Breaking News

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ

Spread the love

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ

ವಿಜಯಪುರ: ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಧಾಳಿ ನಡೆಸಿ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ರವಿವಾರ ರಾತ್ರಿ 9.45ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆಸಲಾಗಿದೆ. ಕನ್ನಾನ್ ನಗರದಲ್ಲಿ ತಗಡಿನ ಶೆಡ್ ವೊಂದರಲ್ಲಿ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ಸರಕಾರದ ನಾನಾ ಯೋಜನೆಗಳ ಅಡಿ ವಿತರಣೆಯಾಗಬೇಕಿದ್ದ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಧಾಳಿ ನಡೆಸಿ ರೂ. 13. 50 ಲಕ್ಷ ಮೌಲ್ಯದ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, KA-28/D-4382 ನಂಬರಿನ ಕ್ಯಾಂಟರ್ ವಾಹನವನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆಸಿದೆ.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *