮೂರ್ತಿ ಪ್ರತಿಷ್ಟಾಪನೆಯಿಂದ ನಮ್ಮ ಮೂಲ ಪುರುಷರ ಶರಣರ ಬಗ್ಗೆ ತಿಳಿವಳಿಕೆ ಬರುತ್ತದೆ,ಹಾಗೂ
ನಮ್ಮಲ್ಲಿರುವ ಚಿಂತೆ ತಪ್ಪಬೇಕಾದರೆ ನಮ್ಮ ಆತ್ಮವನ್ನು ಪರಮಾತ್ಮನಿಗೆ ಒಲಿಸಬೇಕು,ಬೇಕು ಬೇಕು ಅನ್ನು ನಮ್ಮ‌ಜೀವನವನ್ನು ಸಾಕು ಅನ್ನುವ ಹಾಗೆ ಮಾಡಬೇಕಾದರೆ ನಮ್ಮ ಮನಸ್ಸು ಶಾಂತವಾಗಿರಬೇಕು ಆಗ ಮಾತ್ರ ನಮ್ಮ ಜೀವನಕ್ಕೆ ಒಂದು ಬೇಲೆ ಬರುತ್ತದೆ ಎಂದರು.

ವೇದಿಕೆ ಮೇಲೆ ಆಸಿನರಾಗಿದ್ದ ಪುರಸಬೆ ಸದಸ್ಯರಾದ ಪ್ರಕಾಶ ಕರನಿಂಗ ಮಾತನಾಡಿ ಕೊಣ್ಣೂರಲ್ಲಿ ಯಾವುದೆ ಹಬ್ಬ ಹರಿದಿನವಿರಲಿ ತಮ್ಮ ಧರ್ಮಗಳನ್ನು ಮರೆತು ಎಲ್ಲರೂ ಒಂದೂಗೂಡಿ ಮಾಡುತ್ತರೆ ಎನ್ನುವುದಕ್ಕೆ ಇವತ್ತು ಸೇರಿದ ಜನಸದತೋಮ ಸಾಕ್ಷಿ ಹಾಗೂ ಗಂಗಾಮಾತಾ ಸಮಾಜದವರ ಬೇಡಿಕೆಯಂತೆ ಕೊಣ್ಣೂರಿನ ನದಿಯಲ್ಲಿ ಗಂಗಾಮಾತೆಯ ದೇವಸ್ಥಾನವನ್ನು ನಮ್ಮೆಲ್ಲರ ನೆಚ್ಚಿನ ಸಚಿವರಾದ ರಮೇಶ ಜಾರಕಿಹೋಳಿಯವರ ಈಗಾಗಲೆ ನಮಗೆ ತಿಳಿಸಿದಂತೆ ಎಲ್ಲ ಸದಸ್ಯರುಗಳು ಸೇರಿ ಸಬೆಯಲ್ಲಿ ಚರ್ಚಿಸಿ ಮಾಡಿಕೊಡಲಾಗುವುದೆಂದು ಬರವಸೆ ನೀಡಿದರು.

ಇನ್ನು ಮುಂಜಾನೆ ಹೊತ್ತು ಶ್ರೀ ಕಾಡಶಿದ್ದೇಶ್ವರ ದೇವಸ್ಥಾನದಿಂದ ಸುಮಾರು ನೂರಾರು ಸುಮಂಗಲಿಯರು ಕುಂಬ ಮೇಳದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಶರಣ ಶ್ರೀ ಅಂಬಿಗೇರ ಚೌಡಯ್ಯನವರ ಮೂರ್ತಿವರೆಗೂ ತೆರಳಿದರು. ಈ ಸಮಯದಲ್ಲಿ ಸ್ಥಳಿಯ ಮುಖಂಡರಾದ ಪ್ರಕಾಶ ಕರನಿಂಗ, ನಂದಾ ಗಣಾಚಾರಿ,ವಿನೋದ ಕರನಿಂಗ, ಅಶೋಕ ಕೋಳಿ, ಸ್ಥಳಿಯ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ, ಅದ್ಯಕ್ಷರಾದ ರಜಿಯಾಬೇಗಂ ಹೊರಕೇರಿ, ಉಪಾದಕ್ಷರಾದ ಮಲ್ಲಪ್ಪ ಹುಕ್ಕೇರಿ, ಅಟಲ್ ಕಡಲಗಿ, ಮಾರುತಿ ಪೂಜೇರಿ,ಯಲ್ಲಪ್ಪ ಗಾಡಿವಡ್ಡರ, ಇಮ್ತಿಯಾಜ ಪಿರಜಾದೆ, ಸಂಜಿವ ಖನಗಾರ, ಕುಮಾರ ಕೊಣ್ಸೂರ,ದನ್ಯಕುಮಾರ ಮೇಗೇರಿ ಸರ್ವ  ಸದಸ್ಯರು ಹಾಗೂ ಗಂಗಾ ಮಾತಾ ಸಮಾಜದ ಮುಖಂಡರು ನೂರಾರು ಯುವಕರು ಮಹಿಳೆಯರು ಉಪಸ್ಥಿತರಿದ್ದು ಶಿಕ್ಷಕರಾದ ಸಂಜೀವ ಮಾಸ್ತಮರ್ಡಿ ಹಾಗೂ ಪಿರಜಾದೆ ಇವರು ನಿರೂಪಿಸಿ ವಂದನಾರ್ಪಣೆ ಮಾಡಿದರು.


Spread the love

About fast9admin

Check Also

ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ

Spread the loveರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ ಗೋಕಾಕ ಏ, 20 :- ರಾಷ್ಟ್ರೀಯ ಮಾನವ ಹಕ್ಕುಗಳ …

Leave a Reply

Your email address will not be published. Required fields are marked *