Breaking News

ಸಮಾಜದಲ್ಲಿ ಶಾಂತಿ ನೆಲೆಸಲು ಪೋಲಿಸರ ಜೊತೆ ಸಾರ್ವಜನಿಕರ ಸಹಕಾರ ಮುಖ್ಯ : PSI ಕಿರಣ ಮೊಹಿತೆ

Spread the love

ಮಾಜದಲ್ಲಿ ಶಾಂತಿ ನೆಲೆಸಲು ಪೋಲಿಸರ ಜೊತೆ ಸಾರ್ವಜನಿಕರ ಸಹಕಾರ ಮುಖ್ಯ : PSI ಕಿರಣ ಮೊಹಿತೆ

ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ನಗರದಲ್ಲಿ ಶಾಂತಿ ನೆಲೆಸುತ್ತದೆ. ಹೀಗಾಗಿ ದಸರಾ ಹಬ್ಬವನ್ನು ಶಾಂತಿಯುತವಾಗಿ ಭಕ್ತಿ ಭಾವದಿಂದ ಆಚರಿಸಲು ಗೋಕಾಕ‌ ತಾಲೂಕಿನ ಕೊಣ್ಣೂರಿನ ಅಂಬೇಡ್ಕರ್ ನಗರದಲ್ಲಿ ದಸರಾ ಹಬ್ಬದ ನಿಮಿತ್ಯ ಕರೆದ ಶಾಂತಿ ಸಭೆಯಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಐ, ಕಿರಣ ಮೊಹಿತೆಯವರು ಸಾರ್ವಜನಿಕರಿಗೆ ತಿಳಿ ಹೇಳಿದರು.

ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ.ಸಾರ್ವಜನಿಕರ ಸಹಕಾರವೂ ಅತೀ ಮುಖ್ಯವಾಗಿದೆ.

ಹಬ್ಬದ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ವದಂತಿ ಹರಡುವುದು ಹೆಚ್ಚು. ಹೀಗಾಗಿ ವದಂತಿಗಳಿಗೆ ನಾಗರೀಕರು ಕಿವಿಕೊಡಬಾರದು. ಅಕಸ್ಮಾತ್ ವದಂತಿ ನಿಮ್ಮ ಕಿವಿಗೆ ಬಿದ್ದರೆ, ಇಲಾಖೆಯ ಗಮನಕ್ಕೆ ತನ್ನಿ, ಅದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದರು.

ಹಿರಿಯರು ಮಾರ್ಗದರ್ಶಕರಾಗಿ ಮುಂದೆ ನಿಂತು,
ಕಿರಿಯರಿಗೆ ಮಾರ್ಗದರ್ಶನ ಮಾಡಿದರೆ, ಸಮಾಜದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯುವುದಿಲ್ಲ ಅದಲ್ಲದೆ ಹಬ್ಬ ಹರಿದಿನಗಳಲ್ಲಿ ಯಾರೂ ಸಹ ಮದ್ಯಪಾನ ಮಾಡಿ ಮೆರವಣಿಯಲ್ಲಿ ಭಾಗವಹಿಸಬಾರದು ಅದರ ಜೊತೆಯಲ್ಲಿ ಸಾರ್ವಜನಿಕರು ಕೂಡ ಪೋಲಿಸ್ ಇಲಾಖೆಯ ಜೊತೆ ಸಹಕರಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಯಮನಪ್ಪಾ ಕೊಣ್ಣೂರ, ದನ್ಯಕುಮಾರ ಮೇಗೇರಿ,ನ್ಯಾಯವಾದಿ ರಾಹುಲ ಮೇಗೇರಿ,ವಿಠ್ಠಲ ಗುಡಜ,ಸದಾನಂದ ಶಿಂಗ್ಯಾಗೋಳ,ಶೇಖರ ಗುಡಜ, ಪೋಲಿಸ್ ಸಿಬ್ಬಂದಿಗಳಾದ ನಾಗರಾಜ ದುರದುಂಡಿ,ಎಚ್,ಡಿ,ಗೌಡಿ ಹಾಗೂ ಇನ್ನೂಳಿದವರು ಉಪಸ್ಥಿತರಿದ್ದು ಮುಖಂಡ ವೆಂಕಟೇಶ ಕೇಳಗೇರಿ ಇವರು ಸ್ವಾಗತಿಸಿ ವಂದಿಸಿದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *