Breaking News

ಪತ್ರಕರ್ತರನ ಮೇಲೆ ಹಲ್ಲೆ ಖಂಡಿಸಿ ಅಧಿಕಾರಿ ವಿರುದ್ದ ಕ್ರಮಕ್ಕಾಗಿ ಗೋಕಾಕ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

Spread the love

ಪತ್ರಕರ್ತರನ ಮೇಲೆ ಹಲ್ಲೆ ಖಂಡಿಸಿ ಅಧಿಕಾರಿ ವಿರುದ್ದ ಕ್ರಮಕ್ಕಾಗಿ ಗೋಕಾಕ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಗೋಕಾಕ: ಇತ್ತಿಚೆಗೆ ಮೂಡಲಗಿಯಲ್ಲಿ ನಡೆದ ಸಿಪಿಐ ವೆಂಕಟೇಶ ಮುರನಾಳ ಅವರು ಪತ್ರಕರ್ತರನ ಮೇಲೆ ಹಲ್ಲೆ ಖಂಡಿಸಿ ಗೋಕಾಕ ಪತ್ರಕರ್ತರ ಸಂಘ ಶನಿವಾರದಂಧು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಿಕೋದ್ಯಮಿಯನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣ ಸಲಾಗಿದೆ. ಸಮಾಜದ ಅಂಕು ಡೊಕುಗಳನ್ನು ತಿದ್ದುವ ಸಮಾಜದಲ್ಲಿ ನಡೆಯುವ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೆಯ ಮೂಲಕ ಬಿತ್ತರಿಸುತ್ತ ಹೋಗುತ್ತಾರೆ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಪರ್ತಕರ್ತರ ಕಾರ್ಯವನ್ನು ಶ್ಲಾಘಿಸಿರುವ ರಾಜ್ಯ ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಸಹ ಮಾಡಿದ್ದು ಪತ್ರಕರ್ತರಿಗೆ ಯಾವುದೇ ರೀತಿ ತೊಂದರೆ ನೀಡಬಾರದು ಎಂಬ ಆದೇಶ ಹೊರಡಿಸಿದೆ.
ಇಂತಹ ಸಂದರ್ಭದಲ್ಲಿ ದಿ.13-5-2021ರಂದು ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿ ಮನೆಗೆ ಹಾಲು ತೆಗದುಕೊಂಡು ಹೋಗುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾಗಿರುವ ವೆಂಕಟೇಶ ಮುರನಾಳ ಅವರು ಭಾರತ ವೈಭವ ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದರು. ಈ ವೇಳೆ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪತ್ರಕರ್ತ ತನ್ನ ಗುರುತಿನ ಚೀಟಿ ತೋರಿಸಿದರು. ಸಿಪಿಐ ಅವರು ನೀನು ಪತ್ರಕರ್ತನಾದರೆ ನನಗೆ ಏನು ನನ್ನ ಮೇಲೆ ದೂರು ದಾಖಲು ಮಾಡು ಎಂದು ದರ್ಪದ ಮಾತನಾಡಿದ್ದಾರೆ. ಈ ಉದ್ದಾಟತನವನ್ನು ಗೋಕಾಕ ಪತ್ರಕರ್ತರ ಬಳಗ ಖಂಡಿಸಿದೆ. ಪತ್ರಕರ್ತರಿಗೆ ಥಳಿಸಿ ಅವಮಾನಿಸಿರುವ ಅಧಿಕಾರಿ ವಿರುದ್ದ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಯ್ಯದ ಧಾರವಾಡಕರ, ಪಿ ಪ್ರಭಾಕರ, ಭೀಮಶಿ ಭರಮನ್ನವರ, ಸಾಧಿಕ ಹಳ್ಯಾಳ, ಮನೋಹರ ಮೇಗೆರಿ, ಬಸವರಾಜ ದೇಶನೂರ, ಜೆಮ್ಸ್ ವರಗಿಸ್, ಕಿರಣ ಡಮಾಮಗರ, ಜಾಫರ್ ಶಹಾಭಾಶಘಾನ್, ಚೇತನ ಖಡಕಭಾಂವಿ, ಉಮೇಶ ನಂದಗಾವ, ವಿಠ್ಠಲ ಕುಂಬಾರ, ಸಂತೋಷ ನೊಗನಾಳ, ರಾಮು ಖೋಣಿ, ಕೃಷ್ಣಾ ಕರಗುಪ್ಪಿ ಇನ್ನಿತರ ಪತ್ರಕರ್ತರು ಉಪಸ್ಥಿತಿದ್ದರಿದ್ದರು.


Spread the love

About fast9admin

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *