Breaking News

ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್,

Spread the love

ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್,

ಹೌದು ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣಾನಂತರ ತೆರವಾದ ಬೆಳಗಾವಿಯ ಉಪಲೋಕಸಭಾ ಚುನಾವಣೆಗೆ ಕೊನೆಗೂ ಕಾಂಗ್ರೇಸ್ ತನ್ನ ಅಬ್ಯರ್ಥಿಯನ್ನು ಘೋಷಣೆ ಮಾಡಿದ್ದು ಬೆಳಗಾವಿ ಕಾಂಗ್ರೇಸ್ಸಿಗರಿಗೆ ಹುಮ್ಮಸು ಮೂಡಿದೆ ಯಾಕೆಂದರೆ,

ಕೈ ಟಿಕೇಟ ನೀಡಿದ್ದು ಮತ್ಯಾರಿಗೂ ಅಲ್ಲ ರಾಜಕೀಯಕ್ಜೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸೊಲರಿಯದ ಚಾಣಾಕ್ಷ ನಾಯಕ, ಬೆಳಗಾವಿ ಜಿಲ್ಲೆಯಲ್ಲಿಯೆ ಕಾಂಗ್ರಸ್ಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೊಗಬಲ್ಲ ಅದಲ್ಲದೆ ಜಿಲ್ಲೆಯ ರಾಜಕಾರಣ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಚಾಣಕ್ಯ ಸತೀಶ ಜಾರಕಿಹೋಳಿಯವರಿಗೆ ಕಾಂಗ್ರೇಸ್ ಹೈಕಮಾಂಡ್ ಒಪ್ಪಗೆ ಸೂಚಿಸಿ ಬೆಳಗಾವಿಯ ಲೊಕಸಭಾ ಉಪಚುನಾವಣೆಗೆ ಕಾಂಗ್ರೇಸ್ಸ ಅಬ್ಯರ್ಥಿಯಾಗಿ ಸ್ಪರ್ದಿಸಲು *ಬಿ* ಪಾರ್ಮ ನೀಡಿದ್ದಾರೆ.

ಅದಲ್ಲದೆ ಕಾಂಗ್ರೇಸ್ಸಿನ ಎಲ್ಲ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸತೀಶ ಜಾರಕಿಹೋಳಿಯವರನ್ನು ಕಂಡರೆ ಯುವಕರಿಗೆ ಎಲ್ಲಿಲ್ಲದ ಉತ್ಸಾಹ,ಪ್ರೀತಿ,ಹೀಗಿರುವಾಗ ಈಗ ರಾಜ್ಯ ರಾಜ್ಯ ರಾಜಕಾರಣದಿಂದ ಸಂಸತ್ ಭವನ ಪ್ರವೇಶಸಲು ಸಜ್ಜಾಗಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಮುಂದೆ ರಾಜ್ಯಕ್ಜೆ ಮುಖ್ಯಮಂತ್ರಿಯಾಗುವ ಸತೀಶ ಜಾರಕಿಹೋಳಿಯವರನ್ನು ಸಂಸತ್ ಭವನಕ್ಕೆ ಕಳಿಸುವ ಹುನ್ನಾರ ಮಾಡಿದ್ದಾರೆಂದು ಯಮಕನಮರ್ಡಿ ಕ್ಷೇತ್ರದ ಅವರ ಅಭಿಮಾನಿಗಳು ಇವರ ಸ್ಪರ್ದೆಗೆ ಮಿಶ್ರ ಪ್ರತಿಕ್ರೀಯೆ ತೊರುತಿರುವುದು ಮಾತ್ರ ಸುಳ್ಳಲ್ಲ. ಒಟ್ಟಾರೆಯಾಗಿ ಹೇಳಬೇಕಾದರೆ ಯಾವಾಗ ಯಾವ ಗಾಳವನ್ನು ಬಿಸುವ ಗೊತ್ತಿರುವ ಚಾಣಕ್ಯ ಸತೀಶ ಜರಕಿಹೋಳಿಯವರು ಎಲ್ಲವನ್ನು ಕೂಲಕುಂಷವಾಗಿ ಅರಿತಾದ ಮೇಲೆನೆ ಸ್ಪರ್ದೆ ಮಾಡುತಿದ್ದಾರೆಂದು ಅವರ ಅಪ್ತರ ಮನದಾಳದ ಮಾತು.


Spread the love

About Fast9 News

Check Also

ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

Spread the loveಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ …

Leave a Reply

Your email address will not be published. Required fields are marked *