Breaking News

ಮತಪಟ್ಟಿಗೆ ಹೊತ್ತು ತರುತ್ತಿದ್ದ ಬಸ್ ಗೆ ಟಿಪ್ಪರ್ ಡಿಕ್ಕಿ ಅಪಘಾತ; ಚುನಾವಣಾ ಸಿಬ್ಬಂದಿಗಳಿಗೆ ಗಾಯ..

Spread the love

ಮತಪಟ್ಟಿಗೆ ಹೊತ್ತು ತರುತ್ತಿದ್ದ ಬಸ್ ಗೆ ಟಿಪ್ಪರ್ ಡಿಕ್ಕಿ ಅಪಘಾತ; ಚುನಾವಣಾ ಸಿಬ್ಬಂದಿಗಳಿಗೆ ಗಾಯ....

ಮುದ್ದೇಬಿಹಾಳ; ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ,ಕೂಪ್ಪ ತಾಂಡ,ಕೂಪ್ಪ ಸಿದ್ದಾಪೂರ ಗ್ರಾಮದ ಮತ ಪೆಟ್ಟಿಗೆ ಮತ್ತು ಸಿಬ್ಬಂದಿ ಕರೆತರುತ್ತಿದ್ದ ಬಸ್ ಆಲಮಟ್ಟಿ ರಸ್ತೆಯ ಗೆದ್ದಲಮರಿ ಬಳಿ ಮಂಗಳವಾರ ರಾತ್ರಿ 7;30 ರ ಸಮಯಕ್ಕೆ ಸಿಮೆಂಟ್ ಮಿಕ್ಸರ್ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಇದ್ದ ಸಿಬ್ಬಂದಿ ಗಳಿಗೆ ಗಾಯಗೂಂಡಿದ್ದು ಬಸ್ ಚಾಲಕನಿಗೆ ಸ್ಥಿತಿ ಗಂಭೀರವಾಗಿದೆ ಚಾಲಕನ ಎರಡು ಕಾಲು ಸಿಲುಕಿದ್ದ ಪರಿಣಾಮ ಅವರನ್ನು ಬಸ್ ಆಚೆ ತಗೆಯಲು ಹರಸಾಹಸ ಪಡಬೇಕಾಯಿತು ,
ಸ್ಥಳಿಯರ ನೆರವಿನಿಂದ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು

ಸ್ಥಳಕ್ಕೆ ತಹಶಿಲ್ದಾರ ಎಂ‌ ಎಸ್ ಅರಕೇರಿ ಹಾಗೂ ಹೆಚ್ಚುವರಿ ಎಸ್ಪಿ ರಾಮ ಅರಸಿದ್ದಿ ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ ಇತರರು ಬಸ್ ನಲ್ಲಿ ಸಿಲುಕಿದ್ದ ಬಸ್ ಚಾಲಕ ಹುಲ್ಲಪ್ಪ ಬಿರಾದಾರ ನನ್ನು ತೆಗೆದುಕೊಂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ ಚಾಲಕನ ಬಲಗಾಲಿಗೆ ಗಂಭೀರವಾಗಿ ಗಾಯವಾಗಿದೆ ,ಬಸ್ ಚಾಲಕನನ್ನು ಸೇರಿದಂತೆ ಒಟ್ಟು 7 ಜನರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಉಳಿದ 15 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ
ಶಾಲಾ ಶಿಕ್ಷಕರು, ಶಿಕ್ಷಕಿಯರು ,ಪೂಲೀಸರು ಹೋಮ್ ಗಾರ್ಡ್ ಚುನಾವಣೆ ಸಿಬ್ಬಂದಿಗಳು ಗಾಯಗೂಂಡಿದ್ದಾರೆ ,

ಅತಿ ವೇಗದಿಂದ ಬಂದ ಸಿಮೆಂಟ್ ಕಾಂಕ್ರೀಟ್ ಮಿಕ್ಸಿಂಗ್ ವಾಹನ ಬಸ್ ಗೆ ಮುಖಾಮುಖಿ ಡಿಕ್ಕಿಯಾಗಿದ್ದಾನೆ ಬಸ್ ಡ್ರೈವರ್ ಬದಿ ಹೆಚ್ಚಿನ ಹಾನಿ ಸಂಭವಿಸಿದೆ
ಒಟ್ಟು 15 ಕ್ಕೂ ಹೆಚ್ಚು ಜನರು ಗಾಯ ಗೂಂಡಿದ್ದು 7 ಜನರನ್ನು ಜಿಲ್ಲಾ ಆಸ್ಪತ್ರೆ ಗೆ ಕಳುಹಿಸಲಾಗಿದೆ

ಮತ ಪಟ್ಟಿಗೆ ಸುರಕ್ಷಿತ; ಉಪವಿಭಾಗ ಅಧಿಕಾರಿ

ಬಸ್ ನಲ್ಲಿ ತರಲಾಗುತ್ತಿದ್ದ ಒಟ್ಟು 6ಮತ ಪಟ್ಟಿಗೆ ಗಳು ಸುರಕ್ಷಿತವಾಗಿದ್ದು ಬೇರೆ ವಾಹನ ವ್ಯವಸ್ಥೆ ಮಾಡಿ ಮತಪಟ್ಟಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಉಪವಿಭಾಗಧಿಕಾರಿ ರಾಮಚಂದ್ರ ಗಡಾದೆ ಮಾಹಿತಿ ನೀಡಿದರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿ ಗಳಿಗೆ ತಿಳಿಸಿದ್ದು ಗಂಭೀರವಾಗಿ ಗಾಯವಾದವರನ್ನು ಜಿಲ್ಲಾ ಆಸ್ಪತ್ರೆ ಗೆ ಕಳುಹಿಸಿದ್ದು ಚಿಕ್ಕ ಪುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ ಎಂದರು

*ಆಸ್ಪತ್ರೆ ಗೆ ಉಪ ಜಿಲ್ಲಾಧಿಕಾರಿ ಡಾ.ಔವದ ರಾಮ್ ಅವರು ಬೇಟಿ*;

ಉಪಜಿಲ್ಲಾಧಿಕಾರಿ ಡಾ.ಔವದ್ ರಾಮ್ ಅವರು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಪಘಾತ ಕುರಿತು ಮಾಹಿತಿ ಪಡೆದು ಗಾಯಾಳುಗಳಿಗೆ ಸಾಂತ್ವನ ಹೇಳಿದರು ಮತ್ತು ಹೆಚ್ಚಿನ ಚಿಕಿತ್ಸೆ ಜಿಲ್ಲಾ ಆಸ್ಪತ್ರೆಗೆ ತೆರಳಿದರ ಕುರಿತು ಜಿಲ್ಲಾ ವೈಧ್ಯರೂಂದಿಗೆ ಮಾತನಾಡಿ ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಲು ಸೂಚಿಸಿ ಆಸ್ಪತ್ರೆಯಲ್ಲಿ ಇದ್ದ ಇಬ್ಬರು ಗಾಯಾಳಿಗೆ ಮಾತನಾಡಿಸಿ ಧೈರ್ಯ ಹೇಳಿದರು ಉಪ ಜಿಲ್ಲಾಧಿಕಾರಿ ಆಗಮಿಸುವ ಮುನ್ನ ಗಾಯಾಳುಗಳು ತೆರಳಿದ್ದರು ತಾಲೂಕು ವೈದ್ಯಾಧಿಕಾರಿ ಸತೀಶ್ ತಿವಾರಿವಯವರಿಂದ ಬಸ್ ನಲ್ಲಿ ಇದ್ದ ಸಿಬ್ಬಂದಿಗಳ ಕುರಿತು ಮಾಹಿತಿ ಪಡೆದರು ಎಲ್ಲಾ ಸಿಬ್ಬಂದಿಗಳು ಪ್ರಾಣಾಯಪಾಯದಿಂದ ಪಾರಾಗಿದ್ದಾರೆ.


Spread the love

About fast9admin

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *