Breaking News

ಕುಡಚಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿ ಸಭೆ.

Spread the love

ಕುಡಚಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿ ಸಭೆ

ಚಿಂಚಲಿ: ಹೋಳಿ ಹಬ್ಬದ ಆಚರಣೆ ಶಾಂತಿಯುತವಾಗಿರಬೇಕು ಮೋಜು ಮಸ್ತಿ ಅಬ್ಬರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು, ಮೆರವಣಿಗೆಯಲ್ಲಿ ಬಣ್ಣ ಎರಚುವಾಗ ಕೇವಲ ಔಪಚಾರಿಕವಾಗಿ ಮಾತ್ರ ಬಣ್ಣ ಹಾಕಬೇಕು ಬಲವಂತವಾಗಿ ಹಿಂಸಾತ್ಮಕವಾಗಿ ಬಣ್ಣೆರೆಚಬಾರದು. ಅನ್ಯ ಧರ್ಮದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹೋಳಿ ಆಚರಿಸಬೇಕು. ಮಹಿಳೆಯರು, ಮಕ್ಕಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕೆಂದು ರಾಯಬಾಗ ಸಿಪಿಐ ಕೆ. ಎಸ್. ಹಟ್ಟಿ ಕರೆ ನೀಡಿದರು.

  1. ಕುಡಚಿ ಪೋಲಿಸ್ ಠಾಣೆಯ ಆವರಣದಲ್ಲಿ ಆರೋಜಿಸಿದ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಮಧ್ಯಪಾನ ಸೇವಿಸಿ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತಡೆಯಬೇಕು, ನಿಗದಿತ ವೇಳೆಯವರೆಗೆ ಹಬ್ಬ ಆಚರಣೆ ಮಾಡಿ ಮುಖ್ಯವಾಗಿ ಮಹಾಮಾರಿ ಕೊರೋನಾ ಸೋಂಕು ಎರಡನೇ ಅಲೆ ಕ್ರಮೇಣವಾಗಿ ಪ್ರಾರಂಭವಾಗಿದೆ ಆ ನೀಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಾಗಿ ಗುಂಪುಗಳು ಕೂಡುವುದನ್ನು ಸ್ವಲ್ಪ ಮಟ್ಟಿಗೆ ಕಡೆಮೆ ಮಾಡಿಕೊಳ್ಳಿ ಮಾಸ್ಕ್ ಬಳಸಿ ಇಲಾಖೆಯೊಂದಿಗೆ ಸಹಕರಿಸಬೇಕು ಏನೇ ತೊಂದರೆ ಆದರೂ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಳ್ಳವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕುಡಚಿ ಪೋಲಿಸ್ ಠಾಣೆಯ ಪಿಎಸ್ಐ ಶಿವರಾಜ ಧರಿಗೊಂಡ ಮಾತನಾಡಿ ನಮ್ಮ ಹಬ್ಬಹರಿದಿನಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಹಬ್ಬ ಆಚರಣೆ ವೇಳೆ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಸ್ತಾವಿಕವಾಗಿ ಹೇಳಿದರು.

ಈ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲಿ ಎಎಸ್ಐ ಡಿ ಎಸ್ ಗೊಂದಳಿ, ಎಎಸ್ಐ ಎಚ್. ಖ. ಬೋಜನ್ನವರ, ಪ್ರಕಾಶ ಖವಟಗೋಪ್ಪ, ಪ್ರವೀಣ ಬಬಲೇಶ್ವರ, ಪಿ. ಖ ಚವ್ಹಾನ, ಸಿದ್ದು ಪಾಟೀಲ, ಆರಿಫ್ ಮುತನಾಳ. ನಾನಾ ನಸರಂದಿ, ಎಚ್. ಎಸ್. ರೋಹಿಲ. ಬಾಬಾಜಾನ ಬಿಚ್ಚು, ರಾಜು ಶಿಂಧೆ, ರಫೀಕ ತಾಬೋಳೆ, ಜಾಕೀರ ತರಡೆ ಹಾಗೂ ಕುಡಚಿ ಪೋಲಿಸ್ ಠಾಣೆಯ ವ್ಯಾಪ್ತಿಯ ಬರುವ ಗ್ರಾಮೀಣ ಭಾಗದ ಸಂಘ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *