Breaking News

ಮರಳಿ ಪಡೆದುಕೊಂಡ 50 ವರ್ಷದಿಂದ ಅತಿಕ್ರಮಣ ಮಾಡಿದ ಸ್ಮಶಾನ ಭೂಮಿ.

Spread the love

ಮರಳಿ ಪಡೆದುಕೊಂಡ 50 ವರ್ಷದಿಂದ ಅತಿಕ್ರಮಣ ಮಾಡಿದ ಸ್ಮಶಾನ ಭೂಮಿ

ಒಗ್ಗಟ್ಟಿನಿಂದ ಅಸಾದ್ಯವಾದ ಕೆಲಸವನ್ನ ಸಾದ್ಯಮಾಡುಬಹುದು ಅನ್ನುವುದಕ್ಕೆ ಕೊಣ್ಣೂರ ಸ್ಮಶಾನ ಭೂಮಿಯ ಘಟನೆಯೆ ಸಾಕ್ಷಿ,

ಹೌದು ಸುಮಾರು ಐವತ್ತು ವರ್ಷಗಳಿಂದ ಗೋಕಾಕ ತಾಲೂಕಿನ ಕೊಣ್ಣೂರಿನ ಪರಿಶಿಷ್ಟ ಮತ್ತು ಹಿಂದೂಳಿದ ಸಮಾಜದವರ ಸ್ಮಶಾನ ಭೂಮಿ ಹತ್ತಿರದಲ್ಲಿರುವ ರೈತರಿಂದ ಅತಿಕ್ರಮವಾಗಿದ್ದರಿಂದ ಅಭಿವೃದ್ಧಿಯಿಂದ ಮರಿಚಿಕೆಯಾಗಿತ್ತು.

ಆದರೆ ಇವತ್ತು ಮಾಜಿ ಸಚಿವ ರಮೇಶ ಜಾರಕಿಹೋಳಿಯವರು ಅಬಿವೃದ್ದಿಗಾಗಿ ಹೆಚ್ಚಿನ ಕಾಳಜಿ ವಹಿಸುತ್ತಿರುವದರಿಂದ ಅವರು ನೀಡಿದ ಸಲಹೆಯಂತೆ ಪರಿಶಿಷ್ಟ ಜಾತಿಯ ಸಮಾಜದವರೆಲ್ಲರೂ ಒಂದಾಗಿ ಹೋರಾಟ ಮಾಡಿದ್ದರಿಂದ ಅತಿಕ್ರಮವಾದ ಸ್ಮಶಾನ ಭೂಮಿಯು ಮತ್ತೆ ಮರಳಿ ಸಿಕ್ಕಿತು,

ಅದಲ್ಲದೆ ತಮ್ಮ ಜೊತೆಯಲ್ಲಿ ಇನ್ನೂ ಹಿಂದೂಳಿದ ಸಮಾಜದವರನ್ನು ಸೇರಿಸಿಕೊಂಡು ಸ್ಮಶಾನ ಭೂಮಿ ಅಬಿವೃದ್ದಿಗಾಗಿ ದುಡಿಯುತಿದ್ದೇವೆಂದು ಸ್ಥಳಿಯ ಮುಖಂಡರಾದ ವೆಂಕಟೇಶ ಕೇಳಿಗೇರಿ ಹೇಳಿದ್ದಾರೆ.

ಅದಲ್ಲದೆ ಮಾಜಿ ಸಚಿವ ರಮೇಶ ಜಾರಕಿಹೋಳಿ ಮಂಜೂರ ಮಾಡಿಸಿದ ಹಣದಿಂದ ಬೇರೆ ಸಮಾಜದಂತೆ ತಾವು ಕೂಡ ಸ್ಮಶಾನವನ್ನು ಅಬಿವೃದ್ದಿ ಮಾಡಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ನೀಡಿದ 200 ಸಸಿಗಳನ್ನು ನೇಟ್ಟು,ದ್ವಾರಬಾಗಿಲ ಕಾಮಗಾರಿಗೆ ಚಾಲನೆ ನೀಡಿದರು. ಅದಲ್ಲದೆ ಪ್ರತಿ ಶನಿವಾರ,ಬಾನುವಾರದಂದು ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಒಂದೊಂದು ಸಮಾಜದವರು ಊಟದ ವ್ಯವಸ್ಥೆ ಮಾಡುತ್ತ ಪ್ರತಿಯೊಬ್ಬರಿಗೆ ಹುಮ್ಮಸ್ಸು ನೀಡುತಿದ್ದಾರೆ

ಅಷ್ಟೆ ಅಲ್ಲದೆ ಈ ಸ್ಮಶಾನಕ್ಕೆ ಬೇಕಾದ ಸಿಮೆಂಟಗಳಂತಹ ಕೆಲವು ವಸ್ತುಗಳನ್ನು ಕೂಡ ದಾನಿಗಳು ಮುಂದೆ ಬಂದು ನೀಡುತಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅದ್ಯಕ್ಷ ದನ್ಯಕುಮಾರ ಮೇಗೇರಿ,ಶ್ರೀ ದುರ್ಗಾದೇವಿ ದೇವಸ್ಥಾನದ ಅರ್ಚಕ ಸದಾಶಿವ ಗುಡಜ, ಸುರೇಶ ಹೊನಕುಪ್ಪಿ,ಶೇಖರ ಕೊಣ್ಣೂರ,ಡಾ: ದೀಪಕ ಹುಂದ್ರೆ, ನಾರಾಯಣ ದೊಡ್ಡನ್ನವರ,ವಿನಯ ಘೊರ್ಪಡೆ,ಮಯೂರ ಗುಡಜ, ಸಂತೋಷ ಪಾಟೀಲ,ಕೆಂಪಣ್ಣಾ ಗೌಳಿ,ಪ್ರಕಾಶ ಕಲಾಲ,ಸಮಗಾರ,ಬಜಂತ್ರಿ,ಮೆದಾರ ಸಮಾಜದ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *