Breaking News

ಮತದಾರರು ಮತ್ತು ನಾನು ಎ ಟಿಮ್,ವಿರೋದಿಗಳೆ ಬಿ ಟಿಮ್,

Spread the love

ಮತದಾರರು ಮತ್ತು ನಾನು ಎ ಟಿಮ್,ವಿರೋದಿಗಳೆ ಬಿ ಟೀಮ್, : ಲಖನ್ ಜಾರಕಿಹೋಳಿ

ಬೆಳಗಾವಿ(ಗ್ರಾ): ವಿರೋಧಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತದೆ ಅದಕ್ಕೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಎ ಟೀಮ್ ನಮ್ಮ ವಿರೋಧಿಗಳೇ ಬಿ ಟೀಮ್ ಎಂದು ಲಖನ್ ಜಾರಕಿಹೊಳಿ ಹೇಳಿದರು.
ಅವರು, ಸುಳೆಭಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಮತದಾರರು ಎ ಒನ್. ನಾವು ಎ ಒನ್ ಎಂದು ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು.
ವಿರೋಧಿಗಳ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ, ಚುನಾವಣೆಯಲ್ಲಿ ಕಾಲಿಗೆ ಬಿಳುತ್ತಾರೆ ನಂತರ ತಮ್ಮ ಗ್ರಾಮ ಪಂಚಾಯತಿ ಸಮೀಪವು ಸುಳಿಯುವದಿಲ್ಲ. ತಾವು ಜನರಿಂದ ಆಯ್ಕೆಯಾಗಿದ್ದಿರಿ,ನೀವು ನನ್ನನ್ನು ಆಯ್ಕೆ ನಿಮ್ಮ ಸೇವೆ ಮಾಡಲು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಆಯ್ಕೆಮಾಡುವಂತೆ ಮನವಿ ಮಾಡಿದರು.
ಶಾಸಕನಾಗಲಿ ಆಗದಿರಲಿ ನಮ್ಮ ನಿಮ್ಮ ಸಂಬಂಧಗಳು ಹೀಗೆ ಇರಲಿ. ನಮಗೆ ಪೊಲೀಸ್ ಸೆಕ್ಯೂರಿಟಿ ಬೇಡ ನಾವು ಸಿಂಪಾಲ್ಲಾಗೆ ಒಂದೆ ಕಾರನಲ್ಲಿ ತಮ್ಮಡೆಗೆ ಬರುತ್ತೆನೆ. ಇಪ್ಪತ್ತು ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದೆನೆ. ಹಣದ ಆಸೆಗೆ ಮತ ನೀಡದಿರಿ. ತಮ್ಮ ಪ್ರೀತಿ ಅಭಿಮಾನವನ್ನು ನಾನು ತಮ್ಮ ಸೇವೆ ಮಾಡುವ ಮೂಲಕ ಮುನ್ನಡೆಸುತ್ತೆನೆ.
ಮಾರಿಹಾಳ ಗ್ರಾಪಂ ಸದಸ್ಯ ಸದಾನಂದ ರಾಚನ್ನವರ ಮಾತನಾಡಿ, ದುಡ್ಡಿಗೆ ಬೆಲೆಕೊಡದೇ ಯೋಗ ಹಾಗೂ ಯೋಗ್ಯತೆ ಹೊಂದಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ ಒಗ್ಗಟ್ಟಿನಿಂದ ತಮ್ಮ ಮತ ಚಲಾಯಿಸುವ ಮೂಲಕ ಅವರ ಆಯ್ಕೆಗೆ ಶ್ರಮಿಸಬೆಕೆಂದರು.
ಈ ಸಂದರ್ಭದಲ್ಲಿ ಕೃಷ್ಣಾ ಆನಗೋಳಕರ,ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿವಿದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರುಗಳಾದ ಅಬಿದಾಬೇಗಂ ಸನದಿ, ಭಾಗ್ಯಶ್ರೀ ಹನಬರ, ಅಲ್ಲನ್ನ ನಾಯ್ಕ, ನಾಗಪ್ಪ ಕಾಲೆರಿ, ಅಲ್ಲಾವುದ್ದಿನ‌ ಫನಿಬಂದ, ಬಸವರಾಜ ಮಾದಬನ್ನವರ, ಮಹೇಶ ಸುಗನೆನ್ನವರ, ರತ್ನವ್ವಾ ಕೊಲಕಾರ ಸೇರಿದಂತೆ ನೂರಾರು ಗ್ರಾಪಂ ಸದಸ್ಯರು ಇದ್ದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *